ಚಿಂತಾಮಣಿ: ಇಲ್ಲಿನ ನಂದನಹೊಸಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸತ್ಯಭಾಮಾ ಅವರ ಕರ್ತವ್ಯ ನಿರ್ಲಕ್ಷ್ಯ, ಸರ್ವಾಧಿಕಾರಿ ಧೋರಣೆ ಪರಿಗಣಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶಿಸ್ತು ಪ್ರಾಧಿಕಾರದ ಅಧಿಕಾರಿ ಬಿ.ಎಸ್. ಶೇಖರಪ್ಪ ಆದೇಶ ಹೊರಡಿಸಿದ್ದಾರೆ. ಶಾಲೆಯಲ್ಲಿ ಮುಖ್ಯಶಿಕ್ಷಕಿ ಸತ್ಯಭಾಮಾ ಹಾಗೂ ಸಹಶಿಕ್ಷಕರ ನಡುವೆ ಜೂ.8ರಂದು ಗಲಾಟೆ ನಡೆದಿತ್ತು. ಇದರಿಂದ ಪಾಠ-ಪ್ರವಚನಗಳು ಸರಿಯಾಗಿ ಸಾಗದಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದವು. ಚಿಕ್ಕಬಳ್ಳಾಪುರ ಡಿಸಿ ಡಾ.ಮಂಜುಳಾ , ಡಿಡಿಪಿಐ ಅಜಿತ್ಪ್ರಸಾದ್ ಅವರಿಗೆ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಅಮಾನತು ಆದೇಶ ಜಾರಿಗೊಳಿಸಲಾಗಿದೆ.