ಮಂಡ್ಯ

ಸಂಸತ್ನಲ್ಲಿ ಕನ್ನಡದಲ್ಲಿ ಮಾತನಾಡಿದ ಪುಟ್ಟರಾಜು

ಮಂಡ್ಯ: ಲೋಕಸಭೆ ಅಧಿವೇಶನದಲ್ಲಿ ಕನ್ನಡದ ಡಿಂಡಿಮವನ್ನು ಬಾರಿಸಿದ ಜಿಲ್ಲೆಯ ಸಂಸದ ಸಿ.ಎಸ್.ಪುಟ್ಟರಾಜು ಕಬ್ಬು ಬೆಳೆಗಾರರ ನೋವು, ಸಂಕಷ್ಟಗಳನ್ನು ಯಥಾವತ್ತಾಗಿ ವಿವರಿಸಲು ಮಾತೃಭಾಷೆ ಕನ್ನಡದಲ್ಲಿ ಮಾತನಾಡಿ ಭಾವನೆಗಳನ್ನು ಹಂಚಿಕೊಂಡರು. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಹಿತಕಾಯಲು ವಿಫಲವಾಗಿದೆ. ರಾಜ್ಯದಲ್ಲಿ ಅದರಲ್ಲೂ ಮಂಡ್ಯ ಪ್ರಾಂತ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕೇಳುವವರಿಲ್ಲ. ಕೇಂದ್ರ ಸರ್ಕಾರ ಕೂಡ ಜಾಣ ಮೌನಕ್ಕೆ ಜಾರುತ್ತಿದೆ. ಇದನ್ನು ಸಹಿಸುವುದು ಕಷ್ಟ ಸಾಧ್ಯ ಎಂದು ಸಂಸದ ಪುಟ್ಟರಾಜು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ಹೇಳಿದರು. ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಕಬ್ಬು ಬೆಳೆಗಾರರ ಸಮಸ್ಯೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರದ ಪಾತ್ರದಷ್ಟೆ ಕೇಂದ್ರ ಸರ್ಕಾರದ ಪಾತ್ರವೂ ಇದೆ. ಯಾವುದೇ ಮೀನಮೇಷ ಎಣಿಸದೇ ರೈತರ ಹಿತ ಕಾಪಾಡಿ ಎಂದು ಕೇಂದ್ರವನ್ನು ಒತ್ತಾಯಿಸಿರುವುದಾಗಿ ಹೇಳಿದರು. ಮೊದಲ ಬಾರಿಗೆ ಲೋಕಸಭೆಯಲ್ಲಿ ಜೆ.ಎಚ್. ಪಟೇಲರು ಕನ್ನಡದಲ್ಲಿ ಮಾತನಾಡಿ ಭಾಷಾಭಿಮಾನವನ್ನು ಮೆರೆದಿದ್ದರು. ಮಾತೃಭಾಷೆ ಕನ್ನಡದಲ್ಲಿ ಹೇಳಿರುವುದು ಸರ್ಕಾರದ ಕಿವಿಗೆತಾಗುತ್ತದೆ ಎಂಬ ವಿಶ್ವಾಸದಿಂದಲೇ ಮಾತನಾಡಿರುವುದಾಗಿ ಅವರು  ವಿವರಿಸಿದರು.
ಸಂಸದ, ಶಾಸಕರ ಗೈರು
ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಿಸುವ ಸಮಾರಂಭದಲ್ಲಿ ಮಂಡ್ಯ ಸಂಸದ ಸಿ.ಎಸ್. ಪುಟ್ಟರಾಜು ಮತ್ತು ಶಾಸಕರಾದ ಚಲುವರಾಯಸ್ವಾಮಿ, ನಾರಾಯಣಗೌಡ ಗೈರು ಹಾಜರಾಗಿದ್ದರು. ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಸಿ.ಎಸ್. ಪುಟ್ಟರಾಜು ಮತ್ತು ಚಲುವರಾಯಸ್ವಾಮಿ ಮುಖ್ಯಮಂತ್ರಿಗಳು ಬಾಗಿನ ಸಮರ್ಪಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಆದರೆ, ಈ ಬಾರಿ ಅವರ  ಗೈರು ಹಾಜರಿ ಎದ್ದು ಕಾಣುತ್ತಿತ್ತು.
ಎಸ್ಬಿಎಂಗೆ ದಂಡ
ಮಂಡ್ಯ: ಗ್ರಾಹಕರಿಗೆ ಸೇವಾ ನ್ಯೂನತೆ ಉಂಟು ಮಾಡಿದ್ದರ ಜೊತೆಗೆ ಸಿಬ್ಬಂದಿ ಅನುಚಿತವಾಗಿ ವರ್ತಿಸಿದ್ದ ಕಾರಣ ಸ್ಟೇಟ್ಬ್ಯಾಂಕ್ ಆಫ್ ಮೈಸೂರು ಶಾಖೆಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ದಂಡ ವಿಧಿಸಿ ಆದೇಶ ನೀಡಿದೆ. ಮದ್ದೂರಿನ ಎಚ್.ಟಿ. ಮಮತಾ ಎಂಬುವರಿಗೆ ಎಸ್ಬಿಎಂನ ಮದ್ದೂರು ಶಾಖೆ ಸೇವಾ ನ್ಯೂನತೆ ಉಂಟು ಮಾಡಿದ್ದರಿಂದ ಪಿರ್ಯಾದುದಾರರಿಗೆ 5 ಸಾವಿರ ಪರಿಹಾರ ಹಾಗೂ 2 ಸಾವಿರ ಪ್ರಕರಣದ ಖರ್ಚನ್ನು ಪಾವತಿಸುವಂತೆ ಆದೇಶ ಹೊರಡಿಸಿದೆ. ಅರ್ಜಿದಾರರಾದ ಎಚ್.ಟಿ. ಮಮತಾ ಅವರು ಸರ್ಕಾರಿ ನೌಕರರಾಗಿದ್ದಾರೆ. ಅವರಿಗೆ ಸಂಬಂಧಿಸಿದಂತೆ ವೇತನ ಎಸ್ಬಿಎಂ ಮದ್ದೂರು ಶಾಖೆಯ ಉಳಿತಾಯ ಖಾತೆಗೆ ಜಮಾ ಆಗುತ್ತಿತ್ತು. 2014ರ ಫೆಬ್ರವರಿ 7ರಂದು ಮಮತಾ ಅವರು ಎಟಿಎಂ ಕೇಂದ್ರಕ್ಕೆ ತೆರಳಿ ತಮ್ಮ ಖಾತೆಯಲ್ಲಿದ್ದ 11,429 ರು.ಪೈಕಿ 10 ಸಾವಿರ ಹಣವನ್ನು ಪಡೆಯಲು ಯತ್ನಿಸಿದರು. ಆದರೆ ಯಂತ್ರದಲ್ಲಿನ ತಾಂತ್ರಿಕ ತೊಂದರೆ ಕಾರಣ ಹಣ ಬರಲಿಲ್ಲ. ನಂತರ ಮಾರನೇ ದಿನ ಬ್ಯಾಂಕಿಗೆ ತೆರಳಿ ಧನಾದೇಶ ಪಡೆಯಲು ಯತ್ನಿಸಿದಾಗ ಬ್ಯಾಂಕಿನ ಸಿಬ್ಬಂದಿ ಅರ್ಜಿದಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅರ್ಜಿದಾರರ ಪರವಾಗಿ ವಕೀಲ ಆರ್. ಜಗನ್ನಾಥ್ ವಾದಿಸಿದ್ದರು.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

SCROLL FOR NEXT