ಕೊಡಗು

ಮೂರ್ನಾಡು: ಟ್ಯಾಂಕರ್ ನೀರು ಪೂರೈಕೆ

ಮೂರ್ನಾಡು: ಐದು ದಿನಗಳಿಂದ ಕುಡಿಯುವ ನೀರಿಲ್ಲದೆ ಸೊರಗಿದ ಮೂರ್ನಾಡು ಪಟ್ಟಣದ ನಿವಾಸಿಗಳಿಗೆ ಗ್ರಾಪಂ ವತಿಯಿಂದ ಬಲಮುರಿ ಹೊಳೆಯಿಂದ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಯಿತು.
ಮೋಟಾರು ಕೆಟ್ಟು ಹೋಗಿ ಕುಡಿಯುವ ನೀರಿಗಾಗಿ ಪರದಾಟ ನಡೆಸುತ್ತಿರುವ ನಿವಾಸಿಗಳು ಟ್ಯಾಂಕರ್ ನೀರಿಗೆ ಮುಗಿಬಿದ್ದರು. ಪಟ್ಟಣದ ಮುಖ್ಯ ಬೀದಿಯ ಅಂಗಡಿ, ಹೊಟೇಲ್, ಮಾರುಕಟ್ಟೆ, ಗಾಂಧಿನಗರ, ಸುಭಾಷ್‌ನಗರ ನಿವಾಸಿಗಳಿಗೆ ನೀರು ಪೂರೈಕೆ ಮಾಡಲಾಯಿತು. ಬೆಳಗ್ಗೆಯಿಂದ ಸಂಜೆವರೆಗೆ ಟ್ಯಾಂಕರ್‌ನಲ್ಲಿ 60 ಸಾವಿರ ಲೀ. ನೀರು ಸರಬರಾಜು ಮಾಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯೊಕ್ಕಡ ಪೊನ್ನು ಮುತ್ತಪ್ಪ, ಸದಸ್ಯ ಖಾದರ್, ವಜೀರ್ ಅವರು ಬೆಳಗ್ಗೆಯಿಂದ ನೀರು ಸರಬರಾಜಿನಲ್ಲಿ ತೊಡಗಿಕೊಂಡಿದ್ದರು. ಮಡಿಕೇರಿಯಿಂದ ಕರೆಸಲಾದ ಟ್ಯಾಂಕರ್ ಹಾಗೂ ನೀರು ತುಂಬಿಸಲು ಮೋಟಾರ್‌ಗೆ ಡೀಸೆಲ್ ವೆಚ್ಚಗಳನ್ನು ತಾನೆ ಭರಿಸುತ್ತೇನೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಳಿಸಿದ್ದಾರೆ.
ಹೊಸ ಮೋಟಾರ್ ಅಳವಡಿಕೆ: ಕೋಡಂಬೂರಿನ ಉಪ್ಪುಗುಂಡಿಯಲ್ಲಿ ನೀರೆತ್ತುವ ಮೋಟಾರು ಕೆಟ್ಟು ಹೋಗಿ ಪಟ್ಟಣದಲ್ಲಿ ಕುಡಿಯುವ ನೀರಿಲ್ಲದ ಪರಿಸ್ಥಿತಿ ಉಂಟಾಗಿದೆ. ನಾಲ್ಕು ದಿನಗಳಿಂದ ಮೋಟಾರು ದುರಸ್ತಿ ಕಾರ್ಯದಲ್ಲಿ ತೊಡಗಿರುವ ಗ್ರಾಮ ಪಂಚಾಯಿತಿ ವಿಫಲವಾಗಿ ಶನಿವಾರ ಹೊಸ ಮೋಟಾರು ಅಳವಡಿಸಲಾಗಿದೆ. ಉಪ್ಪುಗುಂಡಿಯಲ್ಲಿ ಅಕ್ರಮ ಮರಳು ಗಣಿಗಾರಿಗೆ ಮಾಡುತ್ತಿದ್ದು, ವಾಹನಗಳ ಓಡಾಟದಿಂದ ಮೂರ್ನಾಡು ಪಟ್ಟಣದ ನೀರಿನ ಟ್ಯಾಂಕ್‌ಗೆ ಬರುವ ಪೈಪ್‌ಲೈನ್ ಸಂಪೂರ್ಣವಾಗಿ ಒಡೆದು ಹೋಗಿ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಒಡೆದ ಪೈಪ್ ತೆಗೆದು ಹೊಸ ಪೈಪ್ ಅಳವಡಿಸಿದರೆ ನೀರು ಪೂರೈಕೆ ಸಾಧ್ಯವಾಗುತ್ತದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಪುದಿಯೊಕ್ಕಡ ಪೊನ್ನು ಮುತ್ತಪ್ಪ ಹೇಳಿದ್ದಾರೆ.
ಐದು ದಿನಗಳಿಂದ ನೀರಿಗಾಗಿ ಪರಿತಪಿಸುತ್ತಿದ್ದ ಮೂರ್ನಾಡಿನ ನಿವಾಸಿಗಳು ಟ್ಯಾಂಕರ್ ನೀರಿನಿಂದ ಸಲ್ಪ ನೆಮ್ಮದಿ ಕಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್