ಹಾಸನ: ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಶೇಷ ಘಟಕ ಯೋಜನೆಯಡಿ 8 ಜನರಿಗೆ ತಲಾ 1 ಲಕ್ಷರು.ನಂತೆ ಫೆಲೋಶಿಪ್ ನೀಡಲು ಉದ್ದೇಶಿಸಿದ್ದು, ಅರ್ಹತೆಯುಳ್ಳವರಿಂದ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಮಾತ್ರ ಅರ್ಜಿ ಹಾಕತಕ್ಕದ್ದು (ಸಂಬಂಧಪಟ್ಟ ಜಾತಿಪ್ರಮಾಣದ ದೃಢೀಕೃತ ಪ್ರತಿ ಲಗತ್ತಿಸಿರಬೇಕು), ಯಾವುದೇ ಪದವಿ ಪಡೆದವರು ಅರ್ಜಿ ಹಾಕಬಹುದು (ಪ್ರಮಾಣಪತ್ರದ ದೃಢೀಕೃತ ಪ್ರತಿ ಲಗತ್ತಿಸಬೇಕು), ನಿಗದಿತ ಅರ್ಜಿಯನ್ನು ಸ್ವವಿಳಾಸವಿರುವ ಅಂಚೆ ಲಕೋಟೆ ಇಟ್ಟು ಅಕಾಡೆಮಿಯಿಂದ ಪಡೆಯಬಹುದು. ನಿರ್ದಿಷ್ಟ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದವರು, ಪದವಿ ಪಡೆಯದಿದ್ದರೂ ಅರ್ಜಿ ಹಾಕಬಹುದು. 20-50 ವಯೋವಾನದ ಒಳಗಿನವರು ಸಂಬಂಧಿಸಿದ ಎಸ್ಎಸ್ಎಲ್ಸಿ ದೃಢೀಕೃತ ಅಂಕಪಟ್ಟಿಯನ್ನು ಲಗತ್ತಿಸಿರಬೇಕು, ಈ ಕೆಳಕಂಡ ವಿಷಯಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ಆಯ್ಕೆ ಮಾಡಿ ಸಾರಲೇಖವನ್ನು (ಖಣಟ್ಟಿಠಡ್ಝಡ) 4-5 ಪುಟಗಳವರೆಗೆ ಸಿದ್ಧಪಡಿಸಿ ಆಗಸ್ಟ್ 15ರೊಳಗೆ ಅಕಾಡೆಮಿಗೆ ಸಲ್ಲಿಸಬೇಕು. ವಿವರಗಳಿಗೆ 080-22211730, 22106460 ಸಂಪಕಿಸಿ.