ಕೊಪ್ಪಳ

ಅಂಜನಾದ್ರಿ ಬೆಟ್ಟಕ್ಕೆ ವಿಶೇಷ ಕಳೆ

ಕನ್ನಡಪ್ರಭ ವಾರ್ತೆ, ಕೊಪ್ಪಳ, ಜೂ. 20
ಪ್ರಧಾನಿ ನರೇಂದ್ರ ಮೋದಿ ಅವರ ಧರ್ಮಪತ್ನಿ ಜಶೋದಾ ಬೆನ್ ಅವರು ಕೊಪ್ಪಳ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಬಂದು ಹೋದ ಮೇಲೆ ಅಲ್ಲಿಗೆ ಪ್ರವಾಸಿಗರ ಸಂಖ್ಯೆ ಗುಣಕಾರದಲ್ಲಿ ಬೆಳೆಯುತ್ತಿದೆ. ಸದಾ ಬಿಕೋ ಎನ್ನುತ್ತಿದ್ದ ಅಂಜನಾದ್ರಿ ಬೆಟ್ಟದಲ್ಲಿ ಈಗ ಸಾಲು ಸಾಲು ಪ್ರವಾಸಿಗರು ಕಾಣಸಿಗುತ್ತಾರೆ.
ಆಂಜನೇಯನ ಜನ್ಮಸ್ಥಳ ಎಂದೇ ಕರೆಯುವ ಕಿಷ್ಕಿಂಧೆ ನಾಡಿಗೆ ಮೊದಲಿನಿಂದಲೂ ಉತ್ತರ ಭಾರತದ ಪ್ರವಾಸಿಗರು ಆಗಮಿಸುತ್ತಿದ್ದರು. ಇಲ್ಲಿರುವ ಅಂಜನಾದ್ರಿ ಬೆಟ್ಟ, ಮಹಾಲಕ್ಷ್ಮೀ ದೇವಸ್ಥಾನ, ವಾಲಿ-ಸುಗ್ರೀವರ ಯುದ್ಧ ಮಾಡಿದ ಸ್ಥಳ ಸೇರಿದಂತೆ ರಾಮನಿಗಾಗಿ ಕಾದ ಶಬರಿ ಸ್ಥಳವೂ ಇಲ್ಲಿರುವುದರಿಂದ ಪ್ರವಾಸಿಗರು ಬರುತ್ತಿದ್ದರು. ಆದರೆ, ಅಷ್ಟೊಂದು ಪ್ರಮಾಣದಲ್ಲಿ ಬರುತ್ತಿರಲಿಲ್ಲ. ಹನುಮನುದಿಸಿದ ನಾಡು ಪಕ್ಕದಲ್ಲಿಯೇ ಇದ್ದರೂ ಜಿಲ್ಲೆಯ ಬಹುತೇಕರು ಇತ್ತ ಸುಳಿದಿರಲಿಲ್ಲ.
ಆದರೆ, ಈಗ ನರೇಂದ್ರ ಮೋದಿ ಅವರ ಪತ್ನಿ ಬಂದು ಹೋಗಿರುವುದು ಸ್ಥಳೀಯರ ಗಮನ ಸೆಳೆದಿದೆ. ಜತೆಗೆ ವಿವಿಧ ರಾಜ್ಯಗಳಿಂದ ಆಗಮಿಸುವವರ ಸಂಖ್ಯೆ ಹನುಮನ ಬಾಲದಂತೆ ಬೆಳೆಯುತ್ತಿದೆ.
ಅದರಲ್ಲೂ ಗುಜರಾತ್ ಮೂಲದವರೇ ಅಧಿಕ ಪ್ರಮಾಣದಲ್ಲಿ ಆಗಮಿಸುತ್ತಾರೆ. ಅವರು ಇಲ್ಲಿಯೇ ತಂಗಿ, ಒಂದೆರಡು ದಿನ ಇದ್ದು, ಸುತ್ತುಮುತ್ತಲ ಪ್ರದೇಶದಲ್ಲಿ ಇರುವ ರಾಮಾಯಣದ ಐತಿಹ್ಯಗಳನ್ನು ನೋಡಿ ಹೋಗುತ್ತಾರೆ. ಸದಾ ಹಂಪಿಗೆ ಬಂದು ಹೋಗುತ್ತಿದ್ದ ವಿದೇಶಿ ಪ್ರವಾಸಿಗರೂ ಈಗ ಪಕ್ಕದಲ್ಲಿಯೇ ಇರುವ ಅಂಜನಾದ್ರಿ ಬೆಟ್ಟಕ್ಕೂ ಭೇಟಿ ನೀಡುತ್ತಿದ್ದಾರೆ.
ಇದುವರೆಗೂ ಇರದ ಸ್ಥಳಮಹಿಮೆಯ ಅರಿವು, ಈಗ ಎಲ್ಲರಿಗೂ ಆಗಿದ್ದು, ಅಂಜನಾದ್ರಿ ಬೆಟ್ಟ ಏರಿ ವಿಶೇಷ ಪೂಜೆ ಸಲ್ಲಿಸಿದರೆ ಅಂದುಕೊಂಡ ಕೆಲಸ ಆಗುತ್ತವೆ ಎನ್ನುವ ನಂಬಿಕೆ ಹಾಗೂ ಇದೆಲ್ಲಕ್ಕಿಂತ ಮಿಗಿಲಾಗಿ ಹನುಮಾನ್ ಆಶೀರ್ವಾದ ಪಡೆದರೆ ಶಕ್ತಿ ವೃದ್ಧಿಯಾಗುತ್ತದೆ ಎಂಬ ನಂಬಿಕೆ ಬಲವಾಗಿ ಬೇರೂರಿದೆ. ಹೀಗಾಗಿ ರಾಜಕೀಯ ನಾಯಕರೂ ಬರಲಾರಂಭಿಸಿದ್ದಾರೆ. ಮೋದಿ ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಅಲ್ಲಿಯ ಅರ್ಚಕರೂ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ

ಕರಾವಳಿಯಿಲ್ಲದೆ ಕರ್ನಾಟಕವಿಲ್ಲ, ಮಂಗಳೂರು ನಮ್ಮ ರಾಜ್ಯ ಹೆಮ್ಮೆ: ಸಿಎಂ ಡಿಕೆ ಶಿವಕುಮಾರ್

ಸ್ಟಿಂಗ್ ವಿಡಿಯೋ ಕೇಸ್‌: ತನಿಖೆಯಲ್ಲಿ ಯಾರ ಬಂಧನವಾಗಿದೆ ಮಾಹಿತಿ ಇಲ್ಲ: ಡಿಕೆ ಶಿವಕುಮಾರ್