ಕೊಪ್ಪಳ: ಶಸ್ತ್ರ ಪರವಾನಿಗೆ ನವೀಕರಣಗೊಳಿಸದ ಹಿನ್ನೆಲೆಯಲ್ಲಿ 21 ಜನರ ಶಸ್ತ್ರ ಪರವಾನಿಗೆಯನ್ನು ರದ್ದುಗೊಳಿಸಿ ಕೊಪ್ಪಳ ಜಿಲ್ಲಾಧಿಕಾರಿ ಆರ್. ಆರ್ ಜಿನ್ನು ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.
ಭಾರತೀಯ ಶಸ್ತ್ರ ಕಾಯ್ದೆ 1959ರಡಿಯಲ್ಲಿ ಶಸ್ತ್ರ ಪರವಾನಿಗೆಯನ್ನು ರದ್ದು ಮಾಡಿ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿಗಳು, ಶಸ್ತ್ರ ಪರವಾನಿಗೆ ನವೀಕರಿಸದ 21 ಜನರು ಅಕ್ರಮವಾಗಿ ಇಟ್ಟುಕೊಂಡಿರುವ ಶಸ್ತ್ರಗಳನ್ನು ಸುಪರ್ದಿಗೆ ಪಡೆಯಲು ಜಿಲ್ಲಾ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಮಾಜಿ ಶಾಸಕರು, ಮಾಜಿ ಐಎಎಸ್ ಅಧಿಕಾರಿಗಳು ಶಸ್ತ್ರ ಪರವಾನಿಗೆ ನವೀಕರಣಗೊಳಿಸಿದ ಮಾಹಿತಿ ಹಿನ್ನೆಲೆಯಲ್ಲಿ ಅವರ ಪರವಾನಿಗಿಯನ್ನು ರದ್ದುಗೊಳಿಸಲಾಗಿದೆ.