ಕೋಲಾರ

ಏರಿದ ಟೊಮೇಟೊ ಬೆಲೆ: ರೈತರಲ್ಲಿ ಹರ್ಷ

ಬಂಗಾರಪೇಟೆ: ಕಳೆದ ನಾಲ್ಕು ತಿಂಗಳಿಂದ ಟೊಮೇಟೊ ಸೂಕ್ತ ಬೆಲೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ವಾರದಿಂದ ಉತ್ತಮ ಬೆಲೆ ದೊರೆಯುತ್ತಿದ್ದು, ಬರಗಾಲದಲ್ಲಿ ರೈತರು ಹರ್ಷಗೊಂಡಿದ್ದಾರೆ.
ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಟೊಮೇಟೊ ಬೆಳೆ ಬೆಳೆಯುವುದು ವಾಡಿಕೆ. ಕಳೆದ ನಾಲ್ಕು ತಿಂಗಳಿಂದ ಮಳೆ ಇಲ್ಲದೆ ರೈತರು ಹೈರಾಣಾಗಿದ್ದು, ಪ್ರತಿ ಕೆಜಿಗೆ 2ರಿಂದ 3 ರು. ಮಾತ್ರ ಸಿಗುತ್ತಿತ್ತು. ಟೊಮೇಟೊ ಕಿತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೂ ಕೂಲಿ ಹಣ ಸಹ ಕೈಗೆ ದೊರೆಯುತ್ತಿರಲಿಲ್ಲ. ಇದರಿಂದ ಟೊಮೇಟೊ ತೋಟಗಳಲ್ಲೇ ಕೊಳೆಯುತ್ತಿತ್ತು.
ಕಳೆದ ಒಂದು ವಾರದಿಂದ ದಿಢೀರನೆ ಟೊಮೇಟೊಗೆ ಉತ್ತಮ ಬೇಡಿಕೆ ಬಂದಿದೆ. 25ಕೆಜಿ ಬಾಕ್ಸ್ ಟೊಮೇಟೊಗೆ 500ವರೆಗೆ ಬೇಡಿಕೆ ಇದೆ. ಹವಾಮಾನ ವೈಪರಿತ್ಯದಿಂದಾಗಿ ಬೆಲೆ ಗಗನಕ್ಕೇರುಂತಾಗಿದೆ. ಪಕ್ಕದ ತಮಿಳುನಾಡು ಹಾಗೂ ಸೀಮಾಂಧ್ರದಲ್ಲಿ ಟೊಮೇಟೊ ಕೊರತೆಯಿಂದ ರಾಜ್ಯದ ಟೊಮೇಟೊಗೆ ಉತ್ತಮ ಬೇಡಿಕೆ ಬಂದಿದೆ. ಟೊಮೇಟೊ ಬೆಲೆ ಯಾವಾಗ ಏರಿಕೆಯಾಗುತ್ತದೆ ಯಾವಾಗ ಕುಸಿಯುತ್ತದೆ ಎಂಬುದು ತಿಳಿಯದೆ ಪ್ರತಿದಿನ ರೈತರು ಜುಗಾರಿ ಆಡುವಂತಾಗಿದೆ. ಮೂರು ನಾಲ್ಕು ತಿಂಗಳಲ್ಲಿ ಮಳೆ ಕೈಕೊಟ್ಟಿದ್ದರಿಂದಾಗಿ ಟೊಮೇಟೊ ಬೆಲೆ ಏರಿಕೆಯಾಗಲು ಕಾರಣವಾಗಿದೆ. ನಿರೀಕ್ಷೆಯಂತೆ ಏಪ್ರಿಲ್‌ನಲ್ಲಿ ಮಳೆ ಬಾರದೆ ಟೊಮೇಟೊ ಸಸಿ ನಾಟಿ ಮಾಡಲು ರೈತರು ಹಿಂದೇಟು ಹಾಕಿದ್ದರು ಇದರಿಂದ ದಿಢೀರನೆ ಬೆಲೆ ಏರಿಕೆಯಾಗಿದೆ.
ಆದರೆ ಉತ್ತಮ ಬೆಲೆ ಮಾರುಕಟ್ಟೆಯಲ್ಲಿ ಇದ್ದರೂ ಅದು ರೈತರಿಗೆ ಸಿಗದೆ ಮಧ್ಯವರ್ತಿಗಳ ಪಾಲಾಗುತ್ತಿದೆ. ಅಲ್ಲದೆ ತಾಲೂಕು ಕೇಂದ್ರದಲ್ಲಿ ಟೊಮೇಟೊ ಮಾರುಕಟ್ಟೆ ಬೇಕೆಂಬ ರೈತರ ಬೇಡಿಕೆಗೆ ನಾಲ್ಕೈದು ವರ್ಷಗಳ ಹಿಂದೆ ಎಪಿಎಂಸಿ ಸುಸಜ್ಜಿತವಾದ ಟೊಮೇಟೊ ಮಾರುಕಟ್ಟೆ ನಿರ್ಮಾಣ ಮಾಡಿದೆಯಾದರೂ ಅದನ್ನು ರೈತರ ಸೇವೆಗೆ ಅರ್ಪಿಸುವಲ್ಲಿ ಅಧಿಕಾರಿಗಳು ಎಡವಿರುವುದರಿಂದ ರೈತರು ಮಧ್ಯವರ್ತಿಗಳನ್ನು ಅವಲಂಬಿಸುವಂತಾಗಿದೆ.
ಅಲ್ಲದೆ ದೂರದ ಕೋಲಾರ ಅಥವಾ ಆಂಧ್ರದತ್ತ ರೈತರು ಹೋಗುವಂತಾಗಿದೆ. ಸರ್ಕಾರ ದಲ್ಲಾಳಿಗಳ ಹಾವಳಿಗೆ ಕಡಿವಾಣ ಹಾಕಿ ರೈತರನ್ನು ಶೋಷಿಸದಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದರೂ ಯಾವುದೇ ಮುಲಾಜಿಲ್ಲದೆ ಅಧಿಕಾರಿಗಳ ಸಮ್ಮುಖದಲ್ಲೇ ರೈತರ ಶೋಷಣೆ ನಡೆದರೂ ಕೇಳುವವೇ ಇಲ್ಲದಂತಾಗಿದೆ.
ಸಾಮಾನ್ಯವಾಗಿ ಟೊಮೇ ಟೋ ಬೆಳೆಗಾರರಿಗೆ ವರ್ಷದಲ್ಲಿ ಒಂದೆರಡು ತಿಂಗಳು ಮಾತ್ರ ಉತ್ತಮ ಬೆಲೆ ದೊರೆಯುತ್ತದೆ. ದಿಢೀರ್ ಬೆಲೆ ಕುಸಿತವಾಗಿ ಮಾಡಿದ ವೆಚ್ಚ ಕೈಗೆ ಬರುವುದಿಲ್ಲ. ಉತ್ತಮ ಫಸಲನ್ನು ರಸ್ತೆಗೆ ಚೆಲ್ಲಬೇಕಾದಿತು, ಆದ್ದರಿಂದ ಸರ್ಕಾರ ಟೊಮೇಟೊಗೆ ನಿಗದಿತ ಬೆಲೆ ಗೊತ್ತುಪಡಿಸಬೇಕೆಂದು ಪ್ರಗತಿ ಪರ ರೈತ ಪೊಲೇನಹಳ್ಳಿ ರಮೇಶ್ ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ