ಹಾವೇರಿ

ರೈತರಿಗೆ ಮಾವು ಕಹಿ

ಕನ್ನಡಪ್ರಭ ವಾರ್ತೆ, ಮುಂಡಗೋಡ, ಮೇ 6
ಮಾವಿನ ಬೆಲೆಯಲ್ಲಿ ತೀವ್ರ ಕುಸಿತ ಕಂಡಿರುವುದರಿಂದ ಬೆಳೆಗಾರರಿಗೆ ಈಗ ಹಣ್ಣುಗಳ ರಾಜ ಕಹಿಯಾಗಿ ಪರಿಣಮಿಸಿದೆ.
ಆರಂಭದಲ್ಲಿ ಆಪೂಸ್, ಪೈರಿ, ಕರೆ ಇಸಾಡ್, ಮಾನಕೂರ ಮುಂತಾದ ಉತ್ತಮ ತಳಿಯ ಮಾವಿಗೆ ಉತ್ತಮ ಬೆಲೆ ಇತ್ತು. ಮಾವಿನ ಕಣಜ ಎಂದೇ ಪ್ರಸಿದ್ಧವಾದ ತಾಲೂಕಿನ ಪಾಳಾ ಭಾಗದಿಂದ ಪ್ರತಿ ಬಾರಿ ಮಾವಿನ ಸುಗ್ಗಿ ಆರಂಭವಾಗುತ್ತಿದ್ದಂತೆ ಟನ್ ಲೆಕ್ಕದಲ್ಲಿ ಬೇರೆ ರಾಜ್ಯ ಹಾಗೂ ದೇಶಗಳಿಗೆ ಹಣ್ಣುಗಳು ರಫ್ತಾಗುತ್ತಿದ್ದವು. ಆಪೂಸ್ ಮಾವು ತೊಟ್ಟು ಸಮೇತ ತೋಟದಿಂದ ಹೊರ ಬರುತ್ತಿದ್ದಂತೆ ಪಾನೀಯ ಕಂಪನಿಗಳಿಗೆ ಹಾಗೂ ವಿದೇಶಗಳಿಗೆ ರಫ್ತು ಮಾಡುವ ಸಲುವಾಗಿ ಕ್ವಿಂಟಲ್‌ಗೆ ರು.7 ಸಾವಿರದಂತೆ ಖರೀದಿಸಲಾಗುತ್ತಿತ್ತು. ಈ ಬಾರಿ ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ನಿರಾಸೆಯಾಗಿದೆ. ಆಪೂಸ್ ಮಾವಿನಕಾಯಿಗಳನ್ನು ಈಗ ಕ್ವಿಂಟಲ್‌ಗೆ ರು.2 ಸಾವಿರಕ್ಕೂ ಕೇಳುವವರಿಲ್ಲ.
ಮೂರು ಮಂಡಿ: ಈ ಭಾಗದಲ್ಲಿ ಸಾಕಷ್ಟು ಪ್ರಮಾಣದ ಫಸಲು ಬರುತ್ತಿದ್ದು, ಪಾಳಾ ಕ್ರಾಸ್‌ನಲ್ಲಿ ದೊಡ್ಡ ಪ್ರಮಾಣದ ಮೂರು ಮಾವು ಖರೀದಿ ಮಂಡಿಗಳು ತಲೆಯೆತ್ತಿವೆ. ಬೆಳೆಗಾರರಿಂದ ಖರೀದಿಸುವ ಮಾವನ್ನು ಹಗಲು ರಾತ್ರಿ ಎನ್ನದೆ ವಿವಿಧ ರಾಜ್ಯಗಳಿಗೆ ಕಳುಹಿಸುವ ಕೆಲಸ ಭರದಿಂದ ಸಾಗಿದೆ. ದಿನಕ್ಕೆ 3-4 ಲಾರಿ ತುಂಬ ಫಸಲು ಮಹಾರಾಷ್ಟ್ರದ ಮುಂಬೈ, ಪೂನಾ, ನಾಸಿಕ್, ರಾಜಸ್ಥಾನ, ದೆಹಲಿ, ಮಧ್ಯಪ್ರದೇಶ ಮುಂತಾದ ಕಡೆಗಳಲ್ಲಿರುವ ಪಾನೀಯ ಕಂಪನಿಗಳಿಗೆ ಸರಬರಾಜಾಗುತ್ತಿದೆ.
ಹಣ್ಣಿನ ಬೆಲೆ ಕುಸಿತ: ಮಾರುಕಟ್ಟೆಯಲ್ಲೂ ಮಾವಿನ ಹಣ್ಣಿಗೆ ಯೋಗ್ಯ ಬೆಲೆ ಲಭಿಸುತ್ತಿಲ್ಲ. ಪ್ರಾರಂಭದಲ್ಲಿ ಡಜನ್‌ಗೆ ರು.200-250 ಮಾರಾಟವಾಗುತ್ತಿದ್ದ ಆಪೂಸ್, ಪೈರಿ, ಮಲಗೋಬಾ, ಕರಿ ಸಾಡ್ ಮಾವಿನ ಹಣ್ಣನ್ನು ಈಗ ರು.100ರ ಮೇಲೆ ಕೇಳುವುದೇ ಇಲ್ಲ. ಜವಾರಿ ಹಣ್ಣಿಗೆ ರು.30-40 ದರವೂ ಸಿಗದೆ, ವ್ಯಾಪಾರಸ್ಥರೂ ಕುಗ್ಗಿದ್ದಾರೆ.
ಕೇಳಿದ ದರಕ್ಕೆ ಮಾರಾಟ: ತಾಲೂಕಿನ ಪಾಳಾ ಭಾಗದಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರು ರಾತ್ರಿ- ಹಗಲು ಎನ್ನದೆ ಮಾವಿನ ಕಾಯಿ ಹರಿದು ಹಣ್ಣು ಮಾಡಿ ಹುಬ್ಬಳ್ಳಿ ಮುಂತಾದ ಪಟ್ಟಣಗಳಿಗೆ ಕೊಂಡೊಯ್ಯುವಲ್ಲಿ ನಿರತರಾಗಿದ್ದಾರೆ. ಅಲ್ಲಿ ಮಾವನ್ನು ಬಾಯಿಗೆ ಬಂದ ದರಕ್ಕೆ ಕೇಳುತ್ತಾರೆ. ಒಯ್ದ ಹಣ್ಣು ಹಾಳಾಗುವ ಭಯದಿಂದ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ಕೇಳಿದ ದರಕ್ಕೆ ಕೊಟ್ಟು ಬರಬೇಕಾದ ಸ್ಥಿತಿ ಇದೆ ಎನ್ನುವುದು ಇಲ್ಲಿಯ ಕೆಲ ಮಾವು ಬೆಳೆಗಾರರ ಅಂಬೋಣ.
ತೋಟ ಗುತ್ತಿಗೆ ಪಡೆದು ವ್ಯಾಪಾರ ಮಾಡುವ ದಲ್ಲಾಳಿಗಳ ಪಾಡಂತೂ ಹೇಳತೀರದು. ಪಾಳಾ ಭಾಗದಲ್ಲಿ ಹಲವಾರು ದೊಡ್ಡ ಮಾವಿನ ತೋಪುಗಳಿವೆ. ಪ್ರತಿ ಬಾರಿಯಂತೆ ಮಾವು ಬೆಳೆಗಾರರಿಗೆ ಲಕ್ಷಾತರ ಹಣ ನೀಡಿ ಮಾವಿನ ತೋಪುಗಳನ್ನು ಗುತ್ತಿಗೆ ಪಡೆದಿದ್ದಾರೆ.
ಈ ಬಾರಿಯೂ ಲಾಭದ ನಿರೀಕ್ಷೆಯಿಂದ ಸಾಕಷ್ಟು ದಲ್ಲಾಳಿಗಳು ಮಾವಿನ ತೋಪುಗಳನ್ನು ಗುತ್ತಿಗೆ ಹಿಡಿದು ವ್ಯಾಪಾರ ನಡೆಸುತ್ತಿದ್ದಾರೆ. ಮಾವಿನ ಬೆಲೆ ಕಡಿಮೆಯಾಗಿರುವುದರಿಂದ ಕಂಗೆಟ್ಟಿರುವ ಮಾವು ವ್ಯಾಪಾರಸ್ಥರು ಹಾಗೂ ದಲ್ಲಾಳಿಗಳು. ನಷ್ಟ ಅನುಭವಿಸುವ ಆತಂಕದಲ್ಲಿದ್ದಾರೆ.
ಬೆಲೆ ಕುಸಿತಕ್ಕೆ ಕಾರಣ: ಮಾರುಕಟ್ಟೆಗೆ ಮಾವಿನ ಫಸಲು ಲಗ್ಗೆ ಇಡುತ್ತಿರುವುದರಿಂದ ಇಲ್ಲಿಯ ಮಾವಿಗೆ ಬೇಡಿಕೆ ಕಡಿಮೆಯಾಗಿದೆ. ತಕ್ಷಣ ಹಣ್ಣು ಮಾಡುವ ಆತುರದಿಂದ ಕಾರ್ಬನೆಟ್ ಬಳಸಲಾಗುತ್ತದೆ ಹಾಗೂ ಹೆಚ್ಚಿನ ದರ ಪಡೆಯುವ ತವಕದಲ್ಲಿ ಮಾವಿನ ಕಾಯಿ ಬಲಿಯುವ ಮೊದಲೇ ಹರಿದು ಸಾಗಿಸಲಾಗುತ್ತದೆ ಎಂಬ ಕಾರಣಕ್ಕೆ ವಿದೇಶಕ್ಕೆ ರಫ್ತು ಬಂದಾಗಿರುವುದು ಬೆಲೆ ಕುಸಿತಕ್ಕೆ ಕಾರಣ ಎನ್ನಲಾಗಿದೆ.


 ಸಂತೋಷ ದೈವಜ್ಞ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!