ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದ್ದು ಮಂಗಳವಾರದ ಸರಾಸರಿ ಮಳೆ 4.96 ಮಿ.ಮೀ. ಕಳೆದ ವರ್ಷ ಇದೇ ದಿನ 14.87 ಮಿ.ಮೀ. ಮಳೆಯಾಗಿತ್ತು.
ಜನವರಿಯಿಂದ ಇಲ್ಲಿಯವರೆಗಿನ ಮಳೆ 601.23 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1326.98 ಮಿ.ಮೀ. ಮಳೆ ದಾಖಲಾಗಿತ್ತು.
ತಾಲೂಕುವಾರು: ಮಡಿಕೇರಿ ತಾಲೂಕಿನಲ್ಲಿ ಮಂಗಳವಾರ 8.8 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 2.1 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 3.97 ಮಿ.ಮೀ.ಸರಾಸರಿ ಮಳೆಯಾಗಿದೆ.
ಹೋಬಳಿವಾರು ವಿವರ (ಮಿ.ಮೀ.): ಮಡಿಕೇರಿ ಕಸಬಾ 11.8, ನಾಪೋಕ್ಲು 2.6, ಸಂಪಾಜೆ 9.8, ಭಾಗಮಂಡಲ 11, ವಿರಾಜಪೇಟೆ ಕಸಬಾ 5.2, ಹುದಿಕೇರಿ 1.8, ಶ್ರೀಮಂಗಲ 3.4, ಪೊನ್ನಂಪೇಟೆ 1.2, ಅಮ್ಮತಿ 1, ಸೋಮವಾರಪೇಟೆ ಕಸಬಾ 2.8, ಶಾಂತಳ್ಳಿ 12.4, ಕೊಡ್ಲಿಪೇಟೆ 0.2, ಕುಶಾಲನಗರ 4.2, ಸುಂಟಿಕೊಪ್ಪ 4.2 ಮಿ.ಮೀ. ಮಳೆಯಾಗಿದೆ.
ಹಾರಂಗಿ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಮಂಗಳವಾರದ ನೀರಿನ ಮಟ್ಟ 2827.35 ಅಡಿ. ಮಂಗಳವಾರದ ಒಳ ಹರಿವು 266 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 8992 ಕ್ಯೂಸೆಕ್ ಆಗಿತ್ತು.