ಕೆ.ಆರ್.ಪೇಟೆ: ತಾಲೂಕಿನ ಬೀರುವಳ್ಳಿ ಬಾಬು ರಾಜೇಂದ್ರ ಪ್ರಸಾದ್ ಸ್ಮಾರಕ ಪ್ರೌಢಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಮಕ್ಕಳಿಗೆ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು. ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಲವಕುಮಾರ್ ಮಾತನಾಡಿದರು. ವಿದ್ಯಾ ಸಂಸ್ಥೆಯ ನಿರ್ದೇಶಕ ಎಸ್.ಎಲ್. ಮಂಜೇಗೌಡ, ಮುಖ್ಯ ಶಿಕ್ಷಕ ಲಿಂಗನಾಯಕ್, ಪೂರ್ಣ ಚಂದ್ರ ವಿದ್ಯಾ ಸಂಸ್ಥೆಯ ಕಾರ್ಯ ದರ್ಶಿ ಕಾಂತರಾಜು, ಮೇಲ್ವಿಚಾರಕರಾದ ಗಿರೀಶ್, ಶೈಲಜಾ, ಶಿಕ್ಷಕ ರವಿ ಇದ್ದರು.