ಕೊಪ್ಪಳ

ದೇವಾಲಯಗಳಿಗೆ ದೇವರೇ ಗತಿ!

ವಸಂತಕುಮಾರ್ ಕತಗಾಲ
ಕಾರವಾರ: ದೇಗುಲಗಳ ಅಭಿವೃದ್ಧಿಗಾಗಿ ಸರ್ಕಾರ ಹಣ ನೀಡಿದರೆ ಅದನ್ನು ಬಳಸಲು ದೇಗುಲಗಳ ಆಡಳಿತ ಮಂಡಳಿಗೆ ಸಾಧ್ಯವಾಗುತ್ತಿಲ್ಲ. ಸರ್ಕಾರ ಹಾಗೂ ದೇವಾಲಯಗಳ ನಡುವಣ ತಿಕ್ಕಾಟದಲ್ಲಿ ದೇವರು ನಲುಗುವಂತಾಗಿದೆ. ದೇವಾಲಯಗಳ ಆಡಳಿತ ಮಂಡಳಿಯೂ ಸೊರಗುತ್ತಿದೆ. ದೇಗುಲಗಳನ್ನು ದೇವರೇ ಕಾಪಾಡಬೇಕು.
ರಾಜ್ಯದಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲೇ ಸುಮಾರು 34 ಸಾವಿರ ದೇವಾಲಯಗಳಿವೆ. ಇದನ್ನು ಹೊರತುಪಡಿಸಿ ಸಾಕಷ್ಟು ದೇವಾಲಯಗಳಿವೆ. ಸರ್ಕಾರ ಪ್ರತಿ ವರ್ಷ ಹಲವು ದೇವಾಲಯಗಳ ಅಭಿವೃದ್ಧಿ ಕಾಮಗಾರಿಗಾಗಿ ಹಣ ಬಿಡುಗಡೆ ಮಾಡುತ್ತಲೇ ಇದೆ. ಆದರೆ, ಆ ಹಣ ಬಳಸಲು ಸಾಧ್ಯವಾಗದೆ ದೇವಾಲಯಗಳು ಸೊರಗುತ್ತಿವೆ.
ಉತ್ತರ ಕನ್ನಡ ಜಿಲ್ಲೆಯಲ್ಲೇ ಹತ್ತು ವರ್ಷಗಳಿಂದ ಸುಮಾರು ರು. 6 ಕೋಟಿ ಹಣ ಬಳಕೆಯಾಗದೆ ಉಳಿದಿದೆ. ರಾಜ್ಯದಲ್ಲಿ ಈ ಅವಧಿಯಲ್ಲಿ ಸುಮಾರು 100 ಕೋಟಿಗೂ ಹೆಚ್ಚು ಹಣ ಬಳಕೆಯಾಗದೆ ಹಾಗೆ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ಕಾರಣವೇನು?: ಹಣ ಬಳಕೆಯಾಗದಿರಲು ಸಾಕಷ್ಟು ಕಾರಣಗಳಿವೆ. ಕೊಟ್ಟ ಹಣಕ್ಕೆ ಹಾಕುವ ಕಟ್ಟುಪಾಡುಗಳು ಹೇಳತೀರದು. ಗ್ರಾಮಾಂತರ ಪ್ರದೇಶದ ಜನತೆ ಈ ಎಲ್ಲ ಕಟ್ಟುಪಾಡುಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ದೇವಾಲಯದ ಆಡಳಿತ ಮಂಡಳಿಯಲ್ಲಿ ಇರುವವರು ಕಚೇರಿಗಳಿಗೆ ಓಡಾಡಿ ಸುಸ್ತಾಗಿ ಹೋಗುತ್ತಾರೆ. ಇನ್ನು ಸರ್ಕಾರ ಕೊಟ್ಟ ಹಣದಲ್ಲಿ ಯಾವೊಂದು ಕೆಲಸವೂ ಪೂರ್ಣವಾಗದು. ಅದಕ್ಕೆ ಇನ್ನಷ್ಟು ಹಣ ಜೋಡಿಸಬೇಕು. ಹಣ ಸಂಗ್ರಹಣೆಗಾಗಿ ಅಲೆಯಬೇಕು.
ಬರಿದಾಗುತ್ತಿರುವ ಆಡಳಿತ ಮಂಡಳಿ: ಇಷ್ಟಕ್ಕೂ ದೇಗುಲಗಳ ಆಡಳಿತ ಮಂಡಳಿ ಬರಿದಾಗುತ್ತಿದೆ. ರಾಜಿನಾಮೆ ನೀಡಿದವರು ಹಲವರಾದರೆ, ಇನ್ನೂ ಕೆಲವರು ವಯೋ ಸಹಜವಾಗಿ ಮೃತಪಟ್ಟಿದ್ದಾರೆ. ಕೆಲವರು ಸಕ್ರಿಯರಾಗಿ ಉಳಿದಿಲ್ಲ. ಹೊಸ ಪದಾಧಿಕಾರಿಗಳನ್ನು ಆಡಳಿತ ಮಂಡಳಿಗೆ ಸೇರಿಸಿಕೊಳ್ಳೋಣ ಎಂದರೆ ಅದು ಸದ್ಯಕ್ಕೆ ಸಾಧ್ಯವಿಲ್ಲದ ಮಾತು. ಏಕೆಂದರೆ ಸರ್ಕಾರ ಕಳೆದ ವರ್ಷ ದೇವಾಲಯಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಲು ಮುಂದಾದಾಗ ಬಹುತೇಕ ಎಲ್ಲ ದೇವಾಲಯಗಳ ಆಡಳಿತ ಮಂಡಳಿಗಳೂ ಕೋರ್ಟಿನ ಮೊರೆ ಹೋದವು. ಉಚ್ಚ ನ್ಯಾಯಾಲಯ ಇವರ ಅರ್ಜಿಯನ್ನು ವಿಚಾರಣೆ ನಡೆಸಿ ಆಡಳಿತಾಧಿಕಾರಿಗಳ ನೇಮಕಕ್ಕೆ ತಡೆಯಾಜ್ಞೆ ನೀಡಿದೆ.
ಈಗ ನ್ಯಾಯಾಲಯ ಅಂತಿಮ ಆದೇಶ ನೀಡುವ ತನಕ ಟ್ರಸ್ಟಿಗಳ ನೇಮಕ ಕೂಡ ಸಾಧ್ಯವಾಗುತ್ತಿಲ್ಲ. ಹೊಸ ಆಡಳಿತ ಮಂಡಳಿಯನ್ನೂ ರಚಿಸುವಂತಿಲ್ಲ. ಇರುವ ಟ್ರಸ್ಟಿಗಳಲ್ಲಿ ಕೆಲವರು ರಾಜಿನಾಮೆ ನೀಡಿದ್ದರೆ, ಕೆಲವರು ಮೃತಪಟ್ಟಿದ್ದಾರೆ. ಇದರಿಂದ ಆಡಳಿತ ಮಂಡಳಿ ಬರಿದಾಗುತ್ತಿದೆ. ದೇವಾಲಯಗಳ ದಿನ ನಿತ್ಯದ ಆಡಳಿತ ನೋಡಿಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿ ಬಹುತೇಕ ದೇವಾಲಯಗಳಲ್ಲಿದೆ. ಹೀಗಿರುವಾಗ ಸರ್ಕಾರದಿಂದ ಬಂದ ಹಣವನ್ನು ಉಪಯೋಗಿಸಲು ಸಾಧ್ಯವಾಗುತ್ತಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Vice President Election 2025: ನೂತನ ಉಪ ರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಆಯ್ಕೆ

ಮದ್ದೂರಿನಲ್ಲಿ ಕಲ್ಲು ತೂರಾಟ: ಶಾಂತಿ ಕದಡುವುದೇ ಬಿಜೆಪಿ ಉದ್ದೇಶ; ಜಾತಿ, ಧರ್ಮ, ಪಕ್ಷ ಲೆಕ್ಕಿಸದೆ ಕ್ರಮ

ಮದ್ದೂರಿನಲ್ಲಿ ಕಲ್ಲು ತೂರಾಟ: ಲೈಟ್ ಆಫ್ ಮಾಡಿರುವುದು ಅನುಮಾನ ಮೂಡಿಸುತ್ತಿದೆ - IGP

Asia Cup 2025: "Kisne Bola?".. ಪತ್ರಕರ್ತನಿಗೆ Suryakumar Yadav ಖಡಕ್ ಉತ್ತರ, ಪಾಕ್ ಕ್ಯಾಪ್ಟನ್‌ಗೆ ಓಪನ್ ಚಾಲೆಂಜ್!

ಬೆಂಗಳೂರಿನಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್ ಹಗರಣ: 70 ವರ್ಷದ ವ್ಯಕ್ತಿಗೆ 30 ಲಕ್ಷ ರೂ.ಗೂ ಹೆಚ್ಚು ವಂಚನೆ!

SCROLL FOR NEXT