ಕೊಪ್ಪಳ

ಭರ್ತಿಗೆ ಕ್ಷಣಗಣನೆ: ಕಾಲುವೆಗಿಲ್ಲ ನೀರು

 ವಿಶೇಷ ವರದಿ
ಕನ್ನಡಪ್ರಭ ವಾರ್ತೆ, ಕೊಪ್ಪಳ, ಜು. 31
ಈ ಭಾಗದ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಲು ಕ್ಷಣಗಣನೆ ಶುರುವಾಗಿದೆ. ಇಂದೋ, ನಾಳೆಯೋ ಜಲಾಶಯ ಭರ್ತಿಯಾಗಿ ನದಿ ಮೂಲಕ ನೀರು ಬಿಡುವ ಪ್ರಮೇಯ ಎದುರಾಗುತ್ತದೆ. ಆದರೂ ಇದುವರೆಗೆ ಎಡದಂಡೆ ಕಾಲುವೆಗೆ ನೀರು ಬಿಡದೆ ಇರುವುದು ಮಾತ್ರ ಅಚ್ಚರಿ ಮೂಡಿಸಿದೆ. ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನೊಳಗೊಂಡ ನೀರಾವರಿ ಸಲಹಾ ಸಮಿತಿಯ ಗಾಢನಿದ್ರೆಗೆ ಅಚ್ಚುಕಟ್ಟು ಪ್ರದೇಶದ ರೈತರು ಆತಂಕಗೊಂಡಿದ್ದಾರೆ.
ಈಗಾಗಲೇ ಕಾಲುವೆಗೆ ನೀರು ಹರಿಸುವುದು ಒಂದು ತಿಂಗಳು ವಿಳಂಬವಾಗಿದೆ. ಸಾಮಾನ್ಯವಾಗಿ ಜುಲೈ ಆರಂಭದಲ್ಲಿ ಅಬ್ಬಾಬ್ಬ ಎಂದರೆ ಜುಲೈ ಮೂರನೇ ವಾರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡುವ ಪದ್ಧತಿ ಇದೆ. ಜಲಾಶಯದಲ್ಲಿ ನೀರು ಸಂಗ್ರಹವಾಗುವುದು ಹಾಗೂ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿನ ಮಳೆ ಪ್ರಮಾಣ ಆಧರಿಸಿ ಈ ಕ್ರಮ ಕೈಗೊಳ್ಳುವ ಹೊಣೆ ನೀರಾವರಿ ಸಲಹಾ ಸಮಿತಿಗಿದೆ. ದುರಂತ ಎಂದರೆ ಇದುವರೆಗೂ ನೀರಾವರಿ ಸಲಹಾ ಸಮಿತಿ ಸಭೆ ನಡೆಸಲೂ ಮುಂದಾಗಿಲ್ಲ. ಸಮಿತಿಯ ಬೇಜವಾಬ್ದಾರಿಗೆ ರಾಜ್ಯದಲ್ಲಿ ಆಹಾರೋತ್ಪನ್ನ ಕ್ಷೀಣಿಸುವ ಮುನ್ಸೂಚನೆ ಇದೆ. ಮಿತಿ ತಪ್ಪಿ ಹಾಕಿದ ಬೆಳೆ ನಿರೀಕ್ಷೆಯಂತೆ ಇಳುವರಿ ಬರುವುದಿಲ್ಲ ಎನ್ನುವ ರೈತರ ಕೊರಗು ಸಮಿತಿಗೆ ಇದ್ದಂತಿಲ್ಲ.
ಕಾಲುವೆ ರಿಪೇರಿ: ಪ್ರತಿ ಬಾರಿಯೂ ಜಲಾಶಯದಲ್ಲಿ ನೀರು ಭರ್ತಿಯಾದ ಮೇಲೆ ಕಾಲುವೆ ರಿಪೇರಿ ತುರ್ತಾಗಿ ನಡೆದಿರುತ್ತದೆ. ಬೇಸಿಗೆಯಲ್ಲಿ ಮಾಡಬೇಕಾಗಿರುವುದನ್ನು ಮಳೆಗಾಲದಲ್ಲಿ ಮಾಡಿಕೊಳ್ಳುವ ಅವೈಜ್ಞಾನಿಕತೆಯೇ ಇದಕ್ಕೆ ಕಾರಣ. ಬೇಸಿಗೆಯಲ್ಲಿ ಕೋಟ್ಯಂತರ ರುಪಾಯಿ ಹಾನಿಯಾಗುವುದಕ್ಕೆ ಇದು ಕಾರಣವಾಗುತ್ತದೆ. ಮಳೆಗಾಲದಲ್ಲಿ ನೀರು ಬಿಡುವುದು ವಿಳಂಬವಾಗುವುದರಿಂದ ಬೆಳೆ ವಿಳಂಬವಾಗಿ ಅದು ಬೇಸಿಗೆಯಲ್ಲೂ ಮುಂದುವರಿಯುತ್ತದೆ. ಆಗ ನಾವು ಕೇವಲ ಮಾರ್ಚ್ 31ರ ವರೆಗೆ ನೀರು ಬಿಡಲು ಸಾಧ್ಯ ಎಂದು ಹೇಳಿ ಕೈಚಲ್ಲುತ್ತಾರೆ. ಆದರೆ, ರೈತರು ಹಾಕಿದ ಬೆಳೆ ನೀರಿಲ್ಲದೆ ಒಣಗಿ ಹೋಗುತ್ತದೆ. ಅದನ್ನೇ ಮಳೆಗಾಲದಲ್ಲಿ ಬೇಗನೆ ಕಾಲುವೆಗೆ ನೀರು ಬಿಟ್ಟರೆ ಬೇಸಿಗೆ ಬೆಳೆ ಬರುತ್ತದೆ. ಆದರೆ, ಆ ದಿಸೆಯಲ್ಲಿ ಪ್ರಯತ್ನ ಮಾಡುತ್ತಲೆ ಇಲ್ಲ.
ಜಲಾಶಯ ಭರ್ತಿಯಾಗುತ್ತಿದ್ದಂತೆಯೇ ನದಿ ಮೂಲಕ ನೀರು ಹರಿದು ಆಂಧ್ರ ಸೇರುತ್ತದೆ.  ಮಳೆಗಾಲದಲ್ಲಿ ಈ ನೀರನ್ನು ಬಳಕೆ ಮಾಡಿಕೊಂಡು, ಬೇಸಿಗೆಯಲ್ಲಿ ಜಲಾಶಯದ ನೀರು ಬಳಸಿಕೊಂಡು ಜಾಣತನ ಮೆರೆಯುತ್ತದೆ. ಆದರೆ, ಜಲಾಶಯ ಇರುವ ರಾಜ್ಯದ ರೈತರ ಹಿತಕಾಯಬೇಕಾದ ಸಮಿತಿ ಮಾತ್ರ ತನ್ನ ಅವೈಜ್ಞಾನಿಕ ಮತ್ತು ಅಸಡ್ಡೆ ಪ್ರದಶಿಸುತ್ತಲೇ ಇದೆ.
ಜಲಾಶಯ ಭರ್ತಿಗೆ 3 ಅಡಿ ಬಾಕಿ: ಜನತೆಗೆ ಎಚ್ಚರಿಕೆ
ಕೊಪ್ಪಳ: ತುಂಗಭದ್ರಾ ಜಲಾಶಯ ಭರ್ತಿಗೆ ಕೇವಲ 3 ಅಡಿ ಮಾತ್ರ ಬಾಕಿ ಉಳಿದಿದ್ದು, ಜಲಾಶಯ ಯಾವುದೇ ಕ್ಷಣದಲ್ಲಿ ಭರ್ತಿಯಾಗಿ, ಹೆಚ್ಚುವರಿ ನೀರನ್ನು ಕ್ರಸ್ಟ್ ಗೇಟ್ ಮೂಲಕ ನದಿಗೆ ಬಿಡುವ ಸಾಧ್ಯತೆ ಇದ್ದು, ನದಿ ಪಾತ್ರದಲ್ಲಿನ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಗುರುವಾರ ತುಂಗಭದ್ರಾ ಜಲಾಶಯದ ನೀರಿನ ಮಟ್ಟವು 1630.13 ಅಡಿ ಇದ್ದು, ಒಳಹರಿವು 47,050 ಕ್ಯುಸೆಕ್. ಜಲಾಶಯದ ನೀರಿನ ಗರಿಷ್ಠ ಮಟ್ಟ 1633 ಅಡಿ ಆಗಿದೆ. ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಜಲಾಶಯವು ಶೀಘ್ರ ಭರ್ತಿಯಾಗುವ ಸಾಧ್ಯತೆಗಳಿದೆ. ಯಾವುದೇ ಸಮಯದಲ್ಲಿ ಜಲಾಶಯದಿಂದ ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಹೊರಬಿಡಲಾಗುವುದರಿಂದ, ಜಲಾಶಯದ ಕೆಳಭಾಗದ ನದಿ ಪಾತ್ರದಲ್ಲಿ ವಾಸಿಸುವ ಸಾರ್ವಜನಿಕರು ತಮ್ಮ ಜನ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತುಂಗಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಭೋಜಾನಾಯ್ಕ ಕಟ್ಟಿಮನಿ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Vice President Election 2025: ನೂತನ ಉಪ ರಾಷ್ಟ್ರಪತಿಯಾಗಿ ಸಿ ಪಿ ರಾಧಾಕೃಷ್ಣನ್ ಆಯ್ಕೆ

ಮದ್ದೂರಿನಲ್ಲಿ ಕಲ್ಲು ತೂರಾಟ: ಶಾಂತಿ ಕದಡುವುದೇ ಬಿಜೆಪಿ ಉದ್ದೇಶ; ಜಾತಿ, ಧರ್ಮ, ಪಕ್ಷ ಲೆಕ್ಕಿಸದೆ ಕ್ರಮ; Video

Israel attacks: ದೋಹಾದಲ್ಲಿ 'ಹಮಾಸ್' ನಾಯಕರ ಮನೆ ಮೇಲೆ ಇಸ್ರೇಲ್ ವಾಯು ದಾಳಿ! ಹೇಡಿತನ ಎಂದ ಕತಾರ್!

ಮದ್ದೂರಿನಲ್ಲಿ ಕಲ್ಲು ತೂರಾಟ: ಲೈಟ್ ಆಫ್ ಮಾಡಿರುವುದು ಅನುಮಾನ ಮೂಡಿಸುತ್ತಿದೆ - IGP

Asia Cup 2025: "Kisne Bola?".. ಪತ್ರಕರ್ತನಿಗೆ Suryakumar Yadav ಖಡಕ್ ಉತ್ತರ, ಪಾಕ್ ಕ್ಯಾಪ್ಟನ್‌ಗೆ ಓಪನ್ ಚಾಲೆಂಜ್!

SCROLL FOR NEXT