ಕೋಲಾರ

ನಾಮಪತ್ರಗಳೇ ಬಂದಿಲ್ಲ

ಶ್ರೀನಿವಾಸಪುರ:  ಮಾ.7ರಂದು ನಡೆಯುವ ಸ್ಥಳೀಯ ಪುರಸಭೆಯ ಚುನಾವಣೆಗೆ ಇದುವರೆವಿಗೂ ಒಂದೇ ಒಂದು ನಾಮಪತ್ರವನ್ನು ಯಾರು ಕೂಡ ಸಲ್ಲಿಸಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡುಗಳಿವೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಬಲಿಷ್ಠವಾಗಿದೆ. ಚುನಾವಣೆಗಳಲ್ಲಿ ಈ ಪಕ್ಷಗಳು ಜಿದ್ದಾಜಿದ್ದಿಗೆ ನಿಲ್ಲುವುದು ಮತ್ತು ಈ ಬಾರಿ ಬಿಜೆಪಿ, ಕೆಜೆಪಿ, ಬಿಎಸ್‌ಆರ್ ಕಾಂಗ್ರೆಸ್ ಪಕ್ಷಗಳು ಕೂಡ ಪುರಸಭೆಯ ಚುನಾವಣೆಗೆ ನಾಮಪತ್ರಗಳನ್ನು ಸಲ್ಲಿಸಿ ಸ್ಪರ್ಧೆಗಿಳಿಯುವುದಾಗಿ ಹೇಳಿಕೊಳ್ಳುತ್ತಿವೆ.
73 ನಾಮಪತ್ರ ಸಲ್ಲಿಕೆ
ಕೋಲಾರ:  ಜಿಲ್ಲೆಯ ಎರಡು ನಗರಸಭೆ ಹಾಗೂ ನಾಲ್ಕು ಪುರಸಭೆಗಳಿಗೆ ಮಾರ್ಚ್ 7ರಂದು ನಡೆಯುವ ಚುನಾವಣೆಗೆ ಗುರುವಾರ ಒಟ್ಟು 73 ನಾಮಪತ್ರಗಳು ಸಲ್ಲಿಕೆಯಾಗಿವೆ. ಕೋಲಾರ ನಗರಸಭೆಗೆ 6, ಕೆಜಿಎಫ್ ನಗರಸಭೆಗೆ 12, ಮಾಲೂರು ಪುರಸಭೆಗೆ 7, ಬಂಗಾರಪೇಟೆ-17, ಮುಳಬಾಗಿಲು-23 ನಾಮಪತ್ರಗಳು ಸಂದಾಯವಾಗಿದ್ದು, ಶ್ರೀನಿವಾಸಪುರದಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಕೋಲಾರದ 35, ಕೆಜಿಎಫ್‌ನ 35, ಶ್ರೀನಿವಾಸಪುರದ 23, ಮಾಲೂರಿನ 23, ಬಂಗಾರಪೇಟೆಯ 23 ಹಾಗೂ ಮುಳಬಾಗಿಲು ಪುರಸಭೆಯ 27 ವಾರ್ಡುಗಳಿಗೆ ಚುನಾವಣೆ ನಡೆಯಬೇಕಾಗಿದ್ದು ಫೆ.23ರಂದು ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿರುವುದರಿಂದ ಉಮೇದುವಾರಿಕೆ ಸಲ್ಲಿಕೆಯ ಭರಾಟೆ ಶುಕ್ರವಾರ ಮತ್ತು ಶನಿವಾರ ಹೆಚ್ಚಾಗುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!

"ತಿರಂಗಾ ಹಾರಿಸುವುದು ಅಪರಾಧವಲ್ಲ ಎಂಬುದನ್ನು ತೋರಿಸುತ್ತೇವೆ": ಅಕ್ಟೋಬರ್ 16ಕ್ಕೆ ತ್ರಿವರ್ಣ ಧ್ವಜದೊಂದಿಗೆ ಬನ್ನಿ- ಅಭಿಜಿತ್ ದೀಪ್ಕೆ ಕರೆ

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!