ಕೊಪ್ಪಳ: ಹೊಸಬಂಡಿ ಹರ್ಲಾಪುರದಲ್ಲಿ ಸಾಮಾಜಿಕ ವಿಜ್ಞಾನ ಅಧ್ಯಯನ ಸಂಶೋಧನಾ ಸಂಸ್ಥೆ ಹಾಗೂ ಹೊಸಬಂಡಿ ಹರ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಕುವೆಂಪು ಸ್ಮರಣೆಗಾಗಿ ಜ. 22ರ ಮಧ್ಯಾಹ್ನ 12ಕ್ಕೆ 'ಮನುಜಮತ ವಿಶ್ವಪಥ' ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಡಾ. ದಯಾನಂದ ಸಾಳಂಕಿ ಮತ್ತು ಸಾಹಿತಿಗಳಾದ ಡಾ. ಜಾಜಿದೇವೇಂದ್ರಪ್ಪ, ಬಿ.ಪೀರಭಾಷಾ, ರಮೇಶ ಗಬ್ಬೂರು ಭಾಗವಹಿಸಲಿದ್ದಾರೆ ಎಂದು ಸಂಶೋಧನಾ ವಿದ್ಯಾರ್ಥಿ ಭೀಮೇಶ ಯರಡೋಣ ತಿಳಿಸಿದ್ದಾರೆ.