ಕನ್ನಡಪ್ರಭವಾರ್ತೆ, ಕೋಲಾರ, ಆ. 3
ಶತಶತಮಾನಗಳಿಂದ ದೇವಾಲಯ, ಮಠ, ಮನೆಗಳಿಗೆ ಪ್ರವೇಶವಿಲ್ಲದೆ ಶೋಷಣೆಗೆ ಒಳಗಾಗಿರುವ ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಪ್ರಗತಿಪರ ಚಿಂತಕರ ಚಾವಡಿಯಿಂದ ಗೃಹ ಪ್ರವೇಶ ಎಂಬ ವಿನೂತನ ಆಂದೋಲನವನ್ನು ಆರಂಭಿಸಲಾಗಿದೆ. ಇದಕ್ಕೆ ಜಿಲ್ಲೆಯ ಸಮಸ್ತ ಜನತೆ ಸಹಕಾರ ನೀಡಬೇಕೆಂದು ಚಾವಡಿಯ ಮುಖ್ಯಸ್ಥ, ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ಜಿ. ಶಿವಪ್ಪ ಅರಿವು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ದಲಿತರ ಗೃಹ ಪ್ರವೇಶದ ಕಾರ್ಯಕ್ರಮದ ಬಗ್ಗೆ ವಿವರ ನೀಡಿ, ಮುಳಬಾಗಿಲು ತಾಲೂಕಿನಲ್ಲಿ ಈಗಾಗಲೇ ಸದರಿ ಕಾರ್ಯಕ್ರಮ ಆರಂಭಗೊಂಡಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಿಗೂ ಈ ಕಾರ್ಯಕ್ರಮ ವಿಸ್ತರಿಸಲಾಗುತ್ತಿದೆ. ಜನತೆ ದಲಿತರಿಗೆ ಸಾಮಾಜಿಕ ನ್ಯಾಯ ಕಲ್ಪಿಸಲು ಮತ್ತು ನ್ಯಾಯ ಸಮ್ಮತ ಹಕ್ಕುಗಳನ್ನು ಪ್ರತಿಪಾದಿಸಲು ಬೆಂಬಲ ನೀಡಬೇಕೆಂದರು.
ಇಂದಿಗೂ ಜಿಲ್ಲೆಯ ಅನೇಕ ಕಡೆ ದಲಿತರನ್ನು ದೇವಾಲಯ, ಮನೆ, ಮಠಗಳಿಗೆ ಸೇರಿಸಿಕೊಳ್ಳದೆ ಶೋಷಣೆ ಮಾಡಲಾಗುತ್ತಿದೆ. ಇದಕ್ಕೆ ಅನಾದಿಕಾಲದಿಂದ ಆಚರಣೆಯಲ್ಲಿರುವ ಅಸ್ಪೃಶ್ಯತೆ ಹಾಗೂ ಜಾತಿಯತೆ ಪ್ರಮುಖ ಕಾರಣವಾಗಿದೆ. ದಲಿತರು ಸಹ ಮಾನವ ಸಮಾಜದ ಅವಿಭಾಜ್ಯ ಅಂಗವೆಂಬುದನ್ನು ಸವರ್ಣಿಯರು, ಜಾತಿಯತೆಯನ್ನು ಪ್ರತಿಪಾದಿಸುವವರು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ಅನ್ಯಾಯ: ದಲಿತರಿಗೆ ದೇವಾಲಯ, ಮಠಗಳಿಗೆ ಹಾಗೂ ಮನೆಗಳಿಗೆ ಪ್ರವೇಶ ನೀಡಿ ಎಂದು ಪ್ರತಿಯೊಬ್ಬರಲ್ಲಿ ಮನವಿ ಮಾಡುತ್ತೇವೆ. ಮನೆಯ ಹೊರಗಡೆ ನಿಲ್ಲಿಸಿ ದಲಿತರನ್ನು ಮಾತನಾಡಿಸುವುದು ಅನ್ಯಾಯದ ಪರಮಾವಧಿ. ಕನಿಷ್ಠ ಮನೆ ಪಡಸಾಲೆಗೆ ಕರೆದು ಮಾತನಾಡಿಸುವ ಮನೋಭೂಮಿಕೆ ಉಂಟು ಮಾಡುವ ಉದ್ದೇಶದಿಂದ ದಲಿತರ ಗೃಹ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಯಾವುದೇ ಜಾತಿ, ವರ್ಗದ ವಿರುದ್ಧವಲ್ಲ. ಸಾಮಾಜಿಕ ಪರಿವರ್ತನೆಗಾಗಿ ಎಂದು ಹೇಳಿದರು.
ಜನಜಾಗೃತಿ: ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ ನಿವಾರಣೆ ಕೇವಲ ಪ್ರಗತಿಪರರಿಂದ ಮಾತ್ರ ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸುವುದಾಗಿ ತಿಳಿಸಿದರು.
ದಲಿತರಲ್ಲೇ ನೂರೆಂಟು ಪಂಗಡಗಳು ಇವೆ. ಶ್ರೀಮಂತರು, ಬಡವರ ನಡುವೆ ಅನೇಕ ವ್ಯತ್ಯಾಸಗಳು ಇವೆ. ದಲಿತರಲ್ಲಿನ ವರ್ಗಬೇಧ ನಿವಾರಣೆ ಮಾಡುವುದಕ್ಕೆ ಗೃಹ ಪ್ರವೇಶ ಕಾರ್ಯಕ್ರಮ ಸಹಾಯವಾಗಲಿದೆ ಎಂದು ದಲಿತ ಮುಖಂಡ ವಿಜಯಕುಮಾರ್ ತಿಳಿಸಿದರು.
ಪಂಡಿತ್ ಮುನಿವೆಂಕಟಪ್ಪ ಮಾತನಾಡಿ, ಪ್ರಭಾವಿ ದಲಿತ ಮುಖಂಡರನ್ನು, ಉನ್ನತ ಪದವಿಗಳನ್ನು ಹೊಂದಿರುವ ರಾಜಕಾರಣಿಗಳನ್ನು ದೇವಾಲಯ, ಮಠ, ಮನೆಗಳಿಗೆ ಸೇರಿಸಿ ಗೌರವ ನೀಡುವ ಕೆಲವರು ಅದೇ ವರ್ಗಕ್ಕೆ ಸೇರಿದ ಬಡವರನ್ನು ದೂರ ನಿಲ್ಲಿಸಿ ಮಾತನಾಡುವುದಕ್ಕೆ ಕಾರಣ ಏನೆಂಬುದು ಅರ್ಥವಾಗುತ್ತಿಲ್ಲ ಇದ್ದರು.
ಇಂದಿಗೂ ಜಿಲ್ಲೆಯ ಅನೇಕ ಕಡೆ ದಲಿತರನ್ನು ದೇವಾಲಯ, ಮನೆ, ಮಠಗಳಿಗೆ ಸೇರಿಸಿಕೊಳ್ಳದೆ ಶೋಷಣೆ ಮಾಡಲಾಗುತ್ತಿದೆ. ಇದಕ್ಕೆ ಅನಾದಿಕಾಲದಿಂದ ಆಚರಣೆಯಲ್ಲಿರುವ ಅಸ್ಪೃಶ್ಯತೆ ಹಾಗೂ ಜಾತಿಯತೆ ಪ್ರಮುಖ ಕಾರಣವಾಗಿದೆ. ದಲಿತರು ಸಹ ಮಾನವ ಸಮಾಜದ ಅವಿಭಾಜ್ಯ ಅಂಗವೆಂಬುದನ್ನು ಸವರ್ಣಿಯರು, ಜಾತಿಯತೆಯನ್ನು ಪ್ರತಿಪಾದಿಸುವವರು ಅರ್ಥ ಮಾಡಿಕೊಳ್ಳಬೇಕಾಗಿದ
ಡಾ.ಜಿ. ಶಿವಪ್ಪ