ಚನ್ನರಾಯಪಟ್ಟಣ: ಪಟ್ಟಣದಲ್ಲಿ ಬಡ್ಡಿ ದಂಧೆ ನಡೆಸುತ್ತಿದ್ದ 8 ಮಂದಿಯ ಮೇಲೆ ಪಟ್ಟಣ ಪೋಲಿಸರು ದೂರು ದಾಖಲಿಸಲಾಗಿದೆ. ಗೂರನಹಳ್ಳಿ ಪ್ರಸನ್ನ, ಕುವೆಂಪು ನಗರದ ವಿನಯ್ಕುಮಾರ್, ನಾಗಸಮುದ್ರ ರಸ್ತೆಯ ಹರೀಶ್ಕುಮಾರ್, ಕುರುವಂಕ ರಮೇಶ್, ಗುಲಸಿಂದ ಯೋಗೇಶ್ ಪಟ್ಟಣದ ಬಡ್ಡಿ ಕುಮಾರ್ ಅವರನ್ನು ಬಂಧಿಸಲಾಗಿದೆ. ತಲೆ ತಪ್ಪಿಸಿಕೊಂಡಿರುವ ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಗುರುವಾರ ಬೆಳಗ್ಗೆ ಹೊಳೆನರಸೀಪುರ ಎಎಸ್ಪಿ ನೇತೃತ್ವದ ತಂಡ ಖಚಿತ ಮಾಹಿತಿಯನ್ನು ಸಂಗ್ರಹಿಸಿ ಬಡ್ಡಿ ದಂಧೆ ನಡೆಸುತ್ತಿದ್ದವರ ಮನೆ ಮೇಲೆ ದಾಳಿ ನಡೆಸಿ ಮನೆಯಲ್ಲಿ ಬಚ್ಚಿಟ್ಟಿದ್ದ ಹಲವು ಬ್ಯಾಂಕ್ಗಳ ಖಾಲಿ ಚೆಕ್ಗಳು, ಅಡವು ಪತ್ರ ಹಾಗೂ ವ್ಯಕ್ತಿಗಳ ಸಹಿಯಿರುವ ಖಾಲೆ ಸ್ಟ್ಯಾಂಪ್ ಪೇಪರ್ಗಳನ್ನು ವಶಪಡಿಸಿಕೊಂಡಿದ್ದಾರೆ.