ಮಂಡ್ಯ

ಕಸ ವಿಲೇವಾರಿ: ಶೀಘ್ರ ಪರಿಹಾರ

ಮಂಡ್ಯ: ನಗರ ಪ್ರದೇಶದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಸಂಬಂಧ ಜಿಲ್ಲಾಧಿಕಾರಿ ಡಾ.ಅಜಯ್ ನಾಗಭೂಷಣ್ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
 ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಗರಸಭೆ ನಗರ ಪ್ರದೇಶಗಳಲ್ಲಿ ಸವಾಲಾಗಿರುವ ಕಸ ನಿರ್ವಹಣೆ ಸಮಸ್ಯೆಗೆ ವಿನೂತನ ಕ್ರಮದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲು ಚಿಂತನೆ ನಡೆಸಿರುವ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದ ಪರಿಸರ ವಿಭಾಗದ ಸಹಯೋಗದಲ್ಲಿ ಶೀಘ್ರದಲ್ಲಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
 ಮಂಡ್ಯ ನಗರವನ್ನು ಕಸ ಮುಕ್ತ ನಗರ ಮಾಡುವುದು ನಮ್ಮೆಲ್ಲರ ಪ್ರಮುಖ ಸವಾಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಈ ಗುರಿ ಸಾಧ್ಯವಾಗಬೇಕು ಎಂಬುದು ನಮ್ಮ ಉದ್ದೇಶ. ಕಸವನ್ನು ಮನೆಯ ಹಂತದಲ್ಲಿಯೇ ಪ್ರತ್ಯೇಕಿಸಿ ನಿರ್ವಹಣೆ ಮಾಡುವ ಮೂಲಕ ಸ್ವಚ್ಛನಗರದ ಕನಸು ನನಸು ಮಾಡಬಹುದು. ಸಾರ್ವಜನಿಕರ ಸಹಭಾಗಿತ್ವ ಅಗತ್ಯ ಎಂದು ನಗರಸಭೆ ಅಧ್ಯಕ್ಷ ಸಿದ್ದರಾಜು ಹೇಳಿದರು.
ಯಶಸ್ವಿ ಅನುಷ್ಠಾನ: ಕಸವನ್ನು ಪ್ರತ್ಯೇಕಿಸಿ, ಸಮರ್ಪಕವಾಗಿ ನಿರ್ವಹಣೆ ಮಾಡುವ ಕಾರ್ಯಕ್ರಮ ಕೋಲಾರ ನಗರದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. ಮಂಡ್ಯ ನಗರದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ನಗರದ ಸ್ವಚ್ಛತೆ ಕಾಪಾಡಬಹುದು ಎಂದು ಪೌರಾಡಳಿತ ನಿರ್ದೇಶನಾಲಯದ ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ ಪ್ರಕಾಶ್ ವಿವರಣೆ ನೀಡಿದರು. ಒಣ ಕಸ, ಹಸಿ ಕಸ ಹಾಗೂ ಪ್ಲಾಸ್ಟಿಕ್‌ಗಳನ್ನು ಈಗ ಒಟ್ಟಿಗೆ ಹಾಕಲಾಗುತ್ತಿದೆ. ಹಸಿ ಕಸವನ್ನು ಗೊಬ್ಬರವಾಗಿ ಮಾರ್ಪಡಿಸಬಹುದು. ಕಾಗದ, ಪಾಸ್ಟಿಕ್ ಮುಂತಾದ ಒಣ ಕಸವನ್ನು ಪುನರ್ ಸಂಸ್ಕರಣೆ ಮಾಡಿ ಮಾಡಬಹುದು.
ಇದರಿಂದ ಜಾಗದ ಸಮಸ್ಯೆಯೂ ಇರುವುದಿಲ್ಲ. ಹಸಿ ಕಸದಿಂದ ಮಾಡಿದ ಗೊಬ್ಬರದಿಂದ ಆದಾಯವೂ ಬರಲಿದೆ ಎಂದು ಹೇಳಿದರು.
ಸ್ಮಾರ್ಟ್ ಕಾರ್ಡ್: ಪ್ರತಿ ಮನೆಗೂ ಒಂದೊಂದು ಸ್ಮಾರ್ಟ್ ಕಾರ್ಡ್  ಕೊಡುತ್ತೇವೆ. ಮೇಲ್ವಿಚಾರಕರು ಪ್ರತಿ ದಿನ ಹೋಗಿ ಅದರ ಮೇಲೆ ಸಹಿ ಮಾಡುತ್ತಾರೆ. ಕಸ ಪ್ರತ್ಯೇಕಿಸುವಲ್ಲಿ ಅತ್ಯುತ್ತಮ ಹವ್ಯಾಸ ಬೆಳೆಸಿಕೊಂಡವರಿಗೆ ಬಹುಮಾನ ಸಹ ನೀಡಲಾಗುತ್ತದೆ. ಈ ವಿನೂತನ ಕ್ರಮಕ್ಕೆ ವಿದ್ಯಾರ್ಥಿಗಳು, ಸ್ವಯಂ ಸಂಸ್ಥೆಗಳು, ಸಾರ್ವಜನಿಕರು, ಹೋಟೆಲ್ ಮಾಲೀಕರು, ಮಹಿಳೆಯರಿಗೆ ಪ್ರತ್ಯೇಕವಾಗಿ ತರಬೇತಿ ನೀಡಲಾಗುತ್ತದೆ.
30-35 ಲಕ್ಷ: ಮಂಡ್ಯ ನಗರಕ್ಕೆ ಸಂಬಂಧಿಸಿದಂತೆ, ಕಸವನ್ನು ಪತ್ಯೇಕಿಸಿ ನಿರ್ವಹಣೆ ಮಾಡುವ ಈ ವಿನೂತನ ಕಾರ್ಯಕ್ರಮಕ್ಕೆ ಅಂದಾಜು 30 ರಿಂದ 35 ಲಕ್ಷ ರು.ಗಳ ಅವಶ್ಯಕತೆ ಇದೆ. ಸರ್ಕಾರ ಇದನ್ನು ನೀಡಲಿದೆ ಎಂದು ಹೇಳಿದರು. ಹೊಸ ಕಾರ್ಯಾಚರಣೆಯನ್ನು ಆರಂಭಿಸುವ ಮುನ್ನ ಸೂಕ್ತ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಅಗತ್ಯ ಪರಿಕರಗಳನ್ನು ಹೊಂದಿಸಿಕೊಂಡು ಕಾರ್ಯಾಚರಣೆ ಆರಂಭಿಸೋಣ. ಪೂರ್ವ ಸಿದ್ಧತೆಗಾಗಿ ಮತ್ತೊಂದು ಸಭೆ ಸೇರೋಣ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನಗರಸಭೆ ಉಪಾಧ್ಯಕ್ಷ ಚಂದ್ರಕಲಾ ಶಿವರಾಮು, ನಗರಾಭಿವೃದ್ಧಿ ಕೋಶದಯೋಜನಾ ನಿರ್ದೇಶಕ ಇ.ವಿ.ವೆಂಕಟರವಣ ರೆಡ್ಡಿ, ಪೌರಾಯುಕ್ತ ಎನ್.ಎಂ.ಶಶಿಕುಮಾರ್, ಸದಸ್ಯರು ಉಪಸ್ಥಿತರಿದ್ದರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ 'ಏಕಸ್ವಾಮ್ಯ' ಆರೋಪಕ್ಕೆ Reliance ತಿರುಗೇಟು..!'

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಶತ್ರುತ್ವ ತೀವ್ರ ಕಳವಳಕಾರಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ ಅಸಮಾಧಾನ..!

ಡಿಕೆಶಿ ಸಿಎಂ ವಿಚಾರ ಪ್ರಶ್ನಿಸಲು ನೀವು ಯಾರು? ಕಾಂಗ್ರೆಸ್ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮ ಕೆಲಸ ನೋಡಿಕೊಳ್ಳಿ: HDKಗೆ ಸಚಿವ ಚಲುವರಾಯಸ್ವಾಮಿ ತಿರುಗೇಟು

729 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಕಬ್ಬು ಬೆಳೆಗಾರರೇ ತಾಳ್ಮೆಯಿಂದಿರಿ, ಸಮಸ್ಯೆ ಬಗೆಹರಿಸುವೆ: ಸಿಎಂ ಡಿಕೆ ಶಿವಕುಮಾರ್ ಭರವಸೆ