ಕೊಡಗು

24 ಗಂಟೆ ಕತ್ತಲೆ

ಗೋಣಿಕೊಪ್ಪಲು: ಆನೆಚೌಕೂರು ವನ್ಯಜೀವಿ ವಲಯದ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ 66 ಕೆ.ವಿ.ಲೇನ್ನ ಮೇಲೆ ಒಣಗಿದ್ದ ಭಾರಿ ಗಾತ್ರದ ಬಿದಿರು ಮೆಳೆಗಳು ಬುಡಮೇಲಾಗಿ ಉರುಳಿದ ಪರಿಣಾಮ ವಿರಾಜಪೇಟೆ ತಾಲೂಕಿನ ಜನತೆ ಶುಕ್ರವಾರ ಸಂಜೆ 4 ಗಂಟೆಯಿಂದ ಶನಿವಾರ ಸಂಜೆ ನಾಲ್ಕು ಗಂಟೆಯವರೆಗೆ ಸುಮಾರು 24 ಗಂಟೆಗಳ ಕಾಲ ಕೃತಕ ವಿದ್ಯುತ್ ಅಭಾವ ಎದುರಿಸುವಂತಾಯಿತು.
ಶುಕ್ರವಾರ ರಾತ್ರಿಯಿಡೀ ತಾಲೂಕಿನ ಜನತೆ ಕತ್ತಲಲ್ಲೇ ಕಾಲ ಕಳೆಯುವಂತಾಯಿತು. ಸೆಸ್ಕ್ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ಬಿದಿರು ಮೆಳೆಗಳನ್ನು ತೆರವುಗೊಳಿಸಲು ಕಾಡಿನಲ್ಲಿ ಹೆಣಗಾಡಿದರು. ಗೋಣಿಕೊಪ್ಪಲು ಸೆಸ್ಕ್ ಕಚೇರಿಯ ಕಿರಿಯ ಅಭಿಯಂತರ ರತ್ನಕುಮಾರ್ ಹಾಗೂ 7 ಲೈನ್ಮನೆಗಳು ಶನಿವಾರ ಬೆಳಗ್ಗೆ 7 ಗಂಟೆಗೆ ಆನೆಚೌಕೂರು ವನ್ಯಜೀವಿ ವಲಯದ ಅಭಯಾರಣ್ಯಕ್ಕೆ ತೆರಳಿ ವಿದ್ಯುತ್ತಂತಿ ಮೇಲೆ ಉರುಳಿದ್ದ ಭಾರಿ ಗಾತ್ರದ ಬಿದಿರುಮೆಳೆಗಳನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು.
ಶುಕ್ರವಾರ ರಾತ್ರಿಯೇ ವಿದ್ಯುತ್ ಸಂಪರ್ಕ ಸರಿಪಡಿಸಲು ರಾತ್ರಿ 8 ಗಂಟೆ ಸುಮಾರಿಗೆ ರತ್ನಕುಮಾರ್ ಮತ್ತು ಸಿಬ್ಬಂದಿ ಆನೆಚೌಕೂರುವಿಗೆ ತೆರಳಿದರಾದರೂ, ಕಾಡಾನೆ ಹಾಗೂ ವನ್ಯಪ್ರಾಣಿಗಳ ಸಂಚಾರ ಅಧಿಕವಿರುವ ಹಿನ್ನೆಲೆ ಪೊನ್ನಂಪೇಟೆ ಪೊಲೀಸರು ಅವರನ್ನು ವಾಪಸ್ ಕಳುಹಿಸಿದರು ಎನ್ನಲಾಗಿದೆ.
ಫೀಡರ್ ಸ್ಫೋಟ: ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಒಣ ಬಿದಿರು ಮೆಳೆಗಳನ್ನು 66 ಕೆ.ವಿ. ತಂತಿಯಿಂದ ಬೇರ್ಪಡಿಸಿದರಾದರೂ ಮರುಚಾರ್ಜ್ ಮಾಡುವ ಸಂದರ್ಭ ಪೊನ್ನಂಪೇಟೆ ವಿದ್ಯುತ್ ಮರು ವಿತರಣಾ ಕೇಂದ್ರದಲ್ಲಿ ಫೀಡರ್ ಸ್ಫೋಟಗೊಂಡಿತು. ಹಾಗಾಗಿ ತಾಲೂಕಿನಕ ಜನತೆ ಸಂಜೆ ನಾಲ್ಕು ಗಂಟೆವರೆಗೆ ವಿದ್ಯುತ್ ಇಲ್ಲದೆ ಪರದಾಡುವಂತಾಯಿತು.
ಮಡಿಕೇರಿ ತಾಲೂಕು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 220 ಕೆ.ವಿ. ಕಾಮಗಾರಿ ಮುಗಿದ ಹಿನ್ನೆಲೆಯಲ್ಲಿ ಯಾವುದೇ ವಿದ್ಯುತ್ ವ್ಯತ್ಯಯ ಉಂಟಾಗಲಿಲ್ಲ.
ಮಡಿಕೇರಿ ಸಮೀಪ ಕರ್ಣಂಗೇರಿಯಲ್ಲಿ ಅರಣ್ಯ ಇಲಾಖೆ ಅಡ್ಡಿ ಹಿನ್ನೆಲೆ ಕಳೆದ 3 ವರ್ಷಗಳಿಂದ ವಿರಾಜಪೇಟೆ- ಮಡಿಕೇರಿ 220 ಕೆ.ವಿ. ವಿದ್ಯುತ್ ಲೇನ್ ಹಾಗೂ ಗೋಪುರ ಅಳವಡಿಕೆ ಕಾಮಗಾರಿ ನೆನೆಗುದಿಗೆ ಬಿದ್ದಿದೆ.
ವಿರಾಜಪೇಟೆ- ಮಡಿಕೇರಿ 220 ಕೆ.ವಿ. ಮಾರ್ಗ ಪೂರ್ಣಗೊಂಡಿದ್ದರೆ, ಆನೆಚೌಕೂರು ಕಾಡಿನಲ್ಲಿ ವಿದ್ಯುತ್ ಕಡಿತ ಉಂಟಾಗಿದ್ದರೂ, ಹೂಟಗಳ್ಳಿ-ಹುಣಸೂರು-ಕುಶಾಲನಗರ -ಮಡಿಕೇರಿ ಮಾರ್ಗ ವಿರಾಜಪೇಟೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಿತ್ತು. ಇದೀಗ ತಾಲೂಕಿನ ಜನತೆಯ ತಾಳ್ಮೆಯನ್ನು ಕೆಪಿಟಿಸಿಎಲ್ ಅಧಿಕಾರಿಗಳು ಪರೀಕ್ಷಿಸುತ್ತಿರುವದು ನಿಜಕ್ಕೂ ದುರಂತ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!