ಮಂಡ್ಯ

ರಿಯಾಯಿತಿ ದರದಲ್ಲಿ ನಿವೇಶನ ನೀಡಲು ಆಗ್ರಹ

ಮಂಡ್ಯ: ಮಂಡ್ಯ ಕೆರೆ ಅಂಗಳದಲ್ಲಿರುವ ನಿವೇಶನವನ್ನು ನಿವೇಶನರಹಿತರಿಗೆ ರಿಯಾಯಿತಿ ದರದಲ್ಲಿ ನೀಡಬೇಕು ಎಂದು ಒತ್ತಾಯಿಸಿ ತಾಲೂಕಿನ ಚಿಕ್ಕಮಂಡ್ಯ ಗ್ರಾಮಸ್ಥರು ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಗ್ರಾಮದಿಂದ ಕಾಲ್ನಡಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಗ್ರಾಮಸ್ಥರು ಕಚೇರಿ ಎದುರು ಕೆಲಕಾಲ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಚಿಕ್ಕಮಂಡ್ಯ ಗ್ರಾಮದ ಪಕ್ಕದಲ್ಲಿದ್ದ ದೊಡ್ಡ ಕೆರೆಯನ್ನು ಮುಚ್ಚಿ ಸರ್ಕಾರ 436 ಎಕರೆ ಜಮೀನನ್ನು ನಿವೇಶನಗಳಾಗಿ ಪರಿವರ್ತಿಸಗಿದೆ. ಅದನ್ನು ಕರ್ನಾಟಕ ಹೌಸಿಂಗ್ ಬೋರ್ಡ್, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ ಸಂಸ್ಥೆಗಳಿಗೆ ಹಂಚಲು ಕೊಟ್ಟಿದೆ. ಅದೇ ರೀತಿ ಚಿಕ್ಕಮಂಡ್ಯ ಗ್ರಾಮದಲ್ಲೂ 500ಕ್ಕೂ ಹೆಚ್ಚು ವಸತಿಹೀನರಿದ್ದಾರೆ. ಅವರಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಂಡ್ಯ ದಕ್ಷಿಣದಂಚಿನ ಕೆರೆ ಅಂಗಳದ ಜಮೀನನ್ನು ನಮ್ಮ ಗ್ರಾಮಕ್ಕೆ ನೀಡಬೇಕು. ಇದರಿಂದ ಗ್ರಾಮದಲ್ಲಿರುವ 500ಕ್ಕೂ ಹೆಚ್ಚು ವಸತಿಹೀನರಿಗೆ ನಿವೇಶನ ದೊರಕಿಸಲು ಸಾಧ್ಯವಾಗುತ್ತದೆ. ಅಲ್ಲದೆ, ಕೆರೆ ಮುಚ್ಚಿರುವುದರಿಂದ ಜಾನುವಾರುಗಳನ್ನು ತೊಳೆಯಲು, ನೀರು ಕುಡಿಸಲು ಯಾವುದೇ ಕಟ್ಟೆಯಿಲ್ಲ. ಉದ್ಯಾನವನವಿಲ್ಲ. ಜಾನುವಾರುಗಳು ಮೇಯಲು ಸ್ಥಳವಿಲ್ಲ. ಮಂಡ್ಯ ಕೆರೆಯಂಗಳದಲ್ಲಿ ಜಾಗ ನೀಡಿದರೆ ಇದರ ಸಮಸ್ಯೆ ನಿವಾರಿಸಬಹುದು.
ಗ್ರಾಮದ ಬೆಳವಣಿಗೆಗೆ ಯಾವುದೇ ಜಾಗವಿಲ್ಲ. ಬೀಡಿ ಕಾರ್ಮಿಕರು ಹಾಗೂ ಇತರರಿಗೆ ಜಾಗ ನೀಡಿದಂತೆ ನಮಗೂ ರಿಯಾಯಿತಿ ದರದಲ್ಲಿ ನಿವೇಶನ ನೀಡಬೇಕು. ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.  ನಾಗರಾಜು, ಚಿಕ್ಕಬೋರ, ಪ್ರತಾಪ್, ಕಾಳೇಗೌಡ, ಸುರೇಶ, ರವಿ, ಲಕ್ಷ್ಮಣ, ಕರಿಬೋರಯ್ಯ, ಬೋರೇಗೌಡ, ಮಹಿಳೆಯರು ಸೇರಿದಂತೆ ಹಲವರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ