ಹಾಸನ

ಎತ್ತಿನಗಾಡಿ ಮಾಲೀಕರ ಪ್ರತಿಭಟನೆ

ಕ.ಪ್ರ. ವಾರ್ತೆ ಹಾಸನ ಮಾ.18
ಹೊಳೆನರಸೀಪುರ ಸುತ್ತಮುತ್ತಲಿನಲ್ಲಿ ನೂರಾರು ವರ್ಷಗಳಿಂದ ಎತ್ತಿನಗಾಡಿ ಮಾಲೀಕರು ನಡೆಸುತ್ತಿರುವ ಮರಳು ಸಾಗಾಣಿಕೆಗೆ ಅಕ್ರಮ ಮರಳುಗಾರರು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಡಾ.ಬಿ.ಆರ್.ಅಂಬೇಡ್ಕರ್ ಎತ್ತಿನಗಾಡಿ ಯುವಕರ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
 ಪುರಾತನಕಾಲದಿಂದಲೂ ಹೊಳೆನರಸೀಪುರ ಹೇಮಾವತಿ ಹೊಳೆ ಸುತ್ತಮುತ್ತ ಕಡವಿನ ಹೊಸಹಳ್ಳಿ, ಸೂರನಹಳ್ಳಿ ಭಾಗಗಳಲ್ಲಿ ಎತ್ತಿನಾಗಡಿ ಮಾಲೀಕರು ಹೊಳೆನರಸೀಪುರಕ್ಕೆ ಮರಳನ್ನು ಸಾಗಿಸಿಕೊಂಡು ಜೀವನ ನಡೆಸುತ್ತಾ ಬಂದಿದ್ದಾರೆ. ಇವರೆಲ್ಲ ತುಂಬಾ ಬಡವರಾಗಿದ್ದು, ಈ ಕಸುಬು ಬಿಟ್ಟರೆ ಬೇರೆ ಯಾವುದೇ ರೀತಿಯ ಉದ್ಯೋಗವಾಗಲೀ, ಜಮೀನಾಗಲೀ ಇಲ್ಲ. ಈಗ ಕೆಲವು ಬಂಡವಾಳಶಾಹಿಗಳು ಹಣ ಗಳಿಸುವ ಸಲುವಾಗಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮರಳುಗಾರರು ಜೆಸಿಬಿ, ಹಿಟಾಚಿ ಯಂತ್ರಗಳನ್ನು ಹೊಳೆಗೆ ಇಳಿಸಿ ಮರಳು ದಂದೆ ನಡೆಸುತ್ತಿದ್ದಾರೆ. ಅಕ್ರಮ ಮರಳು ದಂದೆ ಕಾನೂನು ಬಾಹಿರವಾಗಿದ್ದರೂ ರಾಜಾರೋಷವಾಗಿ ಮರಳು ದಂದೆ ನಡೆಸುತ್ತಿದ್ದಾರೆ. ಆದ್ದರಿಂದ ಅಕ್ರಮ ಮರಳು ದಂದೆ ಕೋರರನ್ನು ಕಾನೂನು ರೀತ್ಯ ಬಂಧಿಸಿ ಹಾಗೂ ಅವರು ಮರಳು ದಂದೆಗೆ ಬಳಸುತ್ತಿರುವ ವಾಹನಗಳನ್ನು ಸೀಜ್ ಮಾಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಪ್ರತಿಭಟನೆಯಲ್ಲಿ ವೈರಮುಡಿ, ರವಿ, ವಸಂತ್‌ಕುಮಾರ್, ಗಂಗರಾಜು, ಕೇಶವ, ಹರೀಶ್, ಗಂಗಾ, ಶಂಖರ್, ರಂಗಸ್ವಾಮಿ, ಬಾಬು, ನಂಜುಂಡ, ಸಂತೋಷ್, ಶಿವಶಂಕರ್, ಮಂಜು, ವಿಶ್ವನಾಥ್, ರಮೇಶ್ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ