ಯಲಬುರ್ಗಾ: ಬಳ್ಳಾರಿ ಎಬಿವಿಪಿ ಕಾರ್ಯಕರ್ತರ ಮೇಲಿನ ಪೊಲೀಸರ ಹಲ್ಲೆ ಖಂಡಿಸಿ ಎಬಿವಿಪಿ ಯಲಬುರ್ಗಾ ತಾಲೂಕು ಘಟಕದ ಕಾರ್ಯಕರ್ತರು, ವಿದ್ಯಾರ್ಥಿಗಳು ಶನಿವಾರ ಪಟ್ಟಣದಲ್ಲಿ ಪ್ರತಿಭಟಿಸಿ, ತಹಸೀಲ್ದಾರ್ಗೆ ಮನವಿ ನೀಡಿದರು.
ಪಟ್ಟಣದ ಬಯಲು ರಂಗಮಂದಿರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ತಹಸೀಲ್ದಾರ್ ಕಚೇರಿ ಬಳಿ ಸಭೆ ಸೇರಿದರು. ವಿದ್ಯಾರ್ಥಿ ಸಾವಿಗೆ ಕಾರಣದವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಘೋಷಣೆ ಕೂಗಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಬಿವಿಪಿ ತಾಲೂಕು ಸಂಚಾಲಕ ಮಂಜುನಾಥ ಮಾಲಗಿತ್ತಿ ಮಾತನಾಡಿದರು. ಶಿರಸ್ತೇದಾರ್ ಶ್ರೀಧರ ಆಚಾರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಸ್ಥಳೀಯ ಠಾಣೆ ಪಿಎಸ್ಐ ಎಚ್.ಎಸ್. ಸತೀಶ ಬಂದೋಬಸ್ತ್ ನೀಡಿದ್ದರು.
ಶಿವಶರಣಪ್ಪ ಬಾವಿಮನಿ, ವೆಂಕಟೇಶ, ಶ್ಯಾಮಣ್ಣ ಪೂಜಾರ, ಶಂಕರ ಬಣಕಾರ, ಪ್ರಕಾಶ ಬಾವಿಮನಿ, ಯಮನೂರ ನಾಯಕ, ನೇತ್ರಾವತಿ, ಭಾಗ್ಯ ಬಿನ್ನಾಳ, ಯಮನೂರ ಬಣಕಾರ, ಅನ್ನಪೂರ್ಣ, ಗಿರಿಜಾ ಕೋನಸಾಗರ,ಅಕ್ಕಮ್ಮ ಅಡವಿಗೌಡ್ರ, ಶಿವರಾಜ ಚಿಕ್ಕೋಪ ಇತರರು ಪ್ರತಿಭಟನೆಯಲ್ಲಿ ಇದ್ದರು.