ಜಾವಗಲ್: ಆಧುನಿಕ ಸಮಾಜದ ಪರಂಪರೆ ಸಂಸ್ಕೃತಿಗೆ ಒಗ್ಗಿಕೊಂಡು ಮುಖ್ಯ ವಾಹಿನಿಗೆ ಬರುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್ ತಿಳಿಸಿದರು. ಜಾವಗಲ್ ಸಮೀಪದ ಕೆ.ಗೊಲ್ಲರಹಟ್ಟಿ ಗ್ರಾಮದಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಹಾಗೂ ಕೋಳಗುಂದ ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಾಮಾಜಿಕ ಪಿಡುಗು ನಿವಾರಣಾ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೌಢ್ಯದಿಂದ ದೂರವಿರಿ: ಆಚಾರ, ವಿಚಾರ, ಮೌಢ್ಯ, ಕಂದಾಚಾರವನ್ನು ದೂರ ಮಾಡಬೇಕಾದ ಅನಿವಾರ್ಯತೆ ಇದೆ. ಮೌಢ್ಯ,ಕಂದಾಚಾರ ಜೀವಂತವಾಗಿಡುವ ಕೆಲಸ ಮಾಡಬಾರದು. ಈ ವಿಚಾರದಲ್ಲಿ ಮಹಿಳೆಯರು ಧೈರ್ಯವಾಗಿ ಮುಂದೆಬರಬೇಕು ಎಂದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಚಿದಾನಂದ ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಪರಪ್ಪ, ಜಿ.ಪಂ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಸಬ್ಇನ್ಸ್ಪೆಕ್ಟರ್ ರವಿಕುಮಾರ್ ಗ್ರಾಪಂ ಮಾಜಿ ಸದಸ್ಯ ಮಹಾಲಿಂಗಪ್ಪ, ಗ್ರಾಮದ ಹಿರಿಯರಾದ ಸಣ್ಣಪ್ಪ, ರಾಜಮ್ಮ, ಮಾಳಪ್ಪ, ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಸಣ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಜಿಲ್ಲಾ ಅಲ್ಪ ಸಂಖ್ಯಾತ ಸಮಾಜ ಇಲಾಖಾಧಿಕಾರಿ ಜಗದೀಶ್, ತಾ. ಕಾರ್ಯನಿರ್ವಹಣಾಧಿಕಾರಾ ಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜ್, ಗ್ರಾಪಂ. ಉಪಾಧ್ಯಕ್ಷ ಹಾಲಪ್ಪ ಡಾ.ಗೀತಾ, ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಶಬೀರ್ ಅಹಮದ್ ಎ.ಪಿಎಂಸಿ ಮಾಜಿ ಅಧ್ಯಕ್ಷ ಮಹದೇವಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷೆ ಹೇಮಾವತಿ ಮಹಾಲಿಂಗಪ್ಪ ಇದ್ದರು.