ಮಂಡ್ಯ

ಅಭಿವೃದ್ಧಿಗೆ ಸಹಕರಿಸಿ: ಡಿಸಿ

ಪಾಂಡವಪುರ: ಒಳಚರಂಡಿ ಯೋಜನೆಯ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ವಾಧೀನ ಪಡಿಸಿಕೊಂಡಿರುವ ಭೂಮಿಗೆ ಹೆಚ್ಚಿನ ಪರಿಹಾರ ಮೊತ್ತವನ್ನು ಕಾನೂನು ವ್ಯಾಪ್ತಿಯಲ್ಲಿ ಪಡೆದುಕೊಳ್ಳವಂತೆ ರೈತರಿಗೆ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ತಿಳಿಸಿದ್ದು, ಸದರಿ ಕಾಮಗಾರಿಗೆ ಯಾವುದೇ ಅಡಚಣೆ ಉಂಟುಮಾಡದಂತೆ ಮನವಿ ಮಾಡಿದ್ದಾರೆ.
ಬುಧವಾರ ಪಟ್ಟಣಕ್ಕೆ ಅಗಮಿಸಿದ ಅವರು, ಒಳಚರಂಡಿ ಕಾಮಗಾರಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಭೇಟಿ ನೀಡಿ ನಂತರ ಮಿನಿ ವಿಧಾನಸೌಧದ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ಅವರ ಜತೆ ಮಾತುಕತೆ ನಡೆಸಿದರು.
ಬಳಿಕ ರೈತರನ್ನುದ್ದೇಶಿಸಿ, ಈ ಹಿಂದೆ ಸರ್ಕಾರ ಒಳಚರಂಡಿ ಕಾಮಗಾರಿಗಾಗಿ ಕಾನೂನು ರೀತಿಯಲ್ಲಿ ಭೂಮಿ ಸ್ವಾಧೀನ ಪಡಿಸಿಕೊಂಡಿದೆ. ಸರ್ಕಾರ ನಿಗದಿಪಡಿಸಿದ ದರವನ್ನು ರೈತರು ಪಡೆದುಕೊಂಡು ಹೆಚ್ಚಿನ ಪರಿಹಾರ ಹಣವನ್ನು ನ್ಯಾಯಾಲಯದ ಮೂಲಕ ಪಡೆದುಕೊಳ್ಳಲು ಅವಕಾಶವಿದೆ. ಆದ್ದರಿಂದ ರೈತರು ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಕೃಷ್ಣಯ್ಯ ರೈತರಿಗೆ ಮನವರಿಕೆ ಮಾಡಿಕೊಟ್ಟರು.  
ಒಳಚರಂಡಿ ಯೋಜನೆಯ ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯಕ್ಕೆ ರೈತರು ಅಡ್ಡಿ ಪಡಿಸಬೇಡಿ. ನಿಮ್ಮ ಸಹಕಾರ ನೀಡಿ ಪಟ್ಟಣದ ಪರಿಸರ ಉಳಿವಿಗೆ ಮುಂದಾಗಬೇಕು. ಯಾವಾಗಲೂ ಅಭಿವೃದ್ಧಿ ಕೆಲಸಕ್ಕೆ ನಿಮ್ಮಗಳ ಸಹಕಾರ ಮುಖ್ಯ ಎಂದರು. ಸ್ವಾಧೀನ ಪಡಿಸಿಕೊಳ್ಳುವ ಭೂಮಿಯಲ್ಲಿ ಬೆಳೆ ಇದ್ದರೆ ಬೆಳೆ ತೆಗೆದುಕೊಂಡ ನಂತರ ಅಂತಹ ಭೂಮಿಯಲ್ಲಿ ಕಾಮಗಾರಿ ಪ್ರಾರಂಭಿಸುತ್ತೇವೆ. ಭೂಮಿಯ ಸರ್ವೆ ಕಾರ್ಯಕ್ಕೆ ಸಹಕರಿಸಬೇಕೆಂದು ತಿಳಿಸಿದರು.
3 ಲಕ್ಷ ಬಾಳುವ ಭೂಮಿಗೆ 7 ಸಾವಿರ ಥರವಲ್ಲ: ನಂತರ ರೈತ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಮಾತನಾಡಿ, ರೈತರ ಭೂಮಿಯನ್ನು 3 ವರ್ಷಗಳ ಹಿಂದೆ ಸ್ವಾಧೀನಪಡಿಸಿ ಕೊಂಡಿರುವ ಸರ್ಕಾರ ಒಂದು ಗುಂಟೆ ಭಾಗಕ್ಕೆ 7 ಸಾವಿರ ಪರಿಹಾರ ನಿಗದಿಪಡಿಸಿದೆ. ಆದರೆ ಈಗ 3 ಲಕ್ಷ ಬೆಲೆ ಬಾಳುವ ಭೂಮಿಗೆ ಕೇವಲ 7 ಸಾವಿರ ಪರಿಹಾರ ಸೂಕ್ತವಲ್ಲ. ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜತೆ ಮಾತುಕತೆ ನಡೆಸಿದ್ದೇನೆ ಎಂದು ಸಭೆಯಲ್ಲಿ ತಿಳಿಸಿದರು.
ಮಂಡ್ಯ, ಮದ್ದೂರು, ಶ್ರೀರಂಗಪಟ್ಟಣ ಹೆದ್ದಾರಿ ಕಾಮಗಾರಿಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಿದ ರೀತಿಯಲ್ಲಿ ಇಲ್ಲೂ ನೀಡಬೇಕು ಎಂದು ಮುಖ್ಯಮಂತ್ರಿಗಳ ಜತೆ ಮಾತನಾಡಿ ಸೂಕ್ತ ಪರಿಹಾರ ಕೊಡಿಸುವುದಾಗಿ ರೈತರಿಗೆ ಭರವಸೆ ನೀಡಿದರು. ಹಾಗೆ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರು ಹೇಳಿದಂತೆ ರೈತರು ಒಳಚರಂಡಿ ಯೋಜನೆಯ ಸಂಸ್ಕರಣಾ ಘಟಕ ನಿರ್ಮಾಣದ ಕಾಮಗಾರಿಗೆ ಅಡ್ಡಿ ಪಡಿಸಬೇಡಿ. ಸರ್ವೆ ಕಾರ್ಯ ನಡೆಯಲಿ. ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡಿದರು.  ನಮ್ಮ ಹೋರಾಟ ಅಭಿವೃದ್ಧಿಗೆ ಅಡ್ಡಿಪಡಿಸುವುದಕ್ಕಲ್ಲ. ರೈತರು ಭೂಮಿ ಕಳೆದುಕೊಂಡರೆ ಅವರ ಮುಂದಿನ ಜೀವನಕ್ಕೆ ತೊಂದರೆ ಆಗಲಿದೆ. ಜಿಲ್ಲಾಧಿಕಾರಿ ಹೇಳಿದಂತೆ ನ್ಯಾಯಾಲಯಕ್ಕೆ ರೈತರು ಅರ್ಜಿ ಸಲ್ಲಿಸಿ ತಮ್ಮ ಸೂಕ್ತ ಪರಿಹಾರಕ್ಕೆ ಮುಂದಾಗಿ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಮಾಧ್ಯಮ ಸಂಚಾಲಕ ಹಾಗೂ ವಕೀಲರಾದ ಎಂ.ಪುಟ್ಟೇಗೌಡ ಮಾತನಾಡಿ, ರೈತರ ಭೂಮಿ ವಶಪಡಿಸಿಕೊಂಡು ಇಲ್ಲಿಯವರೆಗೆ ಹಣ ನೀಡಿಲ್ಲ ಎಂದರು.
ಉಪ ವಿಭಾಗಾಧಿಕಾರಿ ಆರ್. ಲತಾ ತಹಸೀಲ್ದಾರ್, ಬಿ.ಸಿ. ಶಿವಾನಂದ ಮೂರ್ತಿ, ಜಲಮಂಡಳಿ, ಇ.ಇ. ರಾಜು, ರೈತ ಮುಖಂಡರಾದ ಎಲೆಕೆರೆ ಚಂದ್ರಶೇಖರ್ ಹೊಸಕೋಟೆ ರಾಮೇಗೌಡ ತಾ.ಪಂ. ಅಧ್ಯಕ್ಷ ಹೆಚ್. ಎಂ. ರಾಮಕೃಷ್ಣ ತಾ.ಪಂ. ಸದಸ್ಯ ಪುಟ್ಟೇಗೌಡ, ಬಿ.ಟಿ. ಮಂಜುನಾಥ್ ಚಿಕ್ಕಾಡೆ ದೊಡ್ಡೇಗೌಡ ಸಿ.ಎಸ್. ವಿಜೇಂದ್ರ ಮತಿತ್ತರು ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಸುಪ್ರೀಂಕೋರ್ಟ್​ಗೆ ನನ್ನ ಬಗ್ಗೆ ತಪ್ಪು ಮಾಹಿತಿ: ಸರ್ಕಾರದ ವಿರುದ್ಧ ಡಿಜಿಪಿ ಅಲೋಕ್ ಕುಮಾರ್ ಅಸಮಾಧಾನ!

ಯುವ ಜನತೆಯ ಆಕ್ರೋಶ ತಡೆಯಲು ಸಾಧ್ಯವಿಲ್ಲ, ಇಡೀ ದೇಶ ಜಂತರ್ ಮಂತರ್ ಆಗಲಿದೆ: ಪ್ರಕಾಶ್ ರಾಜ್

ಸೆಪ್ಟೆಂಬರ್‌ನಲ್ಲಿ ನಿರೀಕ್ಷೆ ಮೀರಿ ಹೆಚ್ಚಿದ ಭಾರತದ ಸಗಟು ಹಣದುಬ್ಬರ: ಶೇ.11.4ಕ್ಕೆ ಏರಿಕೆ

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!