ಹಾಸನ

ಪೌರ ಕಾರ್ಮಿಕರ ಮುಷ್ಕರ ಮುಂದೂಡಿಕೆ

ಹಾಸನ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ  ಪೌರ  ಕಾರ್ಮಿಕರು  ನಗರಸಭೆ ಆವರಣದಲ್ಲಿ   5 ದಿನ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿಯನ್ನು ಶುಕ್ರವಾರ ಮುಂದೂಡಲಾಯಿತು.
 ಗುತ್ತಿಗೆ ಮುನಿಸಿಪಲ್ ಕಾರ್ಮಿಕರಿಗೆ ಬಾಕಿ ವೇತನ, ಸರ್ಕಾರದ ಆದೇಶದಂತೆ ತುಟ್ಟಿಭತ್ಯೆ ಸಹಿತ ವೇತನ ಹಾಗೂ ಇತರೆ ಸೇವಾ ಸೌಲಭ್ಯಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿದರು.
2 ತಿಂಗಳ ವೇತನ ಪಾವತಿ: ಕಳೆದ 5 ದಿವಸಗಳಿಂದ ಪೌರಕಾರ್ಮಿಕರು ಯಾವುದೇ ಕೆಲಸ ಮಾಡದೆ ಸ್ಥಗಿತಗೊಳಿಸಿ ನಗರಸಭೆ ಆವರಣದಲ್ಲಿ ಮುಷ್ಕರ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಬಾಕಿ ಇದ್ದ ಮೇ ಮತ್ತು ಜೂನ್ ಎರಡು ತಿಂಗಳ ಸಂಬಳವನ್ನು ನೀಡಲಾಯಿತು.
 ಆದರೆ ನಗರಸಭೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೈರ್ಮಲ್ಯ (ಕಸ ವಿಲೇವಾರಿ) ಹಾಗೂ ನೀರು ನಿರ್ವಹಣೆ ವಿಭಾಗದ ಪೌರ ಕಾರ್ಮಿಕರಿಗೆ ಕಳೆದ ಏಪ್ರಿಲ್‌ನಿಂದ ಹೆಚ್ಚಾಗಿರುವ ತುಟ್ಟಿಭತ್ಯೆಯನ್ನೂ ಪಾವತಿಸಿಲ್ಲ.  ಮೂರು ವರ್ಷಗಳಿಂದ ಕಾರ್ಮಿಕರಿಗೆ ಭವಿಷ್ಯ ನಿಧಿ ಹಣ ಪಾವತಿಸಿಲ್ಲ. ಯಾವುದೇ ಕಾರ್ಮಿಕರಿಗೆ ಮತ್ತು ಇಎಸ್‌ಐ ಸೌಲಭ್ಯ ನೀಡಿಲ್ಲ. ಮೇಸ್ತ್ರಿಗಳಿಗೆ, ಕುಶಲ ಕಾರ್ಮಿಕರಿಗೆ ನೀಡುವ ವೇತನ ಮತ್ತು ಅವರಿಗೆ ಕೊಡಬೇಕಿರುವ ಪೆಟ್ರೋಲ್ ಮತ್ತು ಮೊಬೈಲ್ ಕರೆನ್ಸಿ ಭತ್ಯೆಗಳನ್ನು ನೀಡಿಲ್ಲ.
ಆಯುಕ್ತರು ಮೌನ: ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಉಸ್ತುವಾರಿ ನೋಡಿಕೊಳ್ಳಲು ಗುತ್ತಿಗೆದಾರರಾಗಲೀ ಅಥವಾ ಅಧಿಕೃತ ಪ್ರತಿನಿಧಿಗಳಾಗಲೀ ಹಾಜರಿರುವುದಿಲ್ಲ. ಕೆಲಸದ ಸ್ಥಳದಲ್ಲಿ ರಕ್ಷಣೆಯಿಲ್ಲದೆ ಕಾರ್ಮಿಕರಿಗೆ ತುಂಬಾ ಅನ್ಯಾಯವಾಗುತ್ತಿದ್ದು, ಈ ಬಗ್ಗೆ ನಗರಸಭೆ ಆಯುಕ್ತರಿಗೆ 15 ದಿನಗಳ ಹಿಂದೆಯೇ ಮನವಿ ಮಾಡಿಕೊಂಡಿದ್ದರೂ ಯಾವುದೇ ಸಮಸ್ಯೆಗಳಿಗೆ ಪರಿಹಾರ ದೊರಕಿರುವುದಿಲ್ಲ ಎಂದು ದೂರಿ ಇಂದು ತಾತ್ಕಲಿಕವಾಗಿ ತಮ್ಮ ಮುಷ್ಕರವನ್ನು ಮುಂದೂಡಿದ್ದಾರೆ.
 ಮುನಿಸಿಪಲ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಧರ್ಮೇಶ್ ಪತ್ರಕರ್ತರೊಂದಿಗೆ ಮಾತನಾಡಿ, ಜು. 23ರ ರಂದು ನಗರಸಭೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನಿಸುವ ಭರವಸೆಯೊಂದಿಗೆ ತಮ್ಮ ಮುಷ್ಕರವನ್ನು ಕೈ ಬಿಟ್ಟಿದ್ದೇವೆ. ಕಾರ್ಮಿಕರ ಪರ ಸಭೆ ತೀರ್ಮಾನ ಮಾಡದಿದ್ದರೇ ಮತ್ತೆ ತಮ್ಮ ಧರಣಿಯನ್ನು ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ