ಹಾವೇರಿ

ರೈತರ ಜಮೀನಿಗೆ ನೀರು ಹರಿಸಿ: ಹನಮಂತಪ್ಪ

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಜ.23 ತಾಲೂಕಿನ ಕುಡುಪಲಿ ಗ್ರಾಮದಲ್ಲಿ ತುಂಗಾ ಮೇಲ್ದಂಡೆ ಕಾಲುವೆ ನೀರು ಬಂದರೂ ಬಾರದಂತಾಗಿದೆ. ತಕ್ಷಣ ಉಪಕಾಲುವೆ ಮತ್ತು ಹೊಲಗಾಲುವೆಗಳನ್ನು ನಿರ್ಮಿಸುವ ಮೂಲಕ ರೈತರ ಜಮೀನುಗಳಿಗೆ ನೀರು ಒದಗಿಸುವಂತೆ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೇಮಣ್ಣ ಮುದಿರೆಡ್ಡೇರ ಹಾಗೂ ರೈತ ಹನುಮಂತಪ್ಪ ಮರಾಠಾ ಆಗ್ರಹಿಸಿದ್ದಾರೆ.
ಮುಖ್ಯ ಕಾಲುವೆಯಿಂದ ಉಪ ಕಾಲುವೆ 7 ಹಾಗೂ 8ಕ್ಕೆ ಸಂಬಂಧಿಸಿದಂತೆ ಉಪ ಕಾಲುವೆ ಮತ್ತು ಹೊಲಗಾಲುವೆ ಮಾಡುವ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ನೀರಿದ್ದರೂ ಸಹ ಬಳಕೆಯಾಗದಂತಾಗಿದೆ. ಈ ಎರಡು ಕಾಲುವೆಗಳಲ್ಲಿ ಕೇವಲ 1 ಕಿ.ಮೀ ಕಾಲುವೆ ನಿರ್ಮಿಸಿ ಕಾಲುವೆ ಪೂರ್ಣಗೊಳಿಸದೆ ಅರ್ಧಕ್ಕೆ ನಿಲ್ಲಿಸಿ, ಗುತ್ತಿಗೆದಾರರು ಕೈತೊಳೆದುಕೊಂಡದ್ದರಿಂದ ಈ ಕಾಲುವೆಗಳಲ್ಲಿ ಬಂದ ನೀರು ಕುಡುಪಲಿ ಮತ್ತು ಮಾದಾಪುರ ರಸ್ತೆಯಲ್ಲಿ ಹರಿದ ಪರಿಣಾಮವಾಗಿ ರಸ್ತೆ ಹಾಳಾಗಿ ಹೋಗಿದೆ.
ಕಳೆದ 6 ತಿಂಗಳಿಂದ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಯಲ್ಲಿ ಸತತ ನೀರು ಹರಿದಿದ್ದರೂ ಸಹ ಕುಡುಪಲಿ ಗ್ರಾಮದ 1,000 ಎಕರೆ, ಕಡೂರು ಗ್ರಾಮದ 500 ಎಕರೆ ಮತ್ತು ಮಾದಾಪುರ ಗ್ರಾಮದ 250 ಎಕರೆ ಜಮೀನಿಗೆ ನೀರು ದೊರಕದೆ ರಸ್ತೆಯ ಮೇಲೆ ಪೋಲಾಗಿದೆ. ಇದರಿಂದಾಗಿ ರೈತರಿಗೆ ನೀರಿದ್ದೂ ಬರದೆಂಬಂತಾಗಿದೆ.
ಈ ಭೂಮಿಯು ಸಂಪೂರ್ಣ ಎರೆ ಭೂಮಿಯಾಗಿದ್ದು, ಇದೀಗ ಬೇಸಿಗೆ ಕಾಲವಿರುವದರಿಂದ ಜಮೀನಿಗಳಲ್ಲಿ ಬೆಳೆ ಇರುವುದಿಲ್ಲ. ಕಾಮಗಾರಿ ನಿರ್ವಹಿಸಲು ಅನುಕೂಲವಿದೆ. ಕಾರಣ ತಕ್ಷಣ ಉಪಕಾಲುವೆಗಳು ಹಾಗೂ ಹೊಲಗಾಲುವೆಗಳನ್ನು ನಿರ್ಮಿಸಬೇಕು. ಕಳಪೆ ಕಾಮಗಾರಿ ಆಗದಂತೆ ಹೆಚ್ಚಿನ ಜವಾಬ್ದಾರಿ ವಹಿಸಿ ಕಾಲುವೆಗಳನ್ನು ನಿರ್ಮಿಸಿ ಈ ಭಾಗದ ರೈತರ ಜಮೀನುಗಳಿಗೆ ನೀರು ಒದಗಿಸಬೇಕೆಂದು ಜಂಟಿ ಹೇಳಿಕೆಯಲ್ಲಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ