ಕೊಪ್ಪಳ

ಮನಸೂರೆಗೊಂಡ ಮಲ್ಲಗಂಬ ಪ್ರದರ್ಶನ




ಕೊಪ್ಪಳ: ನಗರದ ಗವಿಸಿದ್ಧೇಶ್ವರ ಜಾತ್ರೆಯ 2ನೇ ದಿನದ ಕಾರ್ಯಕ್ರಮಗಳಲ್ಲಿ ನರೆಗಲ್‌ನ ಹಠಯೋಗಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ನಡೆದ ಮಲ್ಲಗಂಬ ಹಾಗೂ ರೋಪ್ ಮಲ್ಲಗಂಬ ಅತ್ಯದ್ಭುತವಾಗಿ ಪ್ರದರ್ಶನಗೊಳ್ಳುವ ಮೂಲಕ ಸೇರಿದ್ದ ಜನಸ್ತೋಮದ ಮನ ಸೆಳೆಯಿತು.
ಭೀಮಸೇನ್ ಚೇಳಗೇರಿ ಮಲ್ಲಗಂಬ ಪ್ರದರ್ಶನಕ್ಕೆ ಚಾಲನೆ ನೀಡಿದರು. 6 ವರ್ಷದ ಮಕ್ಕಳಿಂದ 17 ವರ್ಷದ ಬಾಲಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದರಲ್ಲದೇ, ವಿವಿಧ ಆಸನ ಪ್ರದರ್ಶಿಸಿ ಎಲ್ಲರ ಗಮನ ಸೆಳೆದರು. ಯಶವಂತ ಕುಂಬಾರ ಪದ್ಮಾಸನ, ಕಳಕಪ್ಪ ಚವಡಿ ದಸರಂಗ ಅಂಗುಷ್ಠಾಸನ, ಸಂತೋಷ ಜೆ. ಬಗಲ್ ಉಲ್ಟಿ ಮತ್ತು ನಟರಾಜಾಸನ ಮಾಡುವ ಮೂಲಕ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದರು. ಮಲ್ಲಗಂಬದಲ್ಲಿ ಬಾಲಕರು ಅತ್ಯದ್ಭುತವಾಗಿ ಆಸನ ಪ್ರದರ್ಶಿಸಿದರೆ, ಬಾಲಕಿಯರು ರೋಪ್ ಮಲ್ಲಗಂಬದಲ್ಲಿ ಆಕರ್ಷಕವಾಗಿ ಆಸನ ಮಾಡಿ ಜನರಿಂದ ಮೆಚ್ಚುಗೆ ಪಡೆದರು.
ಅನಿಷಾ ನಿದ್ರಾಸನ, ತ್ರಿಕೋನಾಸನ, ನಟರಾಜಾಸನ, ಪಶ್ಚಿಮೋತ್ತ್ತಾನಾಸನ, ಕ್ರಿಸ್ತಾಸನ ಮಾಡಿದರೆ, ಗೀತಾ ಡಬಲ್‌ಬಾರ್ ಮತ್ತು ಪಾದಹಸ್ತಾಸನ ಮತ್ತು ಚಕ್ರಾಸನ, ಹಾಗೂ ಶಿರಸಾಶನ ಮಾಡಿದರು. ಮಹಾದೇವಿ ಭೂನಮನಾಸನ, ಧನುರಾಸನ ಮಾಡಿದರು.
ಮೆಚ್ಚುಗೆ: ಗವಿಮಠದ ಆವರಣದಲ್ಲಿ ಸೇರಿದ್ದ ಜನಸ್ತೋಮವು ಹಠಯೋಗಿ ತಂಡದ ಮಲ್ಲಗಂಬ ಹಾಗೂ ರೋಪ್ ಮಲ್ಲಗಂಬದ ಆಟ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು ಅಲ್ಲದೇ, ಚಪ್ಪಾಳೆ ಮೂಲಕ ಬಾಲಕ ಮತ್ತು ಬಾಲಕಿಯರನ್ನು ಪ್ರೋತ್ಸಾಹಿಸಿದರು.
ತರಬೇತುದಾರರಾದ ಎನ್.ಎಸ್. ಬನ್ನಿ, ವಿ.ಎ. ಕುಂಬಾರ್, ಬಿ.ಎಸ್. ಸಿದ್ನೆಕೊಪ್ಪ, ಬಿ.ಎಚ್. ಬೇವಿನಕಟ್ಟಿ ಮಾರ್ಗದರ್ಶನ ನೀಡಿದರೆ, ಜಯಕರ್ನಾಟಕ ಸಂಘಟನೆ ಅಧ್ಯಕ್ಷ ವಿಜಯಕುಮಾರ ಕವಲೂರು, ಹನುಮಂತಪ್ಪ ಕಾಯಗಡ್ಜಿ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!