ಮಂಡ್ಯ: ನಗರಸಭಾ ವ್ಯಾಪ್ತಿಯಲ್ಲಿ ಮಣ್ಣಿನ ಗೌರಿ ಗಣೇಶ ಮೂರ್ತಿಗಳನ್ನು ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ನಿರ್ದಿಷ್ಟ ಸ್ಥಳಗಳಲ್ಲಿ ಮಾರಾಟ ಮಾಡುವಂತೆ ಸೂಚಿಸಲಾಗಿದೆ. ಆಗಸ್ಟ್ 28 ಮತ್ತು 29ರಂದು ಗೌರಿ, ಗಣೇಶ ಆಚರಣೆ ಪ್ರಯುಕ್ತ, ಗೌರಿ, ಗಣೇಶ ಮೂರ್ತಿಗಳನ್ನು ತಯಾರಿಸಲು ಹಾಗೂ ಮಾರಾಟ ಮಾಡಲು ಸಾರ್ವಜನಿಕ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಹಾಗೂ ನಗರಸಭೆಯಿಂದ ಕೆಲವು ಸ್ಥಳಗಳನ್ನು ನಿಗದಿಪಡಿಸಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಬರುವ ಸಂತೆ ಮಾಳ, ಕಲಾಮಂದಿರದ ಹಿಂಭಾಗ, ಗುತ್ತಲು ಮಾರುತಿ ನಗರ ಆಟೋ ಸ್ಟ್ಯಾಂಡ್ ಬಳಿ ಹಾಗೂ ಸ್ವರ್ಣಸಂದ್ರ ಆಟೋ ನಿಲ್ದಾಣದ ಬಳಿ ಇರುವ ಸ್ಥಳಗಳಲ್ಲಿ ಮಾತ್ರ ಅನುಮತಿ ಪಡೆದು ಮಣ್ಣಿನ ಮೂರ್ತಿಗಳನ್ನು ಮಾತ್ರ ಮಾರಾಟ ಮಾಡುವುದು. ತಪ್ಪಿದಲ್ಲಿ ಪೊಲೀಸ್ ಇಲಾಖೆ ವತಿಯಿಂದ ತೆರವುಗೊಳಿಸಲಾಗುವುದು.