ಚಿಂತಾಮಣಿ: ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗಾಗಿ ಜಿಲ್ಲಾ ವ್ಯಾಪ್ತಿಯ ಕೇಂದ್ರಗಳಲ್ಲಿ ಕಾರ್ಖಾನೆಗಳನ್ನು ಮಾಡಲು ವರ್ತಕರು ಹಾಗೂ ಉದ್ದಿಮಿಗಳು ಮುಂದಾಗಬೇಕೆಂದು ಸಂಸದ ಕೆ.ಎಚ್. ಮುನಿಯಪ್ಪ ಕರೆ ನೀಡಿದರು.
ನಗರದ ಸ್ವಾಮಿ ಕಮರ್ಷಿಯಲ್ ಕಾಂಪ್ಲೆಕ್ಸ್ನಲ್ಲಿ ಚಿಂತಾಮಣಿ ವಾಣಿಜ್ಯ ಸಂಘಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ವಾಣಿಜ್ಯ ನಗರಿ ಚಿಂತಾಮಣಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಿಸಲು ರಾಜ್ಯ ಸರ್ಕಾರ ಪ್ರದೇಶಗಲ್ಲಿ ವಾಣಿಜ್ಯ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ವಾಣಿಜ್ಯ ಸಂಘಗಳ ಒಕ್ಕೂಟದ ಅಧ್ಯಕ್ಷ ಡಾ. ಶಿವಣ್ಣ ಮಾತನಾಡಿ, ಸಮರ್ಪಕವಾಗಿ ವ್ಯಾಪಾರಸ್ಥರು ತೆರಿಗೆ ಕಟ್ಟುತ್ತಿದ್ದರೂ ಸರ್ಕಾರಗಳು ಬದಲಾವಣೆ ಆದಂತೆ ಆದಾಯ ತೆರೆಗೆಯೂ ಹೆಚ್ಚುತ್ತಿರುವುದರಿಂದ ವರ್ತಕರು ಹಾಗೂ ಗ್ರಾಹಕರ ಮೇಲೆ ಭಾರ ಹೊರಿಸಿದಂತಾಗಿದೆ ಎಂದು ಹೇಳಿದರು. ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ನಗರ ಸಭಾಧ್ಯಕ್ಷ ಜಿಯಾ ಉಲ್ಲಾ ರೆಹಮಾನ್, ನ.ಎಸ್. ರಾಜಶೇಖರ್, ಕೆ.ಎನ್. ಸುಬ್ಬರಾಂ, ನಾಗೇಂದ್ರ ಪ್ರಸಾದ್, ಎಂ.ಎ. ಸುರೇಶ್, ಸಿ. ವೆಂಕಟರಮಣಯ್ಯ, ಎಂ.ವಿ. ಉಮೇಶ್ ಗುಪ್ತ ಇದ್ದರು.