ಕೊಡಗು

ಒಣಗಿದ ಮರ ಬಿದ್ದು ಮಹಿಳೆ ಸಾವು

ಸೋಮವಾರಪೇಟೆ:  ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಒಣಗಿದ ಮರ ಕಾರ್ಮಿಕ ಮಹಿಳೆ ಮೇಲೆ ಬಿದ್ದು ಅವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಭಾನುವಾರ ಮಧ್ಯಾಹ್ನ ಕಿರಗಂದೂರು ಗ್ರಾಮದಲ್ಲಿ ಸಂಭವಿಸಿದೆ.
ನಗರ ಸಮೀಪದ ಬಜೆಗುಂಡಿ ಗ್ರಾಮದ ದಿ. ಬೋಜ ಎಂಬವರ ಪತ್ನಿ ರಾಧ (50) ಮೃತರು.
ಭಾನುವಾರ ಅವರಿಗೆ ಕಿರಗಂದೂರು ಗ್ರಾಮದ ಚಂಗಪ್ಪ ಎಂಬವರ ತೋಟದಲ್ಲಿ ಗೊಬ್ಬರ ಹಾಕುವ ಕೆಲಸವಿತ್ತು. ಇತರ ಕಾರ್ಮಿಕರೊಂದಿಗೆ ಗೊಬ್ಬರ ಹಾಕಿ ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ಕೆಲಸದ ಮಧ್ಯೆ ಕೆಲ ನಿಮಿಷ ವಿಶ್ರಾಂತಿ ತೆಗೆದುಕೊಳ್ಳಲೆಂದು ತೋಟದೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕುಳಿತಿದ್ದರು.
ಈ ಸಂದರ್ಭ ಇದ್ದಕ್ಕಿದಂತೆ ಮರ ಮುರಿದ ಶಬ್ದ ಕೇಳಿದೆ. ಶಬ್ದ ಕೇಳಿದ ತಕ್ಷಣ ಎಲ್ಲರೂ ಅಲ್ಲಿಂದ ಓಡಿಹೋಗಿದ್ದಾರೆ. ಅವರಲ್ಲಿ ರಾಧ ಓಡುವುದು ಸ್ವಲ್ಪ ತಡವಾದ್ದರಿಂದ ಮುರಿದು ಬಿದ್ದ ಒಣಗಿದ ಮರ ತಲೆ ಮೇಲೆ ಬಿದ್ದಿದೆ. ಪರಿಣಾಮ ತಲೆ, ಮುಖ ಭಾಗಕ್ಕೆ ತೀವ್ರ ಗಾಯಗಳಾಗಿ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ರಾಧ ಅವರ ಪತಿ ಬೋಜ ನಿಧನರಾಗಿ ಒಂದು ವರ್ಷ ಸಂದ ದಿನವೇ ಪತ್ನಿ ರಾಧ ಮೃತರಾಗಿದ್ದಾರೆ.  ರಾಧರೊಂದಿಗೆ ಮಗಳೂ ತೋಟದ ಕೆಲಸಕ್ಕೆ ಹೋಗುತ್ತಿದ್ದರು. ಮಗಳಿಗೆ ಜ್ವರ ಬಾಧಿಸಿದ್ದ ಕಾರಣ ಭಾನುವಾರ ಕೆಲಸಕ್ಕೆ ಹೋಗಿರಲಿಲ್ಲ. ಇದೀಗ ಅಪ್ಪ, ಅಮ್ಮನನ್ನು ಕಳೆದುಕೊಂಡ ಮಗಳು ಏಕಾಂಗಿಯಾಗಿದ್ದಾಳೆ. ಸ್ಥಳಕ್ಕೆ ಸೋಮವಾರಪೇಟೆ ಠಾಣಾಧಿಕಾರಿ ನಂದೀಶ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!