ಕನಕಗಿರಿ: ಕನಕಗಿರಿ ಉತ್ಸವ ನಿಮಿತ್ತ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಜರುಗಿದ ಕ್ರಿಡಾಕೂಟದಲ್ಲಿ ಗದಗ ಜಿಲ್ಲೆ ಲಕ್ಷ್ಮೇಶ್ವರದ ಮಲ್ಲಕಂಬ ಅಸೋಯೇಷನ್ ತಂಡದ ಬಾಲಕರು ಆಕರ್ಷಕವಾಗಿ ಮಲ್ಲಕಂಬ ಏರಿದರು. 20ಕ್ಕೂ ಹೆಚ್ಚು ಬಾಲಕರು ಮಲ್ಲಕಂಬ ಏರಿದ್ದಲ್ಲದೆ ವಿವಿಧ ಭಂಗಿಗಳಲ್ಲಿ ಯೋಗಾಸನ ಮಾಡಿದರು. ಸೂರ್ಯ ನಮಸ್ಕಾರ, ಶವಾಸನ ಮತ್ತಿತರ ಆಸನಗಳನ್ನು ಮಾಡಿದರು. ಲಕ್ಷ್ಮೇಶ್ವರದ ಬಾಲಕಿಯರು ರೋಫ್ ಮಲ್ಲಕಂಬದಲ್ಲಿ ಭಾಗವಹಿಸಿ ಆಕರ್ಷಕ ಪ್ರದರ್ಶನ ನೀಡಿದರು.