ಮಂಡ್ಯ

ಪುಟ್ಟಣ್ಣಯ್ಯ ಬಹಿರಂಗ ಚರ್ಚೆಗೆ ಬರಲಿ: ಶ್ರೀಕಂಠೇಗೌಡ

ಕ.ಪ್ರ.ವಾರ್ತೆ ್ಣ ಪಾಂಡವಪುರ ್ಣ ಮಾ.30
ರೈತ ನಾಯಕ ಪುಟ್ಟಣ್ಣಯ್ಯ ವೈಯಕ್ತಿಕ ಚರ್ಚೆ ಬಿಟ್ಟು ವಿಷಯಾಧಾರಿತ ಬಹಿರಂಗ ಚರ್ಚೆಗೆ ಬರಲಿ ಅದಕ್ಕೆ ಉತ್ತರ ನೀಡುತ್ತೇವೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಸವಾಲು ಹಾಕಿದ್ದಾರೆ.
ತಾಲೂಕಿನ ದೇವೇಗೌಡಕೊಪ್ಪಲು ಗ್ರಾಮಸ್ಥರು ಏರ್ಪಡಿಸಿದ್ದ ಶಾಸಕ ಸಿ.ಎಸ್.ಪುಟ್ಟರಾಜು ಅಭಿನಂದನೆ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಹೆಸರು ಹೇಳಿಕೊಂಡು ಚಳವಳಿ ರೂಪದಲ್ಲಿ ರಾಜಕೀಯ ಮಾಡುತ್ತಿರುವ ರೈತ ನಾಯಕ ಪುಟ್ಟಣ್ಣಯ್ಯ ಯಾವುದೇ ಅಭಿವೃದ್ಧಿ ಕೆಲಸ ಮಾಡದೆ ಮಾತನಾಡಿಕೊಂಡು ಕಾಲಹರಣ ಮಾಡುತ್ತಿರುವ ಇವರಿಂದ  ಜೆಡಿಎಸ್ ಪಾಠ ಕಲಿಯಬೇಕಾಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.
ಸಿ.ಎಸ್. ಪುಟ್ಟರಾಜು ಅವರು ಶಾಸಕರಾದ ಮೇಲೆ ಸಮಗ್ರ ಅಭಿವೃದ್ಧಿ ಕೆಲಸ ಮಾಡಿ ರಾಜ್ಯದಲ್ಲಿ ಗುರುತಿಸುವಂತೆ ಮಾಡಿದ್ದಾರೆ. ಅದರೆ ಈ ಹಿಂದಿನ ಶಾಸಕರು ಏಕೆ ಮಾಡಲಿಲ್ಲ. ಬಯಲು ರಂಗಮಂಟಪ ,ಕುಂತಿ ಬೆಟ್ಟದಕ್ಕೆ ಜೀವ ಕಳೆ ತುಂಬಿದ ಕೀರ್ತಿ ಶಾಸಕ ಪುಟ್ಟರಾಜುಗೆ ಸಲ್ಲುತ್ತದೆ ಎಂದು ಪ್ರತಿಪಾದಿಸಿದರು.
ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿ, ದೂರ ದೃಷ್ಟಿಯಿಂದ ಕ್ಷೇತ್ರದ ಅಭಿವೃದ್ಧಿ ಪಡಿಸಿದ ಶಾಸಕರನ್ನು ಗ್ರಾಮಸ್ಥರು ಸೇರಿ ಅಭಿನಂದಿಸಿರುವುದು ಸಾರ್ಥಕವಾಗಿದೆ ಎಂದು ನುಡಿದರು.  ರೈತ ನಾಯಕ ಪುಟ್ಟಣ್ಣಯ್ಯ ಜೆಡಿಎಸ್ ಕಾರ್ಯಕರ್ತರ ಮೇಲೆ ಅಕ್ರಮ ಮಧ್ಯ ಸಂಗ್ರಹಣೆ ಸುಳ್ಳು ಅರೋಪ ಮಾಡುವ ಮೂಲಕ  ನೀತಿಗೆಟ್ಟ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಪಿ.ಎಸ್.ಎಸ್. ಕೆ. ಕಾರ್ಖಾನೆ ಅವನತಿಗೆ ಪುಟ್ಟಣ್ಣಯ್ಯ ಮತ್ತು ನಾಗರಾಜಪ್ಪ ಅವರೇ ನೇರ ಹೊಣೆಗಾರರು ಈಗಾಗಲೇ ಕಾರ್ಖಾನೆ ಮೇಲೆ ರು. 150 ಕೋಟಿ ಸಾಲದ ಹೊರೆಯಿಂದ ಕಾರ್ಖಾನೆ ದುಸ್ಥಿತಿಗೆ ಬಂದಿದೆ ಇವರಿಂದ ಸಮಾಜಘಾತಕ ಕೆಲಸ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅರೋಪಿಸಿದರು.
ಜೆಡಿಎಸ್ ಮುಖಂಡರಾದ ತಿಮ್ಮೇಗೌಡ, ಎಂ.ಬಿ.ಶ್ರೀನಿವಾಸ್, ತಾಪಂ ಸದಸ್ಯೆಯರಾದ ಶೈಲಜಾ ಗೋವಿಂದರಾಜು, ಲಕ್ಷ್ಮಿಪಾರ್ಥಸಾರಥಿ, ಕಾಡೇನಹಳ್ಳಿ ರಾಮಚಂದ್ರು ಹಿರೇಮರಳಿ ಚನ್ನೇಗೌಡ, ಅನೇಕ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್