ಹಾವೇರಿ

ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳ ಆಯ್ಕೆ

ಬ್ಯಾಡಗಿ: ನ್ಯಾಯವಾದಿಗಳ ಸಂಘದ ನೂತನ ಅಧ್ಯಕ್ಷರಾಗಿ ಎಫ್.ಎಂ. ಮುಳಗುಂದ, ಉಪಾಧ್ಯಕ್ಷರಾಗಿ ಆರ್.ವಿ. ಬೆಳಕೇರಿಮಠ, ಕಾರ್ಯದರ್ಶಿಯಾಗಿ ಆರ್.ಸಿ. ಶಿಡೇನೂರ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಈ ಕುರಿತು ಜರುಗಿದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಹಕಾರ್ಯದರ್ಶಿಯಾಗಿ ಕೆ.ಡಿ. ಪಾಟೀಲ ನಿರ್ದೇಶಕರಾಗಿ ಜಿ.ಎಂ. ಅಂಗಡಿ, ಎಸ್.ಸಿ. ಶಿಡೇನೂರ, ಪಿ.ಆರ್. ಮಠದ, ವಿ.ಎಸ್. ಕಡಗಿ, ಪಿ.ಸಿ. ಶೀಗಿಹಳ್ಳಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎನ್. ಚನ್ನಗೌಡ್ರ, ಎಂ.ಜಿ. ಮುಲ್ಲಾ, ಎಸ್.ಎಂ. ಅಂಗಡಿ, ಎಂ.ಬಿ. ಹಾವೇರಿ, ವಿ.ಎಸ್. ಅರ್ಕಾಚಾರಿ, ಎಮ್.ಕೆ. ಕೋಡಿಹಳ್ಳಿ, ಎನ್.ಎಸ್. ಬಟ್ಟಲಕಟ್ಟಿ, ಎಂ.ಕೆ. ಬಣಕಾರ, ಜಿ.ಎಸ್. ಹಿರೇಮಠ ಅವರುಗಳು ಆಯ್ಕೆಯಾಗಿದ್ದಾರೆ.

ಬಿ.ಎಲ್. ವೇಣುಗೆ ಶಿಮುಶ ಪ್ರಶಸ್ತಿ

ಹಾವೇರಿ: ಇಲ್ಲಿನ ಹೊಸಮಠ ಡಾ. ಶಿವಮೂರ್ತಿ ಶ್ರೀಗಳ ಹೆಸರಿನಲ್ಲಿ ಪ್ರತಿವರ್ಷ ನೀಡುವ ಶಿಮುಶ ಪ್ರಶಸ್ತಿ ಈ ಬಾರಿ ಖ್ಯಾತ ಚಲನಚಿತ್ರ ಸಂಭಾಷಣಾಕಾರ ಬಿ.ಎಲ್. ವೇಣು ಅವರಿಗೆ ಲಭಿಸಿದೆ. ಶ್ರೀ ಮಠದಿಂದ ಆಯೋಜಿಸಲಾಗಿರುವ ಶರಣ ಸಂಸ್ಕೃತಿ ಉತ್ಸವದ ಕೊನೆಯ ದಿನ ಫೆ. 4ರಂದು ಸಂಜೆ 6.30ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ರು. 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದೆ. ವೇಣು ಅವರು, ಕಥೆ, ಕಾದಂಬರಿ, ನಾಟಕ, ಚಲನಚಿತ್ರ ಸಂಭಾಷಣೆಗಳ ಮೂಲಕ  ಜನಪ್ರಿಯರಾಗಿದ್ದಾರೆ. 9 ಕಥಾ ಸಂಕಲನ, 34 ಕಾದಂಬರಿ ಮತ್ತು 5 ನಾಟಕಗಳನ್ನು ರಚಿಸುವ ಜೊತೆಗೆ 60 ಚಲನಚಿತ್ರಗಳಿಗೆ ಸಂಭಾಷಣೆ ನೀಡಿದ್ದಾರೆ. ವೇಣು ಅವರ ಪ್ರತಿಭೆ ಗುರುತಿಸಿ ಶಿಮುಶ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ದೈಹಿಕಶಿಕ್ಷಕ ಹನುಮಂತಪ್ಪ ನಂದಿಹಳ್ಳಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ, ಹಾವೇರಿ, ಫೆ.2
ತಾಲೂಕಿನ ನೆಲೋಗಲ್ಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ಹನುಮಂತಪ್ಪ ನಂದಿಹಳ್ಳಿ ಅವರಿಗೆ ಈಚೆಗೆ ಸನ್ಮಾನಿಸಿ, ಬೀಳ್ಕೊಡಲಾಯಿತು. ಶಾಲೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಹನುಮಂತಪ್ಪ ನಂದಿಹಳ್ಳಿ ಅವರನ್ನು ಎಸ್‌ಡಿಎಂಸಿ ಪದಾಧಿಕಾರಿಗಳು ಹಾಗೂ ಸದಸ್ಯರು ಸನ್ಮಾನಿಸಿ, ಅವರ ಸೇವೆಯನ್ನು ಶ್ಲಾಘಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ವಾಸುದೇವ ಬಸವ್ವನವರ, ಸದಸ್ಯ ಶಂಕರಗೌಡ ಸಿದ್ದನಗೌಡ, ಹನುಮಂತ ಬಣಕಾರ, ಶಾಂತಪ್ಪ ಅಟವಾಳಗಿ, ಚನ್ನಪ್ಪ ಚಂದ್ರಾಪಟ್ಟಣ, ಗುದ್ಲೆಪ್ಪ ಕಾಳಪ್ಪನವರ ಹಾಗೂ ಗ್ರಾಪಂ ಉಪಾಧ್ಯಕ್ಷೆ ಮರಿಯವ್ವ ವರ್ದಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು. ಎನ್.ಎಂ. ಜೋಶಿ ನಿರ್ವಹಿಸಿದರು. ಎ.ಟಿ.ನೀರಲಗಿ ವಂದಿಸಿದರು.
ಇಂದಿನಿಂದ ದ. ಭಾರತ ರಾಜ್ಯಗಳ ವಿಜ್ಞಾನ ಮೇಳ
ಹಾವೇರಿ: ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ವಿಶ್ವೇಶ್ವರಯ್ಯ ಔದ್ಯೋಗಿಕ ಮತ್ತು ತಾಂತ್ರಿಕ ಸಂಗ್ರಹಾಲಯ ಆಶ್ರಯದಲ್ಲಿ ದಕ್ಷಿಣ ಭಾರತ ರಾಜ್ಯಗಳ ವಿಜ್ಞಾನ ಮೇಳ ಇಲ್ಲಿನ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲಾ ಆವರಣದಲ್ಲಿ ಫೆ. 3ರಿಂದ ಫೆ. 7ರ ವರೆಗೆ ಜರುಗಲಿದೆ. ಫೆ. 3ರಂದು ಶಾಲಾ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸುವರು. ಸಚಿವ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆ ವಹಿಸುವರು. ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ಸಂಸದರಾದ ಶಿವಕುಮಾರ ಉದಾಸಿ, ಪ್ರಹ್ಲಾದ ಜೋಶಿ, ಶಾಸಕ ಬಿ.ಸಿ. ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಸೋಮಣ್ಣ ಬೇವಿನಮರದ, ಶಿವರಾಜ ಸಜ್ಜನರ, ಬಸವರಾಜ ಹೊರಟ್ಟಿ, ಮೋಹನ ಲಿಂಬಿಕಾಯಿ, ಶ್ರೀನಿವಾಸ ಮಾನೆ, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ, ಜಿಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ ಸೇರಿದಂತೆ ಹಲವರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ಬ್ಯಾಡಗಿ: ಎಪಿಎಂಸಿಗೆ ಆಯ್ಕೆ
ಬ್ಯಾಡಗಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ರೈತ ಮುಖಂಡ ಸಾವಯವ ಕೃಷಿಕ ರವೀಂದ್ರ ಪಟ್ಟಣಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಶಿವಪ್ಪ ಅಳಲಗೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶನಿವಾರ ಸ್ಥಳೀಯ ಎಪಿಎಂಸಿಯ 2ನೇ ಅವಧಿಗೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಎ.ಎ. ಗನಿ ಇಬ್ಬರ ಹೆಸರನ್ನು ಘೋಷಿಸಿದರು. ಆಯ್ಕೆಗೆ ಸಹಕರಿಸಿದ ಮಾಜಿ ಸಚಿವ ಉದಾಸಿ ಹಾಗೂ ಮಾಜಿ ಶಾಸಕ ಸುರೇಗೌಡ ಅವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದರು. ಸುರೇಶ್ ಅಸಾದಿ, ಸುರೇಶ್ ಯತ್ನಳ್ಳಿ, ಹನುಮಂತಪ್ಪ ನಾಯ್ಕರ್, ಶಿವಣ್ಣ ಕುಮ್ಮೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!