ಕೊಡಗು

ಶರವಣ್ ಮಿಸ್ಟರ್ ಸುಂಟಿಕೊಪ್ಪ

ಸುಂಟಿಕೊಪ್ಪ: ಸುಂಟಿಕೊಪ್ಪ ಮಲ್ಟಿ ಫ್ಲೆಕ್ಸ್ ಜಿಮ್‌ನ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಮಿಸ್ಟರ್ ಸುಂಟಿಕೊಪ್ಪ ಎಂಬ ಹೆಸರಿನಲ್ಲಿ ಹೋಬಳಿ ಮಟ್ಟದ ದೇಹದಾಢ್ಯ ಸ್ಪರ್ಧೆಯನ್ನು ಆಯೋಜಿಸಿತ್ತು. ಒಂದನೇ ವಿಭಾಗದ ಶರವಣ ಮಿಸ್ಟರ್ ಸುಂಟಿಕೊಪ್ಪ  ಪಟ್ಟವನ್ನು ಅಲಂಕರಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು, 42 ಚಿನ್ನದ ಪದಕ ವಿಜೇತ ಮಂಗಳೂರಿನ ರೋಶನ್ ಪರೇರಾ ದೇಹದಾರ್ಡ್ಯ ಪ್ರದರ್ಶಿಸಿ ಸುದೀರ್ಘ ಕರತಾಡನಕ್ಕೆ ಒಳಗಾದರು.
ಜಿ.ಪಂ. ಸದಸ್ಯ ಬಿ.ಬಿ. ಭಾರತೀಶ್ ಉದ್ಘಾಟಿಸಿದರು. ಗ್ರಾ.ಪಂ. ಅಧ್ಯಕ್ಷ ಎಂ.ಎ. ಉಸ್ಮಾನ್, ಜಿ.ಪಂ. ಸದಸ್ಯ ಎ. ಲೋಕೇಶ್ ಕುಮಾರ್, ಮಾಜಿ ಉಪಾಧ್ಯಕ್ಷ ಬಿ.ಎಸ್. ಸದಾಶಿವ ರೈ, ಸದಸ್ಯ ಎಸ್.ಪಿ. ಸಂದೀಪ್ ಕುಮಾರ್, ಶ್ರೀ ರಾಮ ಸೇವಾ ಸಮಿತಿಯ ಅಧ್ಯಕ್ಷ ಎಂ.ಎ. ಗಂಗಾಧರ್, ಕಾಫಿ ಬೆಳೆಗಾರ ಆನಂದ, ಹಾಗೂ ಇನ್ನಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕಾನ್ಬೆರಾ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ದಿನೇಶ್ ನಾಯಕ್, ಮಹೇಂದ್ರ ನಿರೂಪಿಸಿದರು. ನಾಟಿ ಕಿಡ್ಸ್ ತಂಡದಿಂದ ನೃತ್ಯ ಪ್ರದರ್ಶನವನ್ನು ಏರ್ಪಸಲಾಗಿತ್ತು.
17ರಂದು ಪಾಪ್ಯುಲರ್ ಫ್ರಂಟ್ ಡೇ
ಮಡಿಕೇರಿ: ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಎಂಬ ನೂತನ ಸಂಘಟನೆ ರಾಷ್ಟ್ರ ಮಟ್ಟದಲ್ಲಿ ಆರಂಭವಾದ ಸವಿನೆನಪಿಗೆ ಫೆ.17 ರಂದು ಪಾಪ್ಯೂಲರ್ ಫ್ರಂಟ್ ಡೇ ಅನ್ನು ಮಡಿಕೇರಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು  ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಸಮಿತಿ ಖಜಾಂಚಿ ಟಿ.ಎಚ್. ಅಬೂಬಕರ್ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅಬೂಬಕರ್  2007 ರ ಫೆಬ್ರವರಿ 17 ರಂದು ಬೆಂಗಳೂರಿನ ಅರಮನೆ ಮೈದಾನದ ಶಹದೆ ಮಿಲ್ಲತ್ ಟಿಪ್ಪು ಸುಲ್ತಾನ್ ನಗರದಲ್ಲಿ ನಡೆದ ಎಂಪವರ್ ಇಂಡಿಯ ಸಮಾವೇಶದಲ್ಲಿ ಕೇರಳದ ನ್ಯಾಷನಲ್ ಡೆವೆಲಪ್‌ಮೆಂಟ್ ಫ್ರಂಟ್, ತಮಿಳು ನಾಡಿನ ಮನಿದ ನೀದಿ ಪಾಸರೈ ಹಾಗೂ ಕರ್ನಾಟಕದ ಕರ್ನಾಟಕ ಫಾರಂ ಡಿಗ್ನಿಟಿ ಎಂಬ ಈ ಮೂರು ಸಂಘಟನೆಗಳು ವಿಲೀನಗೊಂಡು ರಾಷ್ಟ್ರೀಯ ಮಟ್ಟದಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಎಂಬ ಸಂಸ್ಥೆಯನ್ನು ಘೋಷಿಸಿದ್ದಾಗಿ ಮಾಹಿತಿ ನೀಡಿದರು.
ಪಾಪ್ಯೂಲರ್ ಫ್ರಂಟ್ ಡೇ ಪ್ರಯುಕ್ತ  ಫೆ.17ರಂದು ಮಡಿಕೇರಿಯಲ್ಲಿ ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ನಡೆಯಲಿದೆ. ಅಪರಾಹ್ನ 2.30ಕ್ಕೆ ನಗರದ ಎ.ವಿ. ಶಾಲೆ ಬಳಿಯಿಂದ ಕಾರ್ಯಕರ್ತರ ಯೂನಿಟಿ ಮಾರ್ಚ್ ಪ್ರಾರಂಭವಾಗಲಿದೆ.   ಈ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಗಾಂಧಿ ಮೈದಾನದಲ್ಲಿ ಸಮಾಪನಗೊಂಡು ಸಂಜೆ 4 ಗಂಟೆಗೆ ಸಮಾವೇಶ ನಡೆಯಲಿದೆ ಎಂದು ತಿಳಿಸಿದ ಅಬೂಬಕರ್ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ನಾಯಕರು ಹಾಗೂ ಪ್ರಗತಿ ಪರ ಚಿಂತಕರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಉಸ್ಮಾನ್ ತ್ಯಾಗತ್ತೂರು, ನಗರಾಧ್ಯಕ್ಷ ಜಲೀಲ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ