ಹಾಸನ: ಕೊಲೆ ಆರೋಪಿಗಳನ್ನು ಖಾಸಗಿ ವಾಹನದಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋದ ಆರೋಪದ ಮೇರೆಗೆ ಸಕಲೇಶಪುರ ತಾಲೂಕು ಯಸಳೂರು ಪೊಲೀಸ್ ಠಾಣೆಯ ಪೇದೆ ವೇಣುಗೋಪಾಲ್ ಎಂಬುವರನ್ನು ಸೇವೆಯಿಂದ ಬುಧವಾರ ಸಂಜೆ ಅಮಾನತು ಮಾಡಲಾಗಿದೆ. 2008 ರಲ್ಲಿ ಕೊಲೆಯಾಗಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದ 6 ಮಂದಿ ಆರೋಪಿಗಳನ್ನು ಖಾಸಗಿ ವಾಹನದಲ್ಲಿ ಕರೆದುಕೊಂಡು ಹೋಗುವ ಮೂಲಕ ಪೇದೆ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಸಕಲೇಶಪುರ ವಿಭಾಗದ ಡಿವೈಎಸ್ಪಿ ಸ್ನೇಹ ವರದಿ ನೀಡಿದ್ದರು. ವರದಿ ಆಧಾರದ ಮೇಲೆ ಪೇದೆಯನ್ನು ಅಮಾನತು ಮಾಡಲಾಗಿದೆ ಎಂದು ಹೆಚ್ಚುವರಿ ಎಸ್ಪಿ ರಶ್ಮಿ ಜೈನಹಳ್ಳಿ ತಿಳಿಸಿದ್ದಾರೆ.