ಕೋಲಾರ

ಬತ್ತಿದ ಕೆರೆಗಳಿಗೆ ಜೀವ ತುಂಬಿ

ಮುಳಬಾಗಲು: ಆಧುನಿಕ ಯುಗದಲ್ಲಿ ಎಲ್ಲವೂ ನಶಿಸುತ್ತಿದೆ. ಈ ನಿಟ್ಟಿನಲ್ಲಿ ಯುವ ಜನತೆ ನೈತಿಕತೆ ಬೆಳೆಸಿಕೊಂಡು ಸಂಸ್ಕೃತಿ ಉಳಿಸಿ ಬೆಳೆಸಬೇಕು. ಜತೆಗೆ ಬತ್ತಿ ಹೋಗಿರುವ ಕೆರೆಗಳ ಪುನಶ್ಚೇನವಾಗಲಿ ಎಂದು ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ವಿ.ವೆಂಕಟಮುನಿಯಪ್ಪ ಸಲಹೆ ನೀಡಿದರು.
ಪಟ್ಟಣದ ಡಿವಿಜಿ ಗಡಿ ಕನ್ನಡ ಭವನದಲ್ಲಿ ಬುಧವಾರ ನಡೆದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮೂಲ ಸಂಸ್ಕೃತಿ ಹಾಗೂ ರಾಷ್ಚ್ರೀಯ ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಕೆಲಸಗಳಾಗಬೇಕಿದೆ. ಇಂಥ ಸಮ್ಮೇಳನ, ಸಮಾರಂಭಗಳ ಮೂಲಕವಾಗಿ ಐಕ್ಯತೆ ರೂಪುಗೊಳ್ಳಬೇಕಿದೆ. ಇದರೊಂದಿಗೆ ಮಾನವೀಯ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮೌಲ್ಯಗಳನ್ನು ಉದ್ದರಿಸುವ ಮತ್ತು ಸಂರಕ್ಷಿಸುವ ಕೆಲಸಗಳು ನಡೆಯಬೇಕಾಗಿದೆ ಎಂದರು.
ವಿಜಯನಗರದ ಕುರುಹುಗಳಿರುವ ವಿರೂಪಾಕ್ಷಿ ದೇವಾಯಲ ಹಾಗೂ ಶ್ರಮಿಕ ಸಂಸ್ಕೃತಿಯನ್ನು ಬಿಂಬಿಸುವ ನೂರಾರು ಕೆರೆಗಳು ತಾಲೂಕಿನಲ್ಲಿದ್ದು ಅವುಗಳನ್ನು ಪುನಶ್ಚೇತನಗೊಳಿಸುವ ಅಗತ್ಯವಿದೆ. ತಾಲೂಕಿನಲ್ಲಿ ಹುಟ್ಟುವ ಕೌಂಡಿನ್ಯ ನದಿ ಪ್ರದೇಶ, ಕೆರೆಗಳನ್ನು ಹಾಗೂ ಅರಣ್ಯ ಸಂರಕ್ಷಣೆಯನ್ನು ಮಾಡಬೇಕಾಗಿದೆ. ಈ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನಾಗಿ ಗಡಿಗೆ ಹೊಂದಿಕೊಂಡಿರುವ ತಮಗೆ ದೊರೆತಿರುವುದು ನಾಡು-ನುಡಿ, ಸಾಮಾಜಿಕ ನ್ಯಾಯ, ಜಾನಪದ ಕಲೆಗಳು, ಶಿಕ್ಷಣ ವಲಯಕ್ಕೆ ಹಾಗೂ ನಮ್ಮ ಮೂಲಭೂತ, ಸಂಸ್ಕೃತಿಗೆ ಸಿಕ್ಕ ಗೌರವವಾಗಿದೆ ಎಂದರು.
ಘೋಷಣೆಗಳಿಂದ ಕನ್ನಡ
ಬೆಳೆಯಲ್ಲ: ಶ್ರೀನಿವಾಸಾಚಾರಿ
ಮುಳಬಾಗಲು: ಕೇವಲ ಘೋಷಣೆಗಳಿಂದ ಕನ್ನಡ ಬೆಳೆಯುವುದಿಲ್ಲ. ಕೋಲಾರ ಜಿಲ್ಲೆಗೆ ಮೊದಲ ಬಾರಿಗೆ ಕನ್ನಡ ಭಾಷೆಗೆ ಶೈಕ್ಷಣಿಕತೆಯ ಮೂಲಕ ಉತ್ತಮ ಅಡಿಪಾಯ ಹಾಕಿದವರು ಕೋಲಾರ ಸರ್ಕಾರಿ ಕಾಲೇಜಿನಲ್ಲಿ ಪ್ರಾಂಶುಪಾಲಗಾಗಿದ್ದ ರಾಮಕೃಷ್ಣ ಉಡುಪ ಎಂದು ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್.ಶ್ರೀನಿವಾಸಾಚಾರಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಪರಿಹಾರವಾಗುತ್ತದೆ ಎಂಬುದು ಕನಸಿನ ಮಾತು. ಆಕಸ್ಮಾತ್ ಅಂತರ್ಜಲ ಮಟ್ಟ ಸುಧಾರಿಸಬೇಕೆಂದರೆ ಜಲಪ್ರಳಯವಾಗಬೇಕು ವಿನಃ ಬೇರೆ ಯಾವುದೇ ರೀತಿಯಲ್ಲೂ ಇಲ್ಲಿನ ನೀರಿನ ಬರ ತಗ್ಗಲು ಸಾಧ್ಯವಿಲ್ಲ ಎಂದರು.  ಶಾಸಕ ಕೊತ್ತೂರು ಡಾ.ಜಿ.ಮಂಜುನಾಥ್ ಮಾತನಾಡಿದರು. ಪುರಸಭೆ ಅಧ್ಯಕ್ಷೆ ಷಾಹೀನ್ ತಾಜ್, ಉಪಾಧ್ಯಕ್ಷೆ ದಿವ್ಯಶ್ರೀ, ತಾಲೂಕು ಕಸಾಪರಿ ಅಧ್ಯಕ್ಷ ಇ.ಶ್ರೀನಿವಾಸಗೌಡ, ಗೌರವ ಕಾರ್ಯದರ್ಶಿ ಶಂಕರ್ ಕೇಸರಿ, ಕೋಶಾಧ್ಯಕ್ಷ ತಾಯಲೂರು ಗೋಪಿನಾಥ್, ಪ್ರಧಾನ ಸಂಚಾಲಕ ಶಕ್ತಿಪ್ರಸಾದ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ವೆಂಕಟಾಚಲಪತಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಂ.ವಿ.ಜನಾರ್ದನ್, ಮುಖಂಡರಾದ ಕಲ್ಲುಪಲ್ಲಿ ಪ್ರಕಾಶ್, ಜಿ.ರಾಮಲಿಂಗಾರೆಡ್ಡಿ, ನೀಲಕಂಠೇಗೌಡ ಮುಂತಾದವರು ಭಾಗವಹಿಸಿದ್ದರು.
ಜಾಗತೀಕರಣದಿಂದ ಪ್ರಾದೇಶಿಕ ಭಾಷೆಗಳಿಗೆ ಮುಪ್ಪು
ಮುಳಬಾಗಲು: ಮೊದಲ ಬಾರಿಗೆ ಶಿಕ್ಷಕರು ಹಾಗೂ ಜಾನಪದ ಕಲಾವಿದರೊಬ್ಬರನ್ನು ಸಾಹಿತ್ಯ ಸಮ್ಮೇಳಾನಾಧ್ಯಕ್ಷರನ್ನಾಗಿ ಮಾಡಿರುವುದು ಶ್ಲಾಘನೀಯ. ಆದರೆ ಇಂದು ಸಮಾಜ ಶಿಕ್ಷಕರಿಗೆ ನಿರೀಕ್ಷಿತ ಮಟ್ಟದಲ್ಲಿ ಗೌರವ ನೀಡುತ್ತಿಲ್ಲ ಎಂದು ಜಾನಪದ ಲೇಖಕಿ ಡಾ.ಸಂಧ್ಯಾ ರೆಡ್ಡಿ ಹೇಳಿದರು.
ಸಮ್ಮೇಳನ ಉದ್ಪಾಟಿಸಿ ಮಾತನಾಡಿ, ಶಿಕ್ಷಕರೊಬ್ಬರಿಂದ ತಲೆಮಾರುಗಳು ಉಳಿಯುತ್ತದೆ. ಸಾಹಿತ್ಯ ಪರಿಷತ್ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವುದರಿಂದ ಕನ್ನಡ ಭಾಷೆಗೆ ಪೂರಕವಾದ ವಾತಾರವಣ ಮೂಡಿಸಬಹುದು. ಇದರಿಂದ ಕನ್ನಡ ಪ್ರಜ್ಞೆ ಜಾಗೃತವಾಗುತ್ತದೆ. ಆದರೆ ಜಾಗತೀಕರಣದಿಂದ ಪ್ರಾದೇಶಿಕ ಭಾಷೆಗಳಿಗೆ ಮುಪ್ಪು ಬಂದಿದೆ. ಇಂದು ಕನ್ನಡ ಭಾಷೆ, ಜಾನಪದ ಮತ್ತು ಮಹಿಳೆ ವಿಷಯಗಳು ಚಿಂತನೆಗೆ ಒಳಪಡಬೇಕಿದೆ. ಒಂದು ಕುಗ್ರಾಮಗಳಿಗೂ ಇಂಗ್ಲಿಷ್ ಶಾಲೆಗಳು ಬೃಹತ್ ಕಟ್ಟಡಗಳೊಂದಿಗೆ ಲಗ್ಗೆ ಇಟ್ಟಿವೆ. ಇದು ಪ್ರಗತಿಯ ಸಂಕೇತವೆಂದು ಹೇಳಲಾಗುತ್ತಿದೆ. ಇದು ನಿಜಕ್ಕೂ ಪ್ರಗತಿಯ ಸಂಕೇತವಲ್ಲ. ಇಂಗ್ಲಿಷ್ ಭಾಷೆ ಬೇಕಿದೆ. ಆದರೆ ಕನ್ನಡ ಭಾಷೆಯನ್ನು ಕಡೆಗಣಿಸುವಷ್ಟು ಅಲ್ಲ. ಸಾಮಾನ್ಯರಿಗೆ ತಿಳಿಯುವ ಭಾಷೆಯಲ್ಲಿ ಎಲ್ಲಾ ವ್ಯವಹಾರಗಳು ನಡೆಯಬೇಕು. ನಂತರ ಜಾನಪದ ಸಂಸ್ಕೃತಿಯ ಬೇರು. ಜನಪದವನ್ನು ಉಳಿಸಿ ಬೆಳೆಸಬೇಕು ಹಾಗೂ ಮಹಿಳೆಯರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದರು.
ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜೆ.ಜೆ.ನಾಗರಾಜ್ ಮಾತನಾಡಿ, ಕನ್ನಡದ ಹಬ್ಬ ನಡೆಯುತ್ತಿರುವ ಈ ದಿವಸದಲ್ಲೂ ಕೂಡ ಪಟ್ಟಣದಲ್ಲಿ ಪರಭಾಷೆ ಚಿತ್ರದೊಂದಿಗೆ ಅಶ್ಲೀಲ ಪೋಸ್ಟರ್‌ಗಳು ಪಟ್ಟಣದಲ್ಲಿ ದರ್ಶನವಿಟ್ಟಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಇ.ಶ್ರೀನಿವಾಸಗೌಡರು ಬರೆದಿರುವ ಜ್ಞಾನಜ್ಯೋತಿ ಮತ್ತು ಎನ್.ಸಿ.ರಾಜೇಶ್ವರಿ ಅವರು ಬರೆದ ಕಣ್ಣು ತೆರೆದು ನೋಡು ಕವಿತೆಗಳ ಸಂಕಲನವನ್ನು ಬಿಡುಗಡೆ ಮಾಡಿದರು. ತಾಲೂಕಿನವರೇ ಆದ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್.ಶ್ರೀನಿವಾಸಾಚಾರಿ ಮತ್ತು ಎಂ.ಎಸ್.ರಾಮಯ್ಯ ಕಾಲೇಜು ವೈದ್ಯಾದಿಕಾರಿ ಡಾ. ವೆಂಕಟರವಣಪ್ಪ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಎಚ್.ಎ.ಪುರುಷೋತ್ತಮರಾವ್ ಅವರು ಹಾಲಿ ಸಮ್ಮೇಳಾನಾಧ್ಯಕ್ಷರಿಗೆ ಬಾವುಟ ಹಸ್ತಾಂತರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

CJP ಯ 'ತಿರಂಗಾ ಮೆರವಣಿಗೆ: 6,000 ಪೊಲೀಸರು, 220 ಸಿಎಪಿಎಫ್ ತುಕಡಿಗಳ ನಿಯೋಜನೆ, ಸಿಸಿಟಿವಿ ಕಣ್ಗಾವಲು!

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ