ಕೊಪ್ಪಳ

ರೇಲ್ವೆ ಯೋಜನೆ ಅಭಿವೃದ್ಧಿಗೆ ಸಂಸದ ಮನವಿ

ಕೊಪ್ಪಳ: ಕೊಪ್ಪಳ ಸಂಸದ ಸಂಗಣ್ಣ ಕರಡಿ, ಬಳ್ಳಾರಿ ಸಂಸದ ಶ್ರೀರಾಮುಲು ನೇತೃತ್ವದಲ್ಲಿ ರಾಜ್ಯ ರೇಲ್ವೆ ಕ್ರಿಯಾಸಮಿತಿ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್, ವೀರಶೈವ ವಿದ್ಯಾವರ್ಧಕ ಸಂಘ, ಜಿಲ್ಲಾ ವಕೀಲರ ಸಂಘ, ಕನ್ನಡ ಚಳುವಳಿ ಸಂಘದ ಕೆ.ಎಂ ಮಹೇಶ್ವರಸ್ವಾಮಿ, ರಮೇಶ್‌ಗೌಡ ಪಾಟೀಲ್, ಪಲ್ಲೆದ ದೊಡ್ಡಪ್ಪ, ಕೆ. ಕೃಷ್ಣ ನಿಯೋಗ ನವದೆಹಲಿಯ ರೇಲ್ವೆ ಭವನದ ಸಚಿವರ ಕಚೇರಿಗೆ ತೆರಳಿ ಕೇಂದ್ರ ರೇಲ್ವೆ ಸಚಿವ ಡಿ.ವಿ. ಸದಾನಂದಗೌಡ ಅವರಿಗೆ ಕೊಪ್ಪಳ ಹಾಗೂ ಬಳ್ಳಾರಿ ಭಾಗಕ್ಕೆ ಆಗಬೇಕಾದ ರೇಲ್ವೆ ಅಭಿವೃದ್ಧಿ ಕುರಿತು ಮನವಿ ಸಲ್ಲಿಸಿದರು.
ಬಳ್ಳಾರಿ -ಸಿರುಗುಪ್ಪ- ಸಿಂಧನೂರು ಪ್ರದೇಶಕ್ಕೆ ರೇಲ್ವೆ ಸಂಪರ್ಕ ಕಲ್ಪಿಸುವ ಹಿನ್ನೆಲೆಯಲ್ಲಿ ನೂತನ ಬ್ರಾಡ್‌ಗೆಜ್ ನಿರ್ಮಾಣ (ಹಿಂದಿನ ಬಜೆಟ್ ನಿರ್ಣಯದಂತೆ) ಸರ್ವೇ ಆದೇಶ ಮಾಡಿಸಬೇಕು. ನೂತನವಾಗಿ ಬ್ರಾಡ್‌ಗೆಜ್ ನಿರ್ಮಾಣ ಕಾಮಗಾರಿ ಆರಂಭವಾಗಿರುವ ರಾಯದುರ್ಗ- ಪಾವಗಡ- ತುಮಕೂರು ರೇಲ್ವೆ ಮಾರ್ಗದ ಕೆಲಸ ತ್ವರಿತವಾಗಿ ನಡೆಸಬೇಕು. ಹೊಸಪೇಟೆ- ಕೊಟ್ಟೂರು- ಹರಿಹರ ನೂತನ ಬ್ರಾಡ್‌ಗೆಜ್ ಕಾಮಗಾರಿ ಪೂರ್ಣಗೊಂಡಿದ್ದು, ಹೊಸಪೇಟೆ ಬಳಿಯ ಗುಂಡಾ ಫಾರೆಸ್ಟ್ ಭಾಗದಲ್ಲಿನ ತಾಂತ್ರಿಕ ದೋಷ ಸರಿಪಡಿಸಿ ತಕ್ಷಣ ಕಾಮಗಾರಿ ಪೂರ್ಣಗೊಳಿಸಬೇಕು. ಮುನಿರಾಬಾದ್- ರಾಯಚೂರು ನೂತನ ಬ್ರಾಡ್‌ಗೇಜ್ ನಿರ್ಮಾಣಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು.
ತೋರಣಗಲ್‌ನಿಂದ ಸ್ವಾಮಿಹಳ್ಳಿವರೆಗೆ ಇರುವ ಬ್ರಾಡ್‌ಗೇಜ್ ಸೌಲಭ್ಯವನ್ನು ಕೊಟ್ಟೂರುವರೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು. ಬೆಂಗಳೂರು ರಸ್ತೆಯ ಓಬಳಾಪುರಂ ಬಳಿ, ದರೋಜಿ ಬಳಿ, ಹೊಸಪೇಟೆಯ ಅನಂತಶಯನಗುಡಿ ಬಳಿಯ ರೇಲ್ವೆ ಗೇಟ್‌ಗಳಿಂದ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಈ ಸ್ಥಳಗಳಲ್ಲಿ ಮೆಲ್ಸೆತುವೆ ನಿರ್ಮಿಸಬೇಕು. ನೈರುತ್ಯ ರೇಲ್ವೆ ವಲಯಕ್ಕೆ ಅತ್ಯಂತ ಹೆಚ್ಚಿನ ಆದಾಯ ನೀಡುವ ಬಳ್ಳಾರಿ ರೇಲ್ವೆ ಪ್ರದೇಶಗಳನ್ನು ನೈರುತ್ಯ ರೇಲ್ವೆ ವಲಯಕ್ಕೆ ಸೇರಿರುವ ಬಳ್ಳಾರಿ ಭಾಗದಲ್ಲಿ ನೂತನ ರೇಲ್ವೆ ಕೋಚ್ ಫ್ಯಾಕ್ಟರಿ ಆರಂಭಿಸಬೇಕು. ಬೋಗಿಗಳ ಕ್ಲೀನಿಂಗ್ ಯೂನಿಟ್‌ನ್ನು ದರೋಜಿಯಲ್ಲಿ ಪ್ರಾರಂಭಿಸಬೇಕು. ಬಳ್ಳಾರಿ, ಹೂಸಪೇಟೆಯಲ್ಲಿ ಪಿಟ್‌ಲೈನ್ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದರು.
ಹೊಸಪೇಟೆ- ಬಳ್ಳಾರಿ- ಬೆಂಗಳೂರು ಮಧ್ಯೆ ನೂತನ ಹಗಲಿನ ಇಂಟರ್‌ಸಿಟಿ (ಜನಶತಾಬ್ದಿ) ರೈಲನ್ನು ಪ್ರಾರಂಭಿಸಬೇಕು. ಹೊಸಪೇಟೆ- ಬಳ್ಳಾರಿ- ಚಿತ್ರದುರ್ಗ ಮಾರ್ಗವಾಗಿ ಮಂಗಳೂರು ಹಾಗೂ ಮೈಸೂರಿಗೆ ನೂತನ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು. ಈ ಹಿಂದೆ ಜಾಫರ್ ಷರಿಫ್ ಬಳ್ಳಾರಿ- ರಾಯದುರ್ಗ- ಚಿಕ್ಕಜಾಜೂರು ನೂತನ ಬ್ರಾಡ್‌ಗೇಜ್‌ನ್ನು ಸಮರ್ಪಣೆ ಮಾಡಿ ಇಂದಿಗೆ 17 ವರ್ಷಗಳಾಗಿವೆ. ಈ ಮಾರ್ಗದಲ್ಲಿ ಅರ್ಧ ಪ್ರಮಾಣದ ಎರಡು ಪ್ಯಾಸಿಂಜರ್ ರೈಲುಗಳು ಮಾತ್ರ ಸಂಚರಿಸುತ್ತವೆ. ಎಕ್ಸ್‌ಪ್ರೆಸ್ ರೈಲು ಒಡಿಸಬೇಕು. ಹೊಸಪೇಟೆ- ಬಳ್ಳಾರಿ- ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು ತಲುಪುವ ಪ್ಯಾಸಿಂಜರ್ ರೈಲು ಚಿಕ್ಕಜಾಜೂರಿನಲ್ಲಿ ಹುಬ್ಬಳ್ಳಿ ಪ್ಯಾಸಿಂಜೆರ್‌ನೊಂದಿಗೆ ಲಿಂಕ್ ಮಾಡಿ ಓಡಿಸುವ ವ್ಯವಸ್ಥೆ ರದ್ದುಮಾಡಿ, ಈ ರೈಲನ್ನು ಸ್ವತಂತ್ರವಾಗಿ ಪೂರ್ಣ ಪ್ರಮಾಣದಲ್ಲಿ ಸಂಚರಿಸುವಂತೆ ಮಾಡಬೇಕು.
ಬಳ್ಳಾರಿಯಿಂದ ಬಳ್ಳಾರಿಗೆ ವರ್ತುಲ ಎಕ್ಸ್‌ಪ್ರೆಸ್ ರೈಲು ಪ್ರಾರಂಭಿಸಬೇಕು. ಗುಂತಕಲ್- ಬಳ್ಳಾರಿ- ಗದಗ- ಸೊಲ್ಲಾಪುರ - ಗುಲ್ಬರ್ಗ- ರಾಯಚೂರು- ಗುಂತಕಲ್‌ಗೆ ಕ್ಲಾಕ್‌ವೈಸ್ ಹಾಗೂ ಆಂಟಿಕ್ಲಾಕ್‌ವೈಜ್ ಸ್ಲೀಪರ್ ಸೌಲಭ್ಯದೊಂದಿಗೆ ಫಾಸ್ಟ್ ಪ್ಯಾಸಿಂಜರ್ ರೈಲಿನ ಸೌಲಭ್ಯ ನೀಡಬೇಕು.ಕೊಟ್ಟೂರಿನಿಂದ ಹರಿಹರಕ್ಕೆ ತಲುಪುವ ರೈಲನ್ನು ಹಗರಿಬೊಮ್ಮನಹಳ್ಳಿ ಬಳಿಯ ಗುಂಡಾ ನಿಲ್ದಾಣದಿಂದ ಪ್ರಾರಂಭಿಸಿ ದಾವಣಗೆರೆಗೆ ವಿಸ್ತರಿಸಬೇಕು. ಹುಬ್ಬಳ್ಳಿ-ಬಳ್ಳಾರಿ- ಗುಂತಕಲ್ ಮಾರ್ಗವಾಗಿ ಚೈನ್ನೈಗೆ ರೇಲ್ವೆ ಒದಗಿಸಿ ಎಂದು ಕೋರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್