ಹಾಸನ

102 ಎಕರೆಗೆ ಹಾನಿ

ಚನ್ನರಾಯಪಟ್ಟಣ: ಪಟ್ಟಣದ ಹೊರಭಾಗದಲ್ಲಿ ಹಾದುಹೋಗಿರುವ ಹೇಮಾವತಿ ಎಡದಂಡೆ ನಾಲೆ ಒಡೆದ ಪರಿಣಾಮ 102 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಹಲವು ಬೆಳೆಗಳು ಹಾಳಾಗಿರುವ ಅಂದಾಜು ಮಾಡಲಾಗಿದೆ ಎಂದು ತಹಸೀಲ್ದಾರ್ ಕೆ. ಕೃಷ್ಣ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿ, ನಾಲೆ ಒಡೆದು ರಭಸವಾಗಿ ನೀರು ಹರಿದ ಪರಿಣಾಮ ನಾಗಸಮುದ್ರ, ಮಾರೇನಹಳ್ಳಿ ಯಾಚೇನಹಳ್ಳಿ, ಡಿ.ಕಾಳೇನಳ್ಳಿ, ಗದ್ದೆಬಿಂಡೇನಹಳ್ಳಿ ಹಾಗೂ  ಚನ್ನರಾಯಪಟ್ಟಣ ಅಮಾನಿಕೆರೆ  ಅಚ್ಚುಕಟ್ಟಿನಲ್ಲಿ ಶುಂಠಿ, ಕಬ್ಬು, ಭತ್ತ, ರಾಗಿ ತೆಂಗು, ಕುಂಬಳ, ಅಡಿಕೆ, ಜೋಳ ಬಾಳೆ, ದ್ವಿದಳ ದಾನ್ಯ ಸೇರಿದಂತೆ ಮಣ್ಣು ಕೊಚ್ಚಿಹೋಗಿರುವುದನ್ನು ಮೂರು ತಂಡಗಳನ್ನು ರಚಿಸಿ ಬೆಳೆ ಹಾನಿ ಗುರುತಿಸಲಾಗಿದೆ.  102 ಎಕರೆ ಬೆಳೆ ಹಾನಿಗಾಗಿ 20.2ಲಕ್ಷ, ಪಟ್ಟಣದ ವ್ಯಾಪ್ತಿಯಲ್ಲಿ 11 ಮನೆಗಳಿಗೆ ಹಾನಿಯಾಗಿರುವುದರಿಂದ 7.43ಲಕ್ಷ, ಪುರಸಭಾ ವ್ಯಾಪ್ತಿಯಲ್ಲಿ ರಸ್ತೆ, ಒಳಚರಂಡಿ, ಬೋರ್‌ವೆಲ್‌ಗಳು ಹಾಗೂ ಸೇತುವೆ ಹಾನಿಯಾಗಿರುವುದಕ್ಕೆ 36.5ಲಕ್ಷ ರು.ಗಳಷ್ಟು ಅಂದಾಜು ಮಾಡಲಾಗಿದೆ ಎಂದು ತಿಳಿಸಿದರು.  ವಿವಿಧ ಇಲಾಖೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ತಯಾರಿಸಿ ಡಿಸಿಗೆ ಕಳುಹಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ