ಹಾಸನ

ಸಾವಯವ ಕೃಷಿಯಿಂದ ಲಾಭ

ಹಾಸನ: ಕರ್ನಾಟಕ ಸರ್ಕಾರ ಸಾವಯವ ಭಾಗ್ಯ ಯೋಜನೆ ಜಾರಿಗೊಳಿಸಿದ್ದು, ರಾಜ್ಯದ ಪ್ರತಿ ಹೋಬಳಿಯ ಒಂದೊಂದು ಗ್ರಾಮದ 100 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಿಸುವ ಕಾರ್ಯಕ್ರಮ ಮಾಡುತ್ತಿದೆ ಎಂದು ಕೃಷಿ ಇಲಾಖೆ ಜಿಲ್ಲಾ ನೋಡಲ್ ಅಧಿಕಾರಿ ಎನ್.ಸಿ. ನಾಗರಾಜು ತಿಳಿಸಿದರು. ಹಾಸನ ತಾಲೂಕು ಕಟ್ಟಾಯ ಹೋಬಳಿ ಅಂಕನಹಳ್ಳಿಯಲ್ಲಿ ಕೃಷಿ ಇಲಾಖೆ, ಜೀವವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್ , ಜೈವಿಕ ಕೃಷಿಕರ ಸಂಘದ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಾವಯವ ಕೃಷಿ ಕಾರ್ಯಾಗಾರದಲ್ಲಿ ಮಾತನಾಡಿ, ಈ ಯೋಜನೆಗೆ ಕಟ್ಟಾಯ ಹೋಬಳಿಯಿಂದ ಅಂಕನಹಳ್ಳಿ ಗ್ರಾಮ ಆಯ್ಕೆಯಾಗಿದೆ ಎಂದರು. ಹಸಿರೆಲೆ ಗೊಬ್ಬರ ಬೀಜ ವಿತರಣೆ, ಕಾಂಪೋಸ್ಟ್ ಘಟಕ, ಎರೆಹುಳು ಘಟಕ, ಗಂಜಲ ಸಂಗ್ರಹಿಸುವ ತೊಟ್ಟಿ, ಅಝೋಲಾ ಘಟಕ ಇನ್ನಿತರೆ ಕಾರ್ಯಕ್ರಮಗಳಿಗೆ ಶೇ.50 ರ ಸಹಾಯಧನವನ್ನು ರೈತರಿಗೆ ನೀಡುತ್ತಿದೆ ಎಂದರು. ಪ್ರಗತಿಪರ ರೈತ ಸಂತೆಶಿವ ಬಸವರಾಜು, ಹಾಸನ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಕೆ. ನಾಗರಾಜಯ್ಯ, ವಿ. ನಾಗರಾಜು, ಗ್ರಾಪಂ ಅಧ್ಯಕ್ಷ  ರಾಮೇಗೌಡ ಮಾತನಾಡಿದರು. ಎಸ್. ನಾಗರಾಜು ಅಧ್ಯಕ್ಷತೆ ವಹಿಸಿದ್ದರು.
ತ್ಯಾಜ್ಯ ವಿಲೇ ಘಟಕಕ್ಕೆ ಭೇಟಿ
ಸಕಲೇಶಪುರ: ತಾಲೂಕಿನ ಮಳಲಿ ಗ್ರಾಮದಲ್ಲಿ ಹಲವು ಕೋಟಿ ರು. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಪಟ್ಟಣದ ಪುರಸಭೆ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಆಜಾದ್ ರಸ್ತೆಯ ಹೇಮಾವತಿ ತೀರದ ಬಳಿಯಿರುವ ಹಿಂದೂ ರುದ್ರಭೂಮಿಯಲ್ಲಿ ಪುರ ಸಭೆಯ ತ್ಯಾಜ್ಯವನ್ನು ಕಳೆದ 15 ವರ್ಷಗಳಿಂದ ಸುರಿಯಲಾಗುತ್ತಿದೆ. ಇಲ್ಲಿ ಸುರಿಯ ಬಾರದೆಂದು ಅಲ್ಲಿನ ನಿವಾಸಿಗಳು ಕಳೆದ ಒಂದು ತಿಂಗಳಿನಿಂದ  ವಿರೋಧ ವ್ಯಕ್ತಪಡಿಸುತ್ತಿದ್ದರು. ಇದರಿಂದ ನೂತನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ಮಾಡಿದರು. ಕಾಮಗಾರಿ ಬಗ್ಗೆ ಮುಖ್ಯಾಧಿಕಾರಿ ನಾಗಶೆಟ್ಟಿ, ಆರೋಗ್ಯ ನಿರೀಕ್ಷಕ ಮಂಜುನಾಥ್,  ಪುರಸಭೆ ಮುಖ್ಯ ಎಂಜಿನಿಯರ್ ಚಂದ್ರಶೇಖರ್, ಪರಿಸರ ಎಂಜಿನಿಯರ್ ಲಕ್ಷ್ಮೀಶ್, ರೇವಣ್ಣ ಇದ್ದರು.
ಪ್ರತಿಭಾ ಪುರಸ್ಕಾರಕ್ಕೆ ಆಹ್ವಾನ
ಹಾಸನ: ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ 2013-14ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 90ರಷ್ಟು ಅಂಕ ಪಡೆದ ಹಾಸನ ಜಿಲ್ಲೆಯ ವೀರಶೈವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಮಾಡಲಾಗುವುದು. ಆಸಕ್ತ ವೀರಶೈವ ಸಮಾಜದ ವಿದ್ಯಾರ್ಥಿಗಳು ಜು. 25ರೊಳಗೆ ಅರ್ಜಿ, ಅಂಕಪಟ್ಟಿ, ವರ್ಗಾವಣೆ ಪತ್ರದ ದೃಢೀಕರಿಸಿದ ಜೆರಾಕ್ಸ್ ಪ್ರತಿಯನ್ನು ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು, ಜಿಲ್ಲಾ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಥವಾ ಮುಖ್ಯೋಪಾಧ್ಯಾಯರು, ಬಸವರಾಜೇಂದ್ರ ಪ್ರೌಢಶಾಲೆ, ಈದ್ಗಾ ಎದುರು, ಹೊಸಲೈನ್ ರಸ್ತೆ, ಹಾಸನ. ಇಲ್ಲಿಗೆ ಸಲ್ಲಿಸಲು ಕೋರಲಾಗಿದೆ.  ಮಾಹಿತಿಗೆ ಅಧ್ಯಕ್ಷರು, ಮೊ. 9980140476, ಕಾರ್ಯದರ್ಶಿ 9448220850 ಇವರಲ್ಲಿ ಮಾಹಿತಿ ಪಡೆಯಲು ಕೋರಲಾಗಿದೆ.
ಪ್ರಶಿಕ್ಷಣ ಕಾರ್ಯಕ್ರಮ
ಹಾಸನ: ಆಧುನಿಕ ಜಗತ್ತಿಗೆ ಸವಾಲೆಸೆಯುತ್ತಿರುವ ಆರೋಗ್ಯ ಸಮಸ್ಯೆಗಳು ಜೀವನ ಶೈಲಿಯ ವಿಷಮತೆಯಿಂದ ಉಂಟಾಗುವ ಸಮಸ್ಯೆಗಳಾಗಿದ್ದು, ಅವುಗಳನ್ನು ನಿವಾರಿಸಲು ಆರೋಗ್ಯವಲಯ ಅಹರ್ನಿಷಿ ಶ್ರಮಿಸುತ್ತಿದೆ ಎಂದು ಮಹಾರಾಷ್ಟ್ರದ ಆಯುಷ್ ಇಲಾಖೆ ನಿರ್ದೇಶಕ ಡಾ. ಕುಲದೀಪ್ ರಾಜ್ ಕೊಹ್ಲಿ ತಿಳಿಸಿದರು. ನಗರದ ಧರ್ಮಸ್ಥಳ ಮಂಜುನಾಥೇಶ್ವರ  ಆಯುರ್ವೇದ ಕಾಲೇಜಿನಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರದ ಆಯುಷ್ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಪ್ರಾಯೋಜಿಸಿದ ರಾಷ್ಟ್ರಮಟ್ಟದ ಸ್ವಸ್ಥವೃತ್ತ ವಿಭಾಗದ ಉಪನ್ಯಾಸಕರ ಆರು ದಿನಗಳ ನಿರಂತರ ಪ್ರಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಾಲೇಜಿನ ಆಡಳಿತ ವಿಭಾಗದ ಡೀನ್ ಡಾ. ಟಿ.ಬಿ. ತ್ರಿಪಾಠಿ, ಅತಿಥಿ ಉಪನ್ಯಾಸ ನೀಡಲು ಆಗಮಿಸಿದ್ದ ವಾರಣಾಸಿಯ ಡಾ. ಮಂಗಳ ಗೌರಿ ರಾವ್, ಜೈಪುರದ ಡಾ. ಕಮಲೇಶ್ ಕುಮಾರ್ ಶರ್ಮಾ ಇದ್ದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಪ್ರಸನ್ನ ನರಸಿಂಹರಾವ್ ಮಾತನಾಡಿದರು. ಕಾರ್ಯಾಗಾರದಲ್ಲಿ ಭಾರತದ 12 ರಾಜ್ಯಗಳಿಂದ 30 ಜನ ಸ್ವಸ್ಥವೃತ್ತ ವಿಭಾಗದ ಉಪನ್ಯಾಸಕ ವೈದ್ಯರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್