ಸೋಮವಾರಪೇಟೆ: ಒಕ್ಕಲಿಗರ ಸಂಘದ ಪ್ರಗತಿಪರ ಮಹಿಳಾ ವೇದಿಕೆ, ಸೋಮವಾರಪೇಟೆ ನಗರ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆ ಇವರ ಸಂಯುಕ್ತಾಶ್ರಯದಲ್ಲಿ 'ಮಹಿಳಾ ಶೋಷಣೆ ಮತ್ತು ದೌರ್ಜನ್ಯ ನಿಯಂತ್ರಣ ಜನಜಾಗೃತಿ' ಸಮಾವೇಶ ಫೆ.11ರಂದು ಬೆಳಿಗ್ಗೆ 10:30ಕ್ಕೆ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷೆ ಗೋಧಾ ಗಣಪತಿ, ಕಾರ್ಯದರ್ಶಿ ಪುಷ್ಪ ಸುರೇಶ್ ತಿಳಿಸಿದ್ದಾರೆ. ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥರಾದ ಸ್ಟಾನ್ಲಿ, ಪರಶು ಅವರು ಮಹಿಳಾ ಶೋಷಣೆ ಮತ್ತು ದೌರ್ಜನ್ಯ ನಿಯಂತ್ರಣ ಮಾಹಿತಿ ನೀಡಲಿದ್ದಾರೆ.