ಹಾವೇರಿ

ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಿ

ಕನ್ನಡಪ್ರಭ ವಾರ್ತೆ, ಸವಣೂರು, ಜ.15
ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರ ಜನ್ಮಸಿದ್ದ ಹಕ್ಕು. ಆದ್ದರಿಂದ ಮತದಾನವನ್ನು ಪ್ರತಿಯೊಬ್ಬರು ತಪ್ಪದೇ ಕೈಗೊಳ್ಳಬೇಕೆಂದು ಮಜೀದ್ ಪ್ರೌಢಶಾಲೆ ಪ್ರಾಚಾರ್ಯ ಪ್ರೊ. ವಾಯ್.ವಿ. ಯತ್ನಳ್ಳಿ ತಿಳಿಸಿದರು.
ನಗರದ ಬಾಲಕಿಯರ ಪಿಯು ಕಾಲೇಜಿನಲ್ಲಿ ಮತದಾರರ ದಿನಾಚರಣೆ ಅಂಗವಾಗಿ ವಿವಿಧ ಸ್ಫರ್ಧಾತ್ಮಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮತನಾಡಿದರು.
ಪ್ರಜಾಪ್ರಭುತ್ವ ಯಶಸ್ವಿಯಾಗಿ ರೂಪಗೊಳ್ಳಲು ಯೋಗ್ಯರಿಗೆ ಮತದಾನ ಮಾಡಿ, ಸಾರ್ವಜನಿಕರು ತಮ್ಮ ಹಕ್ಕು ಚಲಾಯಿಸಬೇಕೆಂದು ಕರೆ ನೀಡಿದರು.
ಇದಕ್ಕೂ ಪೂರ್ವ ನಗರದ ಗೋಕಾಕ ವೃತ್ತದ ಬಳಿ ವಿದ್ಯಾರ್ಥಿನಿಯರು ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರ ಗಮನ ಸೆಳೆದರು.
ವಿವಿಧ ಸ್ಪರ್ಧಾ ವಿಜೇತರು: ಬಳಿಕ ನಡೆ ವಿವಿಧ ಸ್ಪರ್ಧೆಗಳಲ್ಲಿ ತಾಲೂಕಿನ ವಿವಿಧ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮ ಪ್ರತಿಭೆ ಪ್ರದರ್ಶಿಸಿದರು. ಸಂಗೀತ ವಿಭಾಗದಲ್ಲಿ ಸವಣೂರಿನ ಪ್ರಥಮ ಪಿಯು ಬಾಲಕಿಯರ ವಿಭಾಗದಲ್ಲಿ ರಾಬಿಯಾ ಬಳ್ಳಾರಿ ಪ್ರಥಮ, ಸವಣೂರಿನ ಮು.ವ.ವಿ ಕಾಲೇಜಿನ ಶಂಭುಲಿಂಗ ಹಡಪದ ಪ್ರಥಮ, ಸವಣೂರಿನ ಚನ್ನಬಸವೇಶ್ವರ ಪಿಯು ಕಾಲೇಜಿನ ರವಿಚಂದ್ರ ಮೈದೂರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ದ್ವಿತೀಯ ಪಿಯು ವಿಭಾಗದ ಸಂಗೀತ ಸ್ಪರ್ಧೆಯಲ್ಲಿ ಸವಣೂರಿನ ಮು.ವ.ವಿ ಕಾಲೇಜಿನ ಸಂಗೀತಾ. ಎನ್. ಪ್ರಥಮ, ನಾಟಕ ಪ್ರದರ್ಶನದಲ್ಲಿ ಪ್ರಥಮ ಪಿಯು ಬಾಲಕರ ವಿಭಾಗದಲ್ಲಿ ಸವಣೂರಿನ ಮುರಾರ್ಜಿ ವಸತಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದರೆ, ದ್ವಿತೀಯ ಪಿಯು ವಿಭಾಗದಲ್ಲಿ ಸವಣೂರಿನ ಮಜೀದ ಪಿಯು ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಸ.ಬಾ. ಪಿ.ಯು ಕಾಲೇಜಿನ ಪ್ರಾಚಾರ್ಯ ಮಕುಂದಪ್ಪ, ಸ.ಮ. ಪಿ.ಯು ಕಾಲೇಜಿನ ಉಪನ್ಯಾಸಕ ಎ.ವಿ. ಹಾಲಗಿ, ಗ್ರಂಥಪಾಲಕಿ ಜಿ.ವಿ. ಗೋಠೆ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
ಎಸ್.ಬಿ. ಶಿವಪ್ಪನವರ ಸ್ವಾಗತಿಸಿ, ನಿರ್ವಹಿಸಿದರು. ಜಿ.ಡಿ. ಕಟಗಿ ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್