ಕೋಲಾರ

ಸರಕು ಲಾರಿ ಡಿಕ್ಕಿ: ಒಬ್ಬರ ಸಾವು

ಮುಳಬಾಗಲು: ತಾಲೂಕಿನ ನಂಗಲಿ ಗ್ರಾಮದ ಬಸ್ನಿಲ್ದಾಣ ಬಳಿ ಶುಕ್ರವಾರ ಬೆಳಿಗ್ಗೆ ದ್ವಿಚಕ್ರವಾಹನ ಮತ್ತು ಸರಕು ಸಾಗಾಣೆಕೆ ವಾಹನದ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಒಬ್ಬರು ಮೃತಪಟ್ಟ ಘಟನೆ ನಡೆದಿದೆ.  ಮೃತರನ್ನು ತಾಲೂಕಿನ ಕಸುವುಗಾನಹಳ್ಳಿ ಗ್ರಾಮದ ಸುರೇಶ್(32) ಎಂದು ಗುರ್ತಿಸಲಾಗಿದೆ. ಸರಕು ಸಾಗಾಣೆಕೆ ಚಾಲಕ ನಾಪತ್ತೆಯಾಗಿದ್ದು, ವಾಹನ ವಶಪಡಿಸಿಕೊಳ್ಳಲಾಗಿದೆ. ನಂಗಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಸರ್ಕಲ್ ಇನ್ಸೆಪೆಕ್ಟರ್ ಕೃಷ್ಣಪ್ಪ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು.
ಕಾಡುಹಂದಿಗಳ ದಾಳಿ
ಬಾಗೇಪಲ್ಲಿ: ಕಾಡುಹಂದಿಗಳು ದಾಳಿ ಮಾಡಿ ವ್ಯಕ್ತಿಯೊಬ್ಬನ ಎರಡೂ ಕೈ ಬೆರಳುಗಳು ಹಾಗೂ ಮುಖದ ಮೇಲೆ ಕಚ್ಚಿ ಗಾಯಗೊಳಿಸಿರುವ ಘಟನೆ ಆಂಧ್ರಪ್ರದೇಶದ ಕೊಡಿಕೊಂಡ ಹಾಗೂ ತಾಲೂಕಿನ ಗೂಳೂರು ಹೋಬಳಿ ವ್ಯಾಪ್ತಿಯ ಜಿಲಾಜರ್ಲು ಗ್ರಾಮದ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ಕಾಡು ಹಂದಿಗಳ ದಾಳಿಗೆ ಒಳಗಾಗಿರುವ ವ್ಯಕ್ತಿ ತಾಲೂಕಿನ ಚನ್ನರಾಯಪಲ್ಲಿ ಗ್ರಾಮದ ಗಂಗರಾಜು(30). ಶುಕ್ರವಾರ ಬೆಳಗಿನ ಜಾವದಲ್ಲಿ ಜಿಲಾಜರ್ಲು ಗ್ರಾಮದ ಹಾಗೂ ಆಂಧ್ರ ಪ್ರದೇಶದ ಕೊಡಿಕೊಂಡದ ಬೆಟ್ಟದ ಬಳಿ ಇರುವಂತಹ ತಮ್ಮ ಜಮೀನನಲ್ಲಿ ಸಂಚರಿಸುತ್ತಿದ್ದಾಗ ಗಂಗರಾಜುವಿನ ಮೇಲೆ ಏಕಾಏಕಿ ಕಾಡುಹಂದಿಗಳು ದಾಳಿ ಮಾಡಿವೆ. ಎರಡೂ ಕೈ ಬೆರಳುಗಳು ಹಾಗೂ ಮುಖದ ಮೇಲೆ ಕಚ್ಚಿವೆ. ವಿಷಯ ತಿಳಿದ ನೆರೆಹೊರೆಯವರು ತಕ್ಷಣವೇ ಆಂಧ್ರಪ್ರದೇಶದ ಕೊಡಿಕೊಂಡ ಆಸ್ಪತ್ರೆ ಮತ್ತು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ.
ಕೈದಿಗಳಿಗೆ ಎಚ್ಚರಿಕೆ
ಕೋಲಾರ: ನಗರದ ಉಪ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿರುವವರು ಶಿಸ್ತು ಉಲ್ಲಂಘಿಸಿದರೆ ಜೈಲಿನಿಂದ ಬಿಡುಗಡೆ ಆಗುವುದಕ್ಕೆ ಸಮಸ್ಯೆ ಆಗುತ್ತದೆ ಎಂದು ಡಿವೈಎಸ್ಪಿ ಅಶೋಕ್ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಕಾರಾಗೃಹದಲ್ಲಿ ಇತ್ತೀಚೆಗೆ ನಡೆದ ಗುಂಪು ಘರ್ಷಣೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಅಶೋಕ್ಕುಮಾರ್ ಅವರು ಸಿಪಿಐ ಶಿವಕುಮಾರ್ ಅವರೊಂದಿಗೆ ಶುಕ್ರವಾರ ಕಾರಾಗೃಹಕ್ಕೆ ಭೇಟಿ ನೀಡಿ ಕೈದಿಗಳಿಗೆ ಹದ್ದುಬಸ್ತಿನಲ್ಲಿ ಇರುವಂತೆ ಸೂಚಿಸಿದರು. ಕಾರಾಗೃಹದ ನಿಯಮಗಳನ್ನು ಇಲ್ಲಿನ ಪ್ರತಿಯೊಬ್ಬ ಕೈದಿ ಪಾಲಿಸಬೇಕು, ಶಿಸ್ತಿನಿಂದ ವರ್ತಿಸಬೇಕು, ಸಮಸ್ಯೆ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು, ಗುಂಪುಗಾರಿಕೆ ಮಾಡಿಕೊಂಡು ಗಲಾಟೆ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವಿಚಾರಣಾಧೀನ ಕೈದಿಗಳು ಶಿಸ್ತು ಮತ್ತು ಸಮಯ ಕಾಪಾಡಿಕೊಂಡಲ್ಲಿ ಬೇಗನೆ ಜೈಲಿನಿಂದ ಹೊರ ಬರುವುದಕ್ಕೆ ಸಾಧ್ಯವಾಗುತ್ತದೆ. ದುರ್ವರ್ತನೆ ಮುಂದುವರಿದಲ್ಲಿ ಬೇರೆ ಕಡೆಗೆ ವರ್ಗಾವಣೆ ಮಾಡಬೇಕಾಗುತ್ತದೆ ಎಂದು ತಿಳಿಸಿದಾಗ, ಕೈದಿಗಳು ಇನ್ನು ಮುಂದೆ ತಪ್ಪು ಮಾಡುವುದಿಲ್ಲವೆಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಂದಿಖಾನೆಯ ಅಧೀಕ್ಷಕ ಜಯರಾಮರೆಡ್ಡಿ ಇದ್ದರು.
ಅಂಗನವಾಡಿ:  ಅರ್ಜಿ ಆಹ್ವಾನ
ಮುಳಬಾಗಲು: ತಾಲೂಕಿನ 11 ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರ ಮತ್ತು 34 ಕೇಂದ್ರಗಳ ಸಹಾಯಕರಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಪ್ಪ ಶುಕ್ರವಾರ ತಿಳಿಸಿದ್ದಾರೆ. ಇಂದಿನಿಂದ ಆಗಸ್ಟ್ 30ರವರೆವಿಗೂ ಆನ್ಲೈನ್ ಮೂಲಕವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಗ್ರಾ.ಪಂ. ಕಚೇರಿಗಳ ಹೆಲ್ಪ್ಲೈನ್ ನೆಮ್ಮದಿ ಕೇಂದ್ರಗಳು, ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿಗಳ ಕಚೇರಿ ಹೆಲ್ಪ್ಗಳ ಮೂಲಕವೂ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 18ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಮೂಲ ದಾಖಲೆ ಮತ್ತು ಜೆರಾಕ್ಸ್ ಪ್ರತಿಗಳೊಂದಿಗೆ ಸೆ.5ರಂದು ಬೆಳಿಗ್ಗೆ 1.30ಕ್ಕೆ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಾಜರಾಗಲು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!