ಕೊಪ್ಪಳ

ಮಧುಸೂದನ ಪ್ರತಿಕೃತಿ ದಹನ

ಕನ್ನಡಪ್ರಭ ವಾರ್ತೆ, ಕುಷ್ಟಗಿ, 22
ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲಾಗುತ್ತಿರುವ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಟಿಪ್ಪುಸುಲ್ತಾನ್ ಹೆಸರು ಇಡಲು ನಿರ್ಧರಿಸಿರುವ ಕೇಂದ್ರ ಸರ್ಕಾರದ ನಿರ್ಧಾರ ಬೆಂಬಲಿಸಿ ಇಲ್ಲಿನ ಅಂಜುಮನ್ ವೆಲ್ಫೇರ್ ಸೊಸೈಟಿ ನೇತೃತ್ವದಲ್ಲಿ ಮುಸ್ಲಿಂ ಯುವಕರು ಮಂಗಳವಾರ ಪಟ್ಟಣದಲ್ಲಿ ಮೆರವಣಿಗೆ ನಡೆಸಿದರು.
ವೀರಯೋಧ ಮಲ್ಲಯ್ಯ ವೃತ್ತದಲ್ಲಿ ಸಮಾವೇಶಗೊಂಡ ಮುಸ್ಲಿಂ ಸಮಾಜದ ನೂರಾರು ಯುವಕರು, ಬಳಿಕ ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳ ಮೂಲಕ ಮೆರವಣಿಗೆಯಲ್ಲಿ ತೆರಳಿ ಶ್ರೀಬಸವೇಶ್ವರ ವೃತ್ತದಲ್ಲಿ ಬಿಜೆಪಿ ಮುಖಂಡ ಗೋ. ಮಧುಸೂದನ ಪ್ರತಿಕೃತಿ ದಹಿಸಿದರು. ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ತಹಸೀಲ್ದಾರ್ ವೀರೇಶ ಬಿರಾದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಂಜುಮನ್ ವೆಲ್ಫೇರ್ ಸೊಸೈಟಿ ತಾಲೂಕಾಧ್ಯಕ್ಷ ಎಂ.ಡಿ. ಅಸ್ಲಂ ಹಾಗೂ ಅಲ್ತಾಫ್ ಮಾತನಾಡಿ, ರಾಜ್ಯದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಕೇಂದ್ರೀಯ ವಿವಿಗೆ ಟಿಪ್ಪು ಸುಲ್ತಾನ ಹೆಸರಿಡಲು ಚಿದಾನಂದಮೂರ್ತಿ, ಬಿಜೆಪಿಯ ಗೋ. ಮಧುಸೂದನ ಮತ್ತಿತರರು ಅಡ್ಡಿಪಡಿಪಡಿಸುತ್ತಿರುವುದಲ್ಲದೆ, ಮುಸ್ಲಿಂ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು. ಟಿಪ್ಪು ಸುಲ್ತಾನ ಒಬ್ಬ ದೇಶ ಪ್ರೇಮಿ ಹಾಗೂ ಧೀಮಂತ ಸೇನಾನಿಯಾಗಿದ್ದು, ಅವರ ಹೆಸರನ್ನೇ ವಿವಿಗೆ ಇಡಬೇಕೆಂದು ಒತ್ತಾಯಿಸಿದರು.
ಆಲಂ ಪಾಷಾ ಮೋದಿ, ಮುರ್ತುಜಾಸಾಬ ಪೇಂಟರ್, ಮಹ್ಮದ್ ಅಫ್ತಾಬ್, ಚಿನ್ನುಸಾಬ ದಳಪತಿ, ಮಾಸೂಮ್ ಅಲಿ, ಅಬ್ದುಲ್ ನಯೀಮ್, ವಜೀರಲಿ ಗೋನಾಳ, ಸೈಯದ್ ಅತ್ತಾರ್, ನಿಜಾಮ್ ಕಪಾಲಿ ಮತ್ತಿತರರು ಹಾಜರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; ಎರಡು ದಿನಗಳ ಡೆಡ್‌ಲೈನ್‌!

ಭಾವಿ ಪತಿಯನ್ನೇ ಹತ್ಯೆಗೈದ ರಿಂಗ್ ರೋಡ್ ಶುಭಾಗೆ ಬಿಗ್ ಶಾಕ್: ಕ್ಷಮಾದಾನ ಅರ್ಜಿ ತಿರಸ್ಕರಿಸಿದ ಸಚಿವ ಸಂಪುಟ!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ವಿವಿ ಫ್ರೆಟರ್ನಿಟಿ ಕಾರ್ಯಕ್ರಮದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ; ‘ನನ್ನ ಸರದಿ ಯಾವಾಗ?’ ಎಂದು ಕೂಗಿದ ಪುರುಷರು!

ಹೊಸ ಪಕ್ಷದ ಹೆಸರು ಘೋಷಿಸಿದ ಮಾಜಿ IAS ಅಧಿಕಾರಿ ದಿವ್ಯಾ ಮಿತ್ತಲ್; 2027ರ ಯುಪಿ ಚುನಾವಣೆಗೆ ಸ್ಪರ್ಧೆ