ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯ ಹೊದವಾಡ ಮತ್ತು ಕೊಟ್ಟಮುಡಿಯಲ್ಲಿನ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸುಮಾರು 30 ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿ ಜಿಲ್ಲಾ ವಕ್ತಾರ ಮನುಮುತ್ತಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿಗೆ 30 ಮಂದಿಯನ್ನು ಸೇರ್ಪಡೆಗೊಳಿಸಲಾಯಿತು.
ಈ ಸಂದರ್ಭ ಮಾತನಾಡಿದ ಮನುಮುತ್ತಪ್ಪ, ಬಿಜೆಪಿಯ ತತ್ವಾದರ್ಶ, ಸಿದ್ಧಾಂತಗಳು ಮತ್ತು ಪ್ರಗತಿ ಕಾರ್ಯಕ್ರಮಗಳನ್ನು ಮೆಚ್ತಿ ಕಾಂಗ್ರೆಸ್ನ ಭದ್ರಕೋಟೆ ಎಂದೇ ಕರೆಯಲ್ಪಡುವ ಹೊದವಾಡ, ಕೊಟ್ಟಮುಡಿಯ ಕಾಂಗ್ರೆಸ್ ಕಾರ್ಯಕರ್ತರು ಇದೀಗ ಬಿಜೆಪಿ ಸೇರ್ಪಡೆಗೊಂಡಿದ್ದು, ಇವರೆಲ್ಲ ಕಾಂಗ್ರೆಸ್ ಬಗ್ಗೆ ಭ್ರಮನಿರಸನಗೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಾಪೋಕ್ಲು ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕೊಂಡ್ಯೋಳಂಡ ರಮೇಶ್ ಮುದ್ದಯ್ಯ, ಬಲ್ಲಮಾವಟಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಕರವಂಡ ಲವಾ ನಾಣಯ್ಯ, ಎಮ್ಮೆಮಾಡಿನ ಬಿಜೆಪಿ ಬೂತ್ ಅಧ್ಯಕ್ಷ ಮಾಹಿನೆ, ಹೊದ್ದೂರು ಸ್ಥಾನೀಯ ಸಮಿತಿ ಅಧ್ಯಕ್ಷ ಸಂಜಯ್, ಎಮ್ಮೆಮಾಡು ಗ್ರಾ.ಪಂ. ಉಪಾಧ್ಯಕ್ಷ ಹಸೈನಾರ್ ಇದ್ದರು.