ಗಂಗಾವತಿ: ಕರ್ನಾಟಕವನ್ನು ವಿಭಜಿಸುವ ಮಾತನ್ನಾಡಿರುವ ಮಾಜಿ ಸಚಿವ ಉಮೇಶ ಕತ್ತಿ ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡ ಸರ್ಕಾರನವನ್ನು ಆಗ್ರಹಿಸಿದರು.
ಅವರು ನಗರದ ಶ್ರೀ ಚನ್ನಬಸವಸ್ಮಾಮಿ ಕಲ್ಯಾಣ ಮಂಟಪದಲ್ಲಿ ಸದಸ್ಯತ್ವ ಅಭಿಯಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಗಾವಿ ಗಡಿ ವಿವಾದ ಹಾಗೇ ಮುಂದುವರಿದಿದೆ. ಈ ವೇಳೆ ಉಮೇಶ ಕತ್ತಿ ಬೆಳಗಾವಿಯನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಲು ಹೊರಟಿದ್ದಾರೆ.
ಇಂತಹ ಕೃತ್ಯಕ್ಕೆ ಕೈಹಾಕಿರುವ ಕತ್ತಿಯನ್ನು ಕೂಡಲೆ ಗಡಿಪಾರು ಮಾಡಬೇಕು. ಆರ್ಥಿಕವಾಗಿ ಮುಂದುವರಿದ ರಾಜ್ಯವನ್ನು ಒಡೆಯುವ ಸಂಚಕಾರ ನಡೆದಿದೆ. ಕೂಡಲೆ ಇಂತರಹ ವ್ಯಕ್ತಿಗಳ ವಿರುದ್ಧ ರಕ್ಷಣಾ ವೇದಿಕೆ ಸಮರ ಸಾರುತ್ತದೆ ಎಂದರು.