ಹಾಸನ

ಹಳೇ ಬಸ್ ನಿಲ್ದಾಣ ತೆರವಿಗೆ ಸಾರ್ವಜನಿಕರ ವಿರೋಧ

ಕ.ಪ್ರ. ವಾರ್ತೆ೤ ಹಾಸನ೤ ಮಾ 30
ನಗರದ ಹೃದಯ ಭಾಗದಲ್ಲಿರುವ ಹಳೆ ಬಸ್ ನಿಲ್ದಾಣ ತೆರವುಗೊಳಿಸುವ ಕಾರ್ಯಾಚರಣೆಯನ್ನು ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಶನಿವಾರ ಸ್ಥಗಿತ ಗೊಳಿಸಲಾಯಿತು.
ಬೆಳಗ್ಗೆ ನಿಲ್ದಾಣ ತೆರವುಗೊಳಿಸುವ ಸಂಬಂಧ ಕಟ್ಟಡಗಳನ್ನು ಕಾರ್ಮಿಕರು ಕೆಡವಲು ಪ್ರಾರಂಭಿಸಿದರು. ಆದ ಕಾರಣ ಬಸ್ ನಿಲ್ದಾಣದೊಳಕ್ಕೆ ಯಾವುದೇ ಬಸ್‌ಗಳನ್ನು ಬರಲು ಬಿಡದೆ ಪ್ರವೇಶ ನಿರ್ಬಂಧಿಸಿ ನಿಲ್ದಾಣ ಮುಂಭಾಗದಲ್ಲಿರುವ ಆಟೋ ಸ್ಟಾಂಡ್ ಪಕ್ಕದಲ್ಲಿಯೇ ಗ್ರಾಮಾಂತರ ಹಾಗೂ ನಗರಸಾರಿಗೆ ಬಸ್‌ಗಳ ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು.
ಆಟೋಗಳ ನಿಲುಗಡೆಗೆ ಇದ್ದಂತಹ ಅಲ್ಪಸ್ವಲ್ಪ ಜಾಗದಲ್ಲಿಯೇ ಬಸ್ ಹಾಗೂ ಆಟೋಗಳು ಸಂಚರಿಸಲು ಸಾಧ್ಯವಾಗದೆ ತೊಂದರೆ ಉಂಟಾಗಿತ್ತು. ಇದರಿಂದ ಅಸಮಧಾನ ವ್ಯಕ್ತಪಡಿಸಿದ ಸಾರ್ವಜನಿಕರು ಹಳೆ ಬಸ್ ನಿಲ್ದಾಣ ಮುಂಭಾಗ ಪ್ರತಿಭಟನೆ ನಡೆಸಿದ, ಕೂಡಲೇ ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆ ನಿಲ್ಲಿಸುವಂತೆ ಆಗ್ರಹಿಸಿದರು.  ನಿಲ್ದಾಣದಲ್ಲಿ ಗ್ರಾಮಾಂತರ ಹಾಗೂ ನಗರ ಸಾರಿಗೆ ಬಸ್‌ಗಳು ಸುಗಮವಾಗಿ ಸಂಚರಿಲು ಪ್ರತ್ಯೇಕ ವ್ಯವಸ್ಥೆಯನ್ನು ಕಲ್ಪಿಸದೇ ಏಕಾಏಕಿ ಈ ರೀತಿ ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆ ಮಾಡುತ್ತಿರುವುದು ಸರಿಯಲ್ಲ ಎಂದ ಸಾರ್ವಜನಿಕರು, ಬಸ್‌ಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ನಂತರ ಮುಂದಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪಿಕ್ಚರ್ ಪ್ಯಾಲೇಸ್  ಗುರೂಜಿ, ಮಂಜುನಾಥ್, ಪ್ರವೀಣಕುಮಾರ್, ಮೋಹನ್, ಸಂತೋಷ್, ನವೀನ್‌ಕುಮಾರ್ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್