ಕೋಲಾರ

ಪದಾಧಿಕಾರಿಗಳ ಆಯ್ಕೆ

ಬಾಗೇಪಲ್ಲಿ: ಜೈ ಕರ್ನಾಟಕ ಸಂಘಟನೆಯ ಗೌರವ ಅಧ್ಯಕ್ಷರಾಗಿ ಜಭೀವುಲ್ಲಾ, ಅಧ್ಯಕ್ಷರಾಗಿ ಬಿ. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪ್ರದೀಪ್  ಕುಮಾರ್,  ಉಪಾಧ್ಯಕ್ಷ ಭಾರ್ಗವ, ಖಜಾಂಚಿ ಬಾಬಾಜಾನ್, ಕಾರ್ಯದರ್ಶಿಗಳಾಗಿ ಶ್ರೀಕಾಂತ್ , ಸಂಪತ್ತು, ಸಂಘಟನಾ ಸಲಹೆಗಾರ ಟಿ.ಎನ್. ನಾಗ, ಯುವಘಟಕದ ಅಧ್ಯಕ್ಷರಾಗಿ ಇದಾಯದ್ವುಲ್ಲಾ ರವರನ್ನು ಆಯ್ಕೆ ಮಾಡಲಾಗಿದೆ.
ಮಾದಿಗ ದಂಡೋರ ಸಭೆ ನಾಳೆ
ಮುಳಬಾಗಲು: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಲ್ಲಿ ಆಗಸ್ಟ್ 3ರಂದು ರಾಜ್ಯ ಮಟ್ಟದ ಮಾದಿಗ ದಂಡೋರ ಸಭೆ ನಡೆಯಲಿದ್ದು ಮುಳಬಾಗಲುನಿಂದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋಲಾರ ಜಿಲ್ಲಾ ದಂಡೋರ ಅಧ್ಯಕ್ಷ ಆರ್. ನಾಗರಾಜ್ ಕೋರಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಮಾತನಾಡಿದ ಅವರು ದಂಡೋರದ ಹಲವಾರು ಬೇಡಿಕೆಗಳನ್ನು ತೀರಿಸಲು ಸರ್ಕಾರದ ಮೇಲೆ ಒತ್ತಾಯಿಸಲಾಗುವುದೆಂದರು. ವಕೀಲ ವಿ.ಜಯಪ್ಪ, ಮುದ್ದುವೆಂಕಟೇಶ್, ವೇಣು, ಮಂಜುನಾಥ್, ತಾಲೂಕು ಅಧ್ಯಕ್ಷ ರಾಮಪ್ಪ  ಇದ್ದರು.
ಮಾದರಿ ಕಾಲೇಜಿಗೆ ಬದ್ಧ
ಮಾಲೂರು: ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ಹಾಗೂ ಕಾಲೇಜು ಭೋದಕ ವರ್ಗದ ಸಹಕಾರದಿಂದ ಸರ್ಕಾರಿ ಕಾಲೇಜನ್ನು ತಾಲೂಕಿನಲ್ಲೇ ಯಾವ ಖಾಸಗಿ ಕಾಲೇಜುಗಳಿಗೆ ಕಮ್ಮಿ ಇಲ್ಲದಂತೆ ಮಾದರಿ ಸರ್ಕಾರಿ ಕಾಲೇಜುನ್ನಾಗಿ ಮಾಡುವುದಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷ ಎಂ.ಎನ್. ವೇಣುಗೋಪಾಲ್ ಹೇಳಿದರು. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಅಭಿವೃದ್ಧಿ ಹಳೇ ಸಮಿತಿಗೆ ಬೀಳ್ಕೊಡುವ ಹಾಗೂ ನೂತನ ಸಮಿತಿಗೆ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಸಕ ಮಂಜುನಾಥ್ಗೌಡ ರವರು ನಮ್ಮ ತಂಡದ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿ ಹೇಳಿದರು. ಕಾಲೇಜು ಸಮಿತಿಯ ನಿಕಟಪೂರ್ವ ಅಧ್ಯಕ್ಷ ಬಿ.ಎನ್.ರಾಜರಾಂ, ಪ್ರಾಂಶುಪಾಲ ರಾಮಕೃಷ್ಣ, ಸಮಿತಿಯ ಹಿರಿಯ ಆರ್. ನಾಗರಾಜ್, ಉಪ ಪ್ರಾಂಶುಪಾಲ ಪಾಪಣ್ಣ ಮಾತನಾಡಿದರು. ಇದೇ ವೇಳೆ ಆ.15ರೊಳಗೆ ಕಾಲೇಜು ಕಟ್ಟಡಕ್ಕೆ ಸುಣ್ಣ-ಬಣ್ಣ ಹೊಡೆಸಿಕೊಡುವುದಾಗಿ ಸಮಿತಿಯ ಅಧ್ಯಕ್ಷ ವೇಣುಗೋಪಾಲ್ ತಿಳಿಸಿದರು. ನಿಕಟಪೂರ್ವ ಸಮಿತಿಯ ನಂಜುಂಡಪ್ಪ, ಸಮಿತಿಯ ವಿ.ಶ್ರೀನಿವಾಸ್, ರಾಮಾಂಜಿನಪ್ಪ, ಕೇಬಲ್ ನಾಗರಾಜ್, ವೆಂಕಟೇಶ್, ಮುನಿಕೃಷ್ಣ, ಕೆ. ರಾಮಾಂಜಿ, ಪುಪ್ಬಲತಾ ಇದ್ದರು.
ರಾಜಿನಾಮೆ ಅಂಗೀಕಾರಕ್ಕೆ ಮನವಿ
ಮಾಲೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ನ ಸಂಚಾಲಕ ಹುದ್ದೆಗೆ ನೀಡಿರುವ ರಾಜಿನಾಮೆಯನ್ನು ಅಂಗೀಕರಿಸುವಂತೆ ಡಿ.ಎಂ. ವೆಂಕಟೇಶ್ ರವರು ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್ ಅವರಿಗೆ ಮನವಿ ಮಾಡಿದ್ದಾರೆ. ಈ ಹಿಂದೆನೇ ಸಲ್ಲಿಸಿದ್ದ ರಾಜಿನಾಮೆಯನ್ನು ತಮ್ಮ ಒತ್ತಾಯದ ಮೇರೆಗೆ ವಾಪಸು ಪಡೆದು ಮತ್ತೆ ಕಸಾಪದಲ್ಲಿ ಸಕ್ರಿಯೆವಾಗಿದ್ದೆ. ಕಳೆದ ವಾರ ತಾಲೂಕಿನ ಚಿಕ್ಕತಿರುಪತಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ತಿಂಗಳ ಕಾಲ ಹಗಲು ರಾತ್ರಿ ಶ್ರಮಿಸಿದೆ. ಆದರೆ ಸಮ್ಮೇಳನದ ದಿನ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದಂತೆ ಕಾರ್ಯಕ್ರಮವನ್ನು ನಿರೂಪಿಸಬೇಕಾದ ನನ್ನನ್ನು ಮೂಲೆಗುಂಪು ಮಾಡಿ ಇತರ ವ್ಯಕ್ತಿಗೆ ಅವಕಾಶ ಮಾಡಿಕೊಡಲಾಯಿತು. ಕಾಣದ ಕೈ ಈ ವರ್ತನೆಗಳಿಂದ ಮಾನಸಿಕವಾಗಿ ಕುಗ್ಗಿದ್ದು, ಯಾವೂದೇ ಕಾರಣಕ್ಕೂ ಇನ್ನೂ ಕಸಾಪದ ಪದಾಧಿಕಾರಿಯಾಗಿ ಮುಂದುವರೆಯಲು ಸಾಧ್ಯವಿಲ್ಲದಿರುವುದರಿಂದ ನಾನು ಕಳುಹಿಸಿರುವ ರಾಜಿನಾಮೆಯನ್ನು ಅಂಗೀಕರಿಸಿ ನನ್ನನ್ನು ವಿಮುಕ್ತನಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಹುಂಡಿ ಸಂಗ್ರಹ
ಮುಳಬಾಗಲು: ತಾಲೂಕಿನ ಪುರಾಣ ಪ್ರಸಿದ್ಧ ಗಣಪತಿ ದೇವಾಲಯದಲ್ಲಿ ಕಂದಾಯ ಮತ್ತು ಮುಜರಾಯಿ ಇಲಾಖೆಯ ವತಿಯಿಂದ ಶುಕ್ರವಾರ ಹುಂಡಿ ಎಣೆಕೆ ನಡೆಸಲಾಯಿತು. ಏಳು ತಿಂಗಳ ಅವಧಿಗೆ ಹುಂಡಿಯಲ್ಲಿ ರು. 9 ಲಕ್ಷ 40 ಸಾವಿರ ಸಂಗ್ರಹವಾಗಿದ್ದವು. ಎಣೆಕೆ ವೇಳೆಯಲ್ಲಿ ತಹಶೀಲ್ದಾರ್ ಗ್ರೇಡ್ -2 ನಾರಾಯಣ್ ವಠಲ್, ರಾಜಸ್ವ ನಿರೀಕ್ಷಕರಾದ ಬಲರಾಮೇಗೌಡ, ಮುಜರಾಯಿ  ಇಲಾಖೆಯ ನವೀನ್ಕುಮಾರ್, ಚಲುವಸಸ್ವಾಮಿ, ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಸಮಾಜದ ಹಿತಕ್ಕೆ ಶ್ರಮಿಸಿ
ಶಿಡ್ಲಘಟ್ಟ: ಆರ್ಯವೈಶ್ಯ ಸಮಾಜದ ಉಪಯೋಗಕ್ಕಾಗಿ ಶ್ರಮಿಸಬೇಕು ಎಂದು ಆರ್ಯವೈಶ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಎ.ಜಿ. ನಾಗೇಂದ್ರ ಹೇಳಿದರು. ಪಟ್ಟಣದ ವಾಸವಿ ರಸ್ತೆಯ ವಾಸವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಆರ್ಯವೈಶ್ಯ ಮಂಡಳಿ ಕಾರ್ಯಕಾರಿ ಮಂಡಳಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಸಂಘ ಈವರೆಗೂ ಅನೇಕ ಸಮಾಜದ ಹಿತ ಬಯಸುವ ಕಾರ್ಯಕ್ರಮಗಳನ್ನು ಮಾಡಿದ್ದು, ಸಂಘದಲ್ಲಿ ರಾಜಕೀಯ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದರು. ನೂತನ ಅಧ್ಯಕ್ಷರಾಗಿ ಎಲ್. ವೆಂಕಟರತ್ನಂಗುಪ್ತಾ, ಉಪಾಧ್ಯಕ್ಷ ಟಿ.ಎಸ್. ಸುರೇಶ್ಬಾಬು, ಕಾರ್ಯದರ್ಶಿಯಾಗಿ ಎನ್. ಬದ್ರಿನಾಥ್, ಜಂಟಿ ಕಾರ್ಯದರ್ಶಿಯಾಗಿ ಎ.ಎನ್. ಮುರಳೀಕೃಷ್ಣ, ಖಜಾಂಚಿಯಾಗಿ ಕೆ.ವಿ. ಲಕ್ಷ್ಮೀಪ್ರಸಾದ್, ನಿರ್ದೇಶಕರಾಗಿ ಟಿ.ಪಿ.ಅಶೋಕ್ಕುಮಾರ್, ಎಂ.ಎಸ್. ಬಲರಾಮ್, ಎಸ್. ಸತ್ಯನಾರಾಯಣ, ಕೆ.ಎನ್. ದಿವಾಕರ್, ವಿ.ಎಸ್. ಬದ್ರಿನಾಥ್, ಪಿ.ಎಸ್. ರಾಧಾಕೃಷ್ಣ ಆಯ್ಕೆಯಾಗಿದ್ದಾರೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ