ಹಾಸನ

ಸಿಗದ ಉಗ್ರಾಣ: ಜಿಲ್ಲಾಡಳಿತ ಹೈರಾಣ

- ದಯಾಶಂಕರ ಮೈಲಿ
ಕ.ಪ್ರ.ವಾರ್ತೆ    ಹಾಸನ    ಮಾ. 17
ಮಳೆಗಾಲ ಆರಂಭಕ್ಕೆ ಇನ್ನೇರಡು ತಿಂಗಳು ಇರುವಾಗಲೇ ರೈತರಿಗೆ ಅಗತ್ಯ ಪ್ರಮಾಣದ ರಸಗೊಬ್ಬರಗಳನ್ನು ಕೃಷಿ ಇಲಾಖೆ ದಾಸ್ತಾನು ಮಾಡಿಕೊಳ್ಳುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯುದ್ಧ ಕಾಲೆ ಶಸ್ತ್ರಾಭ್ಯಾಸ ಎಂಬ ನೀತಿ ಅನುಸರಿಸಿದರೇ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವ ಅಪಾಯ ಇರುತ್ತದೆ.
ಜಿಲ್ಲೆಯ ಕೃಷಿ ಇಲಾಖೆ ನಾನಾ ಕಡೆಗಳಿಂದ ಬೇಕಾಗುವ ರಸಗೊಬ್ಬರಗಳನ್ನು ತರಿಸಿಕೊಳ್ಳಲು ಮುಂದಾಗಿದೆ. ಆದರೆ ಅದನ್ನು ಕೆಲ ತಿಂಗಳು ದಾಸ್ತಾನು ಮಾಡಿಕೊಳ್ಳಲು ಬೇಕಾದ ಗೋಡೌನ್ಗಳು ಇಲ್ಲ. ಖಾಸಗಿಯವರಿಗೆ ಸೇರಿದ ಮತ್ತು ರಸಗೊಬ್ಬರ ಕಂಪನಿಗಳಿಗೆ ಸೇರಿದ ಗೋಡೌನ್ಗಳಲ್ಲಿ ದಾಸ್ತಾನು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಗೋಡೌನ್ಗಳು ದೊರೆಯುತ್ತಿಲ್ಲ. ಇದು ತಲೆನೋವಾಗಿ ಪರಿಣಮಿಸಿದೆ.
ಜಿಲ್ಲಾಡಳಿತಕ್ಕೆ ಹಿನ್ನಡೆ: ನಗರದ ಕೈಗಾರಿಕಾ ಪ್ರದೇಶದಲ್ಲಿ ಕೇಂದ್ರ ಆಹಾರ ನಿಗಮದ ಬೃಹತ್ ಉಗ್ರಾಹಣಗಳಲ್ಲಿ ರಸಗೊಬ್ಬರಗಳನ್ನು ಇಡಲು ಮಾಡಿರುವ ಜಿಲ್ಲಾಡಳಿತದ ಪ್ರಯತ್ನಕ್ಕೆ ಹಿನ್ನಡೆಉಂಟಾಗಿದೆ. ಆಹಾರ ನಿಗಮದ ಒಂದೇ ಒಂದು ಗೋಡೌನ್ ಸಿಕ್ಕಿದ್ದರೇ ಸಾಕಾಗಿತ್ತು. ಆದರೆ ಸಂಬಂಧಪಟ್ಟ ನಿಗಮದ ಅಧಿಕಾರಿಗಳು ಒಪ್ಪುತ್ತಿಲ್ಲ. ಹಾಗಾಗಿ ಇದೇ ಜಿಲ್ಲೆಯ ಲೋಕಸಭಾ ಸದಸ್ಯರಾಗಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೂಲಕ ಒತ್ತಡ ಹೇರಿ ನಿಗಮದ ಗೋಡೌನ್ ಪಡೆದುಕೊಳ್ಳುವ ಯತ್ನ ಯಶಸ್ವಿಯಾದರೆ ಸರಿ. ಇಲ್ಲದಿದ್ದರೇ ತೊಂದರೆ ಎದುರಾಗುವ ಸಾಧ್ಯತೆಗಳಿವೆ.
ಜಿಲ್ಲಾದ್ಯಂತ ಮುಂಗಾರು ಮಳೆಯನ್ನು ನಂಬಿ 3 ಸಾವಿರ ಹೆಕ್ಟೇರ್ನಲ್ಲಿ ಕೃಷಿ ಬೆಳೆ ಮತ್ತು 4 ಸಾವಿರ ಹೆಕ್ಟೇರ್ನಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಮುಂಗಾರಿಗೆ 1.15 ಲಕ್ಷ ಟನ್ ನಾನಾ ಬಗೆಯ ರಸಗೊಬ್ಬರಗಳು ಬೇಕು. ಈಗ 16 ಸಾವಿರ ಟನ್ ರಸಗೊಬ್ಬರ ದಾಸ್ತಾನು ಇದೆ ಇದಲ್ಲದೇ ಸದ್ಯದಲ್ಲೇ 36 ಸಾವಿರ ಟನ್ ರಸಗೊಬ್ಬರವನ್ನು ತರಿಸಿಕೊಳ್ಳಲಾಗುತ್ತದೆ. ಅದನ್ನು ಸೂಕ್ತ ಸ್ಥಳದಲ್ಲಿ ದಾಸ್ತಾನು ಮಾಡಿ ವಿತರಣೆ ಮಾಡಬೇಕಾಗಿದೆ. ಆದರೆ ದಾಸ್ತಾನು ಮಾಡಲು ಗೋಡೌನ್ಗಳು ಇಲ್ಲ.
ಕಾಮಗಾರಿ ಪೂರ  ಗೊಂಡಿಲ್ಲ: ಇದ್ದ ಸರ್ಕಾರಿ ಗೋಡೌನ್ ಅನ್ನು ರಿಪೇರಿ ಮಾಡಿಸಲಾಗುತ್ತಿದೆ. ಇದರ ಕಾಮಗಾರಿ ಸದ್ಯಕ್ಕೆ ಪೂರ  ಗೊಳಿಸಲು ಸಾಧ್ಯವಿಲ್ಲದೇ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಗೋಡೌನ್ ನೀಡುವಂತೆ ಖಾಸಗಿಯವರಿಗೆ ಕೋರಿಕೊಳ್ಳಲಾಗುತ್ತಿದೆ.
ಗೋಡೌನ್ ಜತೆಗೆ ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಸಿಕ್ಕಾಪಟ್ಟೆ ಇದೆ ಎಂದು ಹೇಳಬಹುದು. 340 ಮಂದಿ ಇರಬೇಕಾದ 150 ಸಿಬ್ಬಂದಿ ಮಾತ್ರ ಇದ್ದಾರೆ. 190 ಹುದ್ದೆಗಳು ಖಾಲಿ ಇವೆ. ಸುಮಾರು 3 ವರ್ಷಗಳಿಂದ. ಸ್ಥಳೀಯ ಉನ್ನತಾಧಿಕಾರಿಗಳು ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಹತ್ತಾರು ಬಾರಿ ಮಾಡಿದ ಮನವಿ ಪ್ರಯೋಜನವಾಗಿಲ್ಲ.
ಎಷ್ಟೆಷ್ಟು ಖಾಲಿ? ರೈತರೊಡನೆ ನಿರಂತರ ಸಂಪರ್ಕ ಹೊಂದಿ ಕೆಲಸ ಮಾಡಬೇಕಾದ ಕೃಷಿ ಅಧಿಕಾರಿಗಳು 9 ಮಂದಿ ಇರಬೇಕು. ಈ ಎಲ್ಲಾ ಹುದ್ದೆಗಳು ಖಾಲಿಯಾಗಿವೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಮಳೆ, ಬಿತ್ತನೆ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ನೀಡುವಂಥಹ ಮಹತ್ತರ ಕಾರ್ಯ ನಿರ್ವಹಿಸಬೇಕಾದ ಕೃಷಿ ಅಧಿಕಾರಿಗಳು 39 ಮಂದಿ ಇರಬೇಕು. ಇರುವುದು ಕೇವಲ 14 ಮಂದಿ, 25 ಹುದ್ದೆಗಳು ಖಾಲಿ. ಪ್ರತಿ ತಾಲೂಕುಗಳಲ್ಲಿ ಕೃಷಿ ಚಟುವಟಿಕೆಗಳ ಉಸ್ತುವಾರಿ ನೋಡಿಕೊಳ್ಳುವ 49 ಸಹಾಯಕ ಕೃಷಿ ಅಧಿಕಾರಿಗಳ ಪೈಕಿ 33 ಮಂದಿ ಇದ್ದು, 16 ಹುದ್ದೆಗಳು ಖಾಲಿ ಇವೆ. ಕೃಷಿ ಸಹಾಯಕರು 78 ಇರಬೇಕು.
ಇರುವುದು ಇಬ್ಬರೇ, 76 ಹುದ್ದೆಗಳು ಖಾಲಿ ಇವೆ. ಇದು ಸಿಬ್ಬಂದಿ ಕೊರತೆ ಎಷ್ಟು ಉಗ್ರವಾಗಿದೆ ಎಂಬುದಕ್ಕೆ ನಿರ್ದರ್ಶನವಾಗಿದೆ.


20 ಸಾವಿರ ಟನ್ ದಾಸ್ತಾನಿಗೆ ವ್ಯವಸ್ಥೆ
ಆಹಾರ ನಿಗಮದಲ್ಲಿ 20 ಸಾವಿರ ಟನ್ ರಸಗೊಬ್ಬರ ದಾಸ್ತಾನು ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಅರಸೀಕೆರೆ ಎಪಿಎಂಸಿ ಗೋಡೌನ್ನಲ್ಲಿ 2,800 ಟನ್ ಮತ್ತು ಸಹಕಾರ ಸಂಘಗಳಲ್ಲಿ ದಾಸ್ತಾನು ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಸನದ ಪ್ಲಾಂಟರ್ಸ್ ಕಾಫಿ ಕ್ಯೂರಿಂಗ್ ಗೋಡೌನ್ನಲ್ಲಿ 1,200 ಟನ್ ದಾಸ್ತಾನು ಮಾಡಲಾಗುತ್ತಿದೆ. ಅಲ್ಲದೇ ಚನ್ನರಾಯಪಟ್ಟಣ ಸೇರಿದಂತೆ 5 ರಿಂದ 6 ಕಡೆ ಖಾಸಗಿಯವರಿಂದ ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲು ಜಿಲ್ಲಾಧಿಕಾರಿ ಸಮ್ಮತಿ ನೀಡಿದ್ದಾರೆ. ಸದ್ಯದಲ್ಲಿ ಗೋಡೌನ್ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ರಸಗೊಬ್ಬರ ದಾಸ್ತಾನು ಮಾಡಲು ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.
- ಶಿವರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!