ಹಾಸನ

ನೆಮ್ಮದಿಯ ಬದುಕಿಗೆ ಧರ್ಮ ದಿಕ್ಸೂಚಿ: ಆದಿಚುಂಚನಗಿರಿ ಶ್ರೀ

ಕ.ಪ್ರ.ವಾರ್ತೆ     ರಾಮನಾಥಪುರ     ನ. 6
ಇಂದಿನ ವೈಚಾರಿಕ ಹಾಗೂ ವೈಜ್ಞಾನಿಕ ಪ್ರಪಂಚದಲ್ಲಿ ಧಾರ್ಮಿಕ ಸಂದೇಶಗಳನ್ನು ಉಪೇಕ್ಷೆ ಮಾಡುವುದು ಒಳ್ಳೆಯದಲ್ಲ. ಶಾಂತಿ ನೆಮ್ಮದಿಯ ಬದುಕಿಗೆ ಮತ್ತು ಉನ್ನತಿಗೆ ಧರ್ಮ ದಿಕ್ಸೂಚಿಯಾಗಿದೆ. ಸಂಪ್ರದಾಯಗಳನ್ನು ಮರೆಯದೆ ಉಳಿಸಿಕೊಂಡು ಬರುವುದು ಅಗತ್ಯ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.  
ಇಲ್ಲಿಯ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಪಟ್ಟಾಭಿರಾಮ ಪ್ರೌಢಶಾಲಾವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಹಾಗೂ ಎ.ಮಂಜು ಹುಟ್ಟುಹಬ್ಬ ಸಮಾರಂಭದಲ್ಲಿ ಆಶೀರ್ವಚನ ನೀಡಿ, ದೂರದೃಷ್ಟಿ ಹೊಂದಿರುವ ವ್ಯಕ್ತಿ ಸಮಾಜಕ್ಕೆ ನೆರವಾಗುವ ಕೆಲಸವನ್ನು ನಿರ್ವಹಿಸುತ್ತಾನೆ ಎಂದರು.
ಶ್ರದ್ಧೆಯಿಂದ ಸಂಸ್ಕಾರ ವಿಕಾಸಗೊಳ್ಳುವುದರಿಂದ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುತ್ತದೆ. ರಾಜ್ಯೋತ್ಸವ ಆಚರಣೆ ನ.1ನೇ ತಾರೀಖಿಗೆ ಸೀಮಿತಗೊಳ್ಳದೆ ಇಡಿ ವರ್ಷಾಚರಣೆಯಾಗಬೇಕಿದೆ. ದೇಶದಲ್ಲಿ 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಭಾಷೆಗೆ ಬಂದಿರುವುದು ಕನ್ನಡಿಗರ, ಕನ್ನಡ ಭಾಷೆಯ ಹಿರಿಮೆಗೆ ಪ್ರತೀಕವಾಗಿದೆ. ನಮ್ಮ ಮಾತೃಭಾಷೆಯನ್ನು ಕಲಿಯುವ ಜತೆಗೆ ಇತರೆ ಭಾಷೆಗಳನ್ನೂ ಪ್ರೀತಿಸಬೇಕಿದೆ. ಶಕ್ತಿಯ ರಾಶಿ ಮನುಷ್ಯನಲ್ಲಿ ಅಡಕವಾಗಿರುವುದರಿಂದ ತನ್ನ ಜೀವಿತಾವಧಿಯಲ್ಲಿ ಹೆಚ್ಚು ಸಮಾಜಮುಖಿ ಸೇವೆ ಮೈಗೂಡಿಸಿಕೊಂಡು ಸಾರ್ಥಕತೆ ಕಾಣಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಚಿಲುಮೆ ಮಠಾಧೀಶ ಶ್ರೀ ಜಯದೇವ ಸ್ವಾಮೀಜಿ, ಸಾರ್ವಜನಿಕರೊಂದಿಗೆ ಅಭೂತಪೂರ್ವವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವ ಭಾಗ್ಯ ಎಲ್ಲರಿಗೂ ಬರುವುದಿಲ್ಲ. ಶಾಸಕ ಮಂಜು ಜನ್ಮದಿನವನ್ನು ಅಭಿಮಾನಿಗಳು ಅದ್ಧೂರಿಯಾಗಿ ಆಯೋಜಿಸಿರುವುದು ಅತ್ಯಂತ ಸಂತಸದ ಸಂಗತಿ ಎಂದರು.
ಶಾಸಕ ಮಂಜು ಮಾತನಾಡಿ, ಪರಮ ಪೂಜ್ಯರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಿಲ್ಲ. ಇಂಥದರಲ್ಲಿ ನನ್ನ ಜನ್ಮದಿನವನ್ನು ಹತ್ತಾರು ಶ್ರೀಗಳ ಆಶೀರ್ವಾದದೊಂದಿಗೆ ಅಭಿಮಾನಿಗಳು ಹಮ್ಮಿಕೊಂಡಿರುವುದು ಜವಾಬ್ದಾರಿ ಹೆಚ್ಚಿಸಿದೆ. ನನ್ನ ಕ್ಷೇತ್ರದ ಜನತೆಯ ವಿಶ್ವಾಸ ಉಳಿಸಿಕೊಳ್ಳುವ ಕೆಲಸವನ್ನು ಅಧಿಕಾರಾವಧಿಯಲ್ಲಿ ನಿರ್ವಹಿಸುವೆ ಎಂದರು.
ಹಾಸನ ಆದಿಚುಂಚನಗಿರಿ ಶಾಖಾಮಠಾಧೀಶ ಶ್ರೀಶಂಭುನಾಥ ಸ್ವಾಮೀಜಿ, ಕೆಸವತ್ತೂರು ಮಠಾಧೀಶ ಶ್ರೀಬಸವರಾಜೇಂದ್ರ ಸ್ವಾಮೀಜಿ, ಟಿ.ಮಾಹಿಗೌಡನಹಳ್ಳಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ತೇಜೂರು ಮಠ ಶ್ರೀಕಲ್ಯಾಣ ಸ್ವಾಮೀಜಿ, ಶಿರದನಹಳ್ಳಿ ಬಸವಕಲ್ಯಾಣಮಠ ಶ್ರೀಸಿದ್ಧಲಿಂಗ ಸ್ವಾಮೀಜಿ ಆಶೀರ್ವಜನ ನೀಡಿದರು.
ಕಾಂಗ್ರೆಸ್ ಮುಖಂಡರಾದ ಹೊಳೆನರಸಿಪುರ ಅನುಪಮ, ಮಹೇಶ್, ಜಾವಗಲ್ ಮಂಜುನಾಥ್, ತಾಲೂಕು ಮಾಜಿ ಅಧ್ಯಕ್ಷ ಲೋಕನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಗೆರೆ ಭೈರೇಗೌಡ, ಹೋಬಳಿ ಅಧ್ಯಕ್ಷ ಜಿ.ಸಿ.ಮಂಜೇಗೌಡ, ಹಾರಂಗಿ ಮಹಾ ಮಂಡಳ ಅಧ್ಯಕ್ಷ ಚೌಡೇಗೌಡ, ಪಿಎಸಿಸಿ ಮಾಜಿ ಅಧ್ಯಕ್ಷ ಮಲ್ಲೇಶ್, ಸದಸ್ಯ ಗಂಗೂರು ಕುಮಾರಸ್ವಾಮಿ, ಯುವ ಮುಖಂಡರದ ಕೋಟವಾಳ್ ಮಹಾದೇವ ಲೋಕೇಶ್, ಭರತ್, ಜಾನಿ, ಜಯಪ್ರಕಾಶ್, ಮುತ್ತಿಗೆ ರಮೇಶ್, ತಾಲೂಕು ಬ್ಲಾಕ್ ಯುವ ಅಧ್ಯಕ್ಷ ದೊಡ್ಡಮಗ್ಗೆ ಮಂಜುನಾಥ್, ತಾಪಂ ಅಧ್ಯಕ್ಷೆ ಸರಸ್ವತಿ ನಾಗೇಗೌಡ, ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಂಬಶಿವಪ್ಪ, ಕೆಪಿಸಿಸಿ ಸದಸ್ಯ ಮೋಹನ್, ತಾಲೂಕು ಸಂಘದ ಅಧ್ಯಕ್ಷ ಬೊಮ್ಮನಹಳ್ಳಿ ಕೃಷ್ಣ ಇತರರು ಇದ್ದರು. ಗೋವಿಂದರಾಜು ಸ್ವಾಗತಿಸಿ, ಹೊಯ್ಸಳ ನಿರೂಪಿಸಿದರು. ಸಾಹಿತಿ ಆಸಿಂ ವಂದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT