ಕೊಡಗು

ಯುವ ಜನಾಂಗ ಜಾಗೃತವಾಗಲಿ: ಮಣಿ ನಂಜಪ್ಪ





ಮಡಿಕೇರಿ: ಹೆಣ್ಣು ಮಕ್ಕಳು ಒಬ್ಬಂಟಿಯಾಗಿ ಮಧ್ಯರಾತ್ರಿಯಲ್ಲಿ ತಿರುಗಾಡುವಂತಾಗುವಾಗ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದಂತಾಗುತ್ತದೆ ಎಂಬ ಮಹಾತ್ಮ ಗಾಂಧೀಜಿ ಆಶಯ ಸತ್ಯವಾಗಬೇಕಾದರೆ ಯುವ ಜನಾಂಗ ಜಾಗೃತವಾಗಬೇಕಿದೆ ಎಂದು ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ತೀತೀರ ಮಣಿ ನಂಜಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶ್ರೀಮಂಗಲ ಜೈಹಿಂದ್ ಯುವಕ ಮಂಡಳಿಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಣಿ ನಂಜಪ್ಪ  ಇಂದು ಸಮಾಜದಲ್ಲಿ ಮಹಿಳಾ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ.  ಈ ಪಿಡುಗನ್ನು ನಿಯಂತ್ರಿಸಬೇಕಾದರೆ ಯುವ ಜನಾಂಗ ಎಚ್ಚೆತ್ತುಕೊಂಡರೆ ಮಾತ್ರ ಸಾಧ್ಯ ಎಂದರು.
ಜಿ.ಪಂ. ಸದಸ್ಯೆ ಚೋಡುಮಾಡ ಶರೀನ್ ಸುಬ್ಬಯ್ಯ ಮಾತನಾಡಿ, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ರಕ್ಷಣೆ ಇಲ್ಲದಿರಲು ಗಂಡು ಮಕ್ಕಳ ಮನಸ್ಥಿತಿ ಕೆಲಮೊಮ್ಮೆ ಕಾರಣವಾಗುತ್ತದೆ. ಪೋಷಕರು ಗಂಡು ಮಕ್ಕಳಲ್ಲಿ ಹೆಣ್ಣು ಮಕ್ಕಳ ಬಗ್ಗೆ ಗೌರವ ಹಾಗೂ ಸಹೋದರ ಭಾವ ಬರುವಂತೆ ಬೆಳೆಸಬೇಕಾಗಿದೆ ಎಂದರು.
ವಿರಾಜಪೇಟೆ ತಾ.ಪಂ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ ಮಾತನಾಡಿ, ಇಂದು ಕೇವಲ ಓಲೈಕೆ ರಾಜಕಾರಣದಿಂದ ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ. ಭಯೋತ್ಪಾದನೆ ವಿರುದ್ಧ ನಮ್ಮ ವಿದೇಶಾಂಗ ನೀತಿಯಲ್ಲಿ ಮೃದು ಧೋರಣೆ ತೋರುತ್ತಿರುವುದು ಆತಂಕದ ಸಂಗತಿಯಾಗಿದೆ ಎಂದು ಹೇಳಿದರು.
ಮಹಿಳಾ ಸಮಾಜದ ಅಧ್ಯಕ್ಷೆ ಮಚ್ಚಮಾಡ ಟಿ. ಗೌರಮ್ಮ, ಶ್ರೀಮಂಗಲ ಗ್ರಾ.ಪಂ. ಸದಸ್ಯರಾದ ಕಾಳಿಮಾಡ ತಮ್ಮು ಮುತ್ತಣ್ಣ, ವಾಣಿ ಮಾದಪ್ಪ, ಜೈಹಿಂದ್ ಯುವಕ ಸಂಘದ ಅಧ್ಯಕ್ಷ ಬೊಟ್ಟಂಗಡ ಸುಜು ಕುಮಾರ್, ಕಾರ್ಯದರ್ಶಿ ಬೋಡಂಗಡ ಅಯ್ಯಪ್ಪ ಹಾಗೂ ಹಿರಿಯ ಸದಸ್ಯ ಚಂಗುಲಂಡ ಪ್ರಭು ಇದ್ದರು.
ವಾರ್ಷಿಕೋತ್ಸವದ ಪ್ರಯುಕ್ತ ನಡೆಸಿದ ವಾಲಿಬಾಲ್ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ತಂಡ ಪ್ರಥಮ, ಜೈಹಿಂದ್ ಯುವಕ ಮಂಡಳಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ಸಾರ್ವಜನಿಕರು, ಶಾಲಾ ಕಾಲೇಜು ಹಾಗೂ ಅಂಗನವಾಡಿಯ ವಿದ್ಯಾರ್ಥಿಗಳಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು, ಕೊಡವ ಹಾಡು ಹಾಗೂ ಕೊಡವ ವಾಲಗತಾಟ್ ಸ್ಪರ್ಧೆಗಳು ನಡೆದಿದ್ದು, ವಿಜೇತರಿಗೆ ಬಹುಮಾನ ನೀಡಲಾಯಿತು.
ಸಂಜೆ 6 ಗಂಟೆಯಿಂದ ಕೊಡವ ತಕ್ಕ್ ಎಳ್ ತಾರಡ ಕೂಟದ ವತಿಯಿಂದ ಬ್ರಹ್ಮತೀರ್ಥ ನಾಟಕ, ಶ್ರೀಮಂಗಲ ಅನುಪಮ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ನೃತ್ಯ, ಶ್ರೀನಿವಾಸ್ ಮಾಸ್ಟರ್ ಅವರಿಂದ  ಹಾಡುಗಾರಿಕೆ, ಕೊಡವ ನೈಟ್ಸ್ ತಂಡದಿಂದ ಕೊಡವ ಸಂಗೀತ ಗೋಷ್ಠಿ ಹಾಗೂ ಸ್ಥಳೀಯ ಜೇಸಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರನ್ನು ರಂಜಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ