ಕೊಡಗು

ಇಂದು ಜನಪರ ಚಳುವಳಿ: ಭರತ್

ಮಡಿಕೇರಿ: ಕೊಡಗು ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಫೆ.15 ರಂದು ನಡೆಯಲಿರುವ ಪ್ರತಿಭಟನೆಯು ರಾಜಕೀಯ ರಹಿತವಾಗಿ ಜಾತೀಯತೆಯ ಸೋಂಕಿಲ್ಲದೆ ನಡೆಯಲಿರುವ ಜನಪರ ಚಳವಳಿಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಪಿ.ಆರ್. ಭರತ್ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ  ಭರತ್ ಜನಜಾಗೃತಿ ಸಮಾವೇಶದ ಬಗ್ಗೆ ಹಲವೆಡೆ  ಅಪಪ್ರಚಾರ ಹಾಗೂ ಷಡ್ಯಂತ್ರ ನಡೆಯುತ್ತಿದೆ. ಈ ಚಳವಳಿ ಯಾರ ವಿರುದ್ಧವಾದ ಚಳವಳಿಯಲ್ಲ. ಬದಲಾಗಿ ಜನಪರ ಕಾಳಜಿಯ ಚಳವಳಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ, ವಾಸವಿರುವ ಜಾಗಕ್ಕೆ ಹಕ್ಕು ಪತ್ರ ನೀಡುವಂತೆ ಮತ್ತು ಜಿ. ಪಂ. ಸಾಮಾನ್ಯ ಸಭೆಯಲ್ಲಿ ದೇವರಕಾಡು, ಊರುಡುವೆ, ಪೈಸಾರಿ ಜಾಗವನ್ನು ಅತಿಕ್ರಮಣ ಮಾಡಿಕೊಂಡಿರುವವರನ್ನು ತೆರವುಗೊಳಿಸುವ ನಿರ್ಣಯವನ್ನು ಖಂಡಿಸಿ  ಈ ಪ್ರತಿಭಟನೆ ನಡೆಸುತ್ತಿರುವುದಾಗಿ ಭರತ್ ಹೇಳಿದರು.
ಇಂತಹ ಸ್ಥಳಗಳಲ್ಲಿ ವಾಸಿಸುತ್ತಿರುವ ಜನರಿಂದ ಆರಿಸಿ ಬಂದ ಜಿಪಂ ಸದಸ್ಯರು ಅಧಿಕಾರ ದೊರೆತೊಡನೆ ಜಿಲ್ಲೆಯ ಸೌಂದರ್ಯದ ನೆಪವೂಡ್ಡಿ, ಬಡವರ್ಗದ ಮಂದಿಯನ್ನು ಒಕ್ಕಲೆಬ್ಬಿಸುವ ಮೂಲಕ ನಿರ್ವಸತಿಗರನ್ನಾಗಿಸುವ ಸಂಚು ಮಾಡುತ್ತಿರುವುದಾಗಿ  ಭರತ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಗುಡಿಸಲು ಹೇಗೆ ಮಾರಕ?: ಬಡವರ್ಗದ ಗುಡಿಸಲುಗಳು ಪರಿಸರಕ್ಕೆ ಹೇಗೆ ಧಕ್ಕೆ ಉಂಟುಮಾಡುತ್ತದೆ ಎಂದು ಪ್ರಶ್ನಿಸಿದ ಭರತ್, ದುಡಿಯುವ ವರ್ಗದ ಜನ ಜಿಲ್ಲೆಯ ಸಂಸ್ಕೃತಿ ಮತ್ತು ಅಭಿವೃದ್ಧಿಗೆ ಹೆಚ್ಚಿನ ಕಾಣಿಕೆಯನ್ನು ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು. ಬಡವರ ದುರಂತ ಬದುಕಿಗೆ ಮತ್ತು ಜೀತದಾಳುಗಳಂತೆ ದುಡಿಯುತ್ತಿರುವವರ ಬದುಕನ್ನು ಹಸನಾಗಿಸಿ, ಅವರಿಗೊಂದು ಸೂರು ಕಲ್ಪಿಸಿ, ಹಕ್ಕುಪತ್ರ ಬದಗಿಸುವುದು ತಮ್ಮ ಹೋರಾಟದ ಮುಖ್ಯ ಗುರಿ ಎಂದು ಭರತ್ ಹೇಳಿದರು.
ಉಪಾಧ್ಯಕ್ಷೆ ಎಚ್.ಬಿ. ಜಯಮ್ಮ, ಪ್ರಧಾನ ಕಾರ್ಯದರ್ಶಿ ವಿನ್ಸೆಂಟ್ ಬಾಬು, ಕಾರ್ಯದರ್ಶಿ ಜಯಪ್ಪ ಹಾನಗಲ್, ಖಜಾಂಚಿ ಬಿ.ಡಿ. ನಾರಾಯಣ ರೈ, ಪದಾಧಿಕಾರಿ ಟಿ.ಎನ್. ಗೋವಿಂದಪ್ಪ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಸೋಮಪ್ಪ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ